ಕಳಂಕಿತ ಐಎಎಸ್ ಅಧಿಕಾರಿ ಬನ್ಸಾಲ್ ನೇಣಿಗೆ ಶರಣು

Posted By:
Subscribe to Oneindia Kannada

ನವದೆಹಲಿ, ಸೆ. 27: ಕಾರ್ಪೋರೇಟ್ ವ್ಯವಹಾರಗಳ ಮಹಾ ನಿರ್ದೇಶಕರಾಗಿದ್ದ ಭ್ರಷ್ಟಾಚಾರ ಕಳಂಕಿತ ಅಧಿಕಾರಿ ಬಿಕೆ ಬನ್ಸಾಲ್ ಅವರು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬನ್ಸಾಲ್ ಹಾಗೂ ಅವರ ಪುತ್ರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿಂದೆ ಬನ್ಸಾಲ್ ಅವರ ಪತ್ನಿ ಹಾಗೂ ಪುತ್ರಿ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.


ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಕಾರ್ಪೋರೇಟ್ ವ್ಯವಹಾರಗಳ ಮಹಾ ನಿರ್ದೇಶಕ ಬಿ.ಕೆ. ಬನ್ಸಲ್ ಅವರ ಪತ್ನಿ ಹಾಗೂ ಪುತ್ರಿ ಮೃತ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಮಧು ವಿಹಾರ್ ನಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಈ ದುರ್ಘಟನೆಯ ಬಳಿಕ ಈಗ ಬನ್ಸಾಲ್ ಹಾಗೂ ಅವರ ಪುತ್ರ ಸಾವನ್ನಪ್ಪಿದ್ದಾರೆ. [ಬನ್ಸಾಲ್ ಪತ್ನಿ ಹಾಗೂ ಪುತ್ರಿ ಆತ್ಮಹತ್ಯೆ]

Former bureaucrat BK Bansal commits suicide in Delhi

ಲಂಚ ಪ್ರಕರಣದಲ್ಲಿ ಸಿಲುಕಿರುವ ಬನ್ಸಲ್ ಅವರನ್ನು ಜುಲೈ 16 ರಂದು ಸಿಬಿಐ ತಂಡ ಬಂಧಿಸಿತ್ತು. ಕಾರ್ಪೋರೇಟ್ ಸಚಿವಾಲಯದ ಮಹಾನಿರ್ದೇಶಕ ಹುದ್ದೆಯಲ್ಲಿರುವ ಬನ್ಸಲ್ ಅವರು ಮಧ್ಯವರ್ತಿ ವಿಶ್ವದೀಪ್ ಬನ್ಸಲ್ ಮೂಲಕ ಲಂಚ ಪಡೆದು ಖಾಸಗಿ ವಲಯದ ಉದ್ದಿಮೆ ನೆರವು ನೀಡಿದ ಆರೋಪ ಹೊಂದಿದ್ದಾರೆ.

ಬನ್ಸಲ್ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. 9 ಲಕ್ಷ ರು ಲಂಚ ಪಡೆಯುವಾಗ ವಿಶ್ವದೀಪ್ ಹಾಗೂ ಬನ್ಸಲ್ ರನ್ ರೆಡ್ ಹ್ಯಾಂಡ್ ಆಗಿ ಸಿಬಿಐ ತಂಡ ಹಿಡಿದಿತ್ತು. ಆದರೆ, ಮುಂಬೈ ಮೂಲದ ಔಷಧ ಕಂಪನಿ ವಿಷಯಕ್ಕೆ ಸಂಬಂಧಿಸಿದಂತೆ 50 ಲಕ್ಷ ರೂ ಗಳಿಗೂ ಅಧಿಕ ಮೊತ್ತವನ್ನು ಬನ್ಸಲ್ ಡಿಮ್ಯಾಂಡ್ ಮಾಡಿದ್ದರು ಎಂಬ ಸುದ್ದಿಯಿದೆ.(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former bureaucrat BK Bansal, who was arrested in a graft case, commits suicide along with his son in his residence in Madhu Vihar (Delhi). Bansal's wife and daughter had committed suicide when he was arrested by the CBI in July 2016.
Please Wait while comments are loading...