• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪದ್ಮವಿಭೂಷಣ ಸೋಲಿ ಸೊರಾಬ್ಜಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

|

ನವದೆಹಲಿ, ಏಪ್ರಿಲ್ 30: ನಿವೃತ್ತ ಅಟರ್ನಿ ಜನರಲ್ ಸೋಲಿ ಸೊರಾಬ್ಜಿ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 91ವಯಸ್ಸಾಗಿತ್ತು.

ಪದ್ಮವಿಭೂಷಣ ಪುರಸ್ಕೃತರಾಗಿದ್ದ ಹಿರಿಯ ವಕೀಲರಾಗಿದ್ದ ಸೋಲಿ ಸೊರಾಬ್ಜಿ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ 19 ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಭಾರತದಲ್ಲಿ ಹೊಸದಾಗಿ 3.80 ಲಕ್ಷ ಕೊರೊನಾ ಸೋಂಕಿತರು ಪತ್ತೆ, 3498 ಮಂದಿ ಸಾವು ಭಾರತದಲ್ಲಿ ಹೊಸದಾಗಿ 3.80 ಲಕ್ಷ ಕೊರೊನಾ ಸೋಂಕಿತರು ಪತ್ತೆ, 3498 ಮಂದಿ ಸಾವು

19030ರಲ್ಲಿ ಮುಂಬೈನಲ್ಲಿ ಜನಿಸಿದ ಸೋಲಿ ಜಹಾಂಗೀರ್ ಸೊರಾಬ್ಜಿ ಅವರು 1953ರಲ್ಲಿ ಬಾಂಬೆ ಹೈಕೋರ್ಟ್ ವಕೀಲರಾಗಿ ವೃತ್ತಿ ಆರಂಭಿಸಿದರು. 1971ರಲ್ಲಿ ಸುಪ್ರೀಂಕೋರ್ಟ್ ಹಿರಿಯ ಕೌನ್ಸೆಲ್ ಆಗಿದ್ದರು. 1988 ರಿಂದ 2004ರ ಅವಧಿಯಲ್ಲಿ ಅಟರ್ನಿ ಜನರಲ್ ಆಗಿದ್ದರು.

ಮಾನವ ಹಕ್ಕುಗಳ ಹೋರಾಟ ಪರ ವಕೀಲರಾಗಿದ್ದ ಸೊರಾಬ್ಜಿ 1997ರಲ್ಲಿ ವಿಶ್ವಸಂಸ್ಥೆಯಿಂದ ನೈಜೀರಿಯಾದ ವಿಶೇಷ ಪ್ರತಿನಿಧಿಯಾಗಿದ್ದರು.

ವಿಶ್ವಸಂಸ್ಥೆಯ ಅಲ್ಪಸಂಖ್ಯಾತ ಆಯೋಗ, ಮಾನವ ಹಕ್ಕುಗಳ ಉಪ ಸಮಿತಿ ಚೇರ್ಮನ್ ಆಗಿದ್ದರು. ವಿಶ್ವಸಂಸ್ಥೆಯ ವಿಶ್ವ ನ್ಯಾಯಾಲಯದ ಸದಸ್ಯರಾಗಿದ್ದರು.

2002ರಲ್ಲಿ ಭಾರತೀಯ ಸಂವಿಧಾನದ ತಿದ್ದುಪಡಿ ಆಯೋಗದ ಸದಸ್ಯರಾಗಿದ್ದರು. ಜಾಝ್ ಸಂಗೀತಪ್ರಿಯರಾಗಿದ್ದ ಸೋಲಿ ಲೇಖಕರಾಗಿ ಕೂಡಾ ಗಮನ ಸೆಳೆದಿದ್ದರು.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಲಿ ಸೊರಾಬ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಟ್ವೀಟ್‌ನಲ್ಲಿ ಮೋದಿ ಅವರು: ''ಶ್ರೀ ಸೋಲಿ ಸೊರಾಬ್ಜಿ ಅವರು ಅತ್ಯುತ್ತಮ ವಕೀಲ ಮತ್ತು ಬುದ್ಧಿಜೀವಿಯಾಗಿದ್ದರು. ಕಾನೂನಿನ ಮೂಲಕ ಅವರು ಬಡವರು ಮತ್ತು ವಂಚಿತರಿಗೆ ನೆರವಾಗಲು ಮುಂದಾಗುತ್ತಿದ್ದರು. ಅವರು ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದು ಸದಾ ಸ್ಮರಣೆಯಲ್ಲಿರುತ್ತದೆ ಎಂಬುದು ಉಲ್ಲೇಖನಾರ್ಹ. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ.'' ಎಂದು ತಿಳಿಸಿದ್ದಾರೆ.

English summary
Former Attorney General Soli Sorabjee passed away on Friday morning due to COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X