ಇಂದು ಸಂಜೆ 4ಕ್ಕೆ ನಿರ್ಮಲಾ ಸೀತಾರಾಮನ್ 2ನೇ ಸುದ್ದಿಗೋಷ್ಠಿ
ದೆಹಲಿ, ಮೇ 14: ಕೇಂದ್ರ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಜೆ 4 ಗಂಟೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಎರಡನೇ ಹಂತ ಯೋಜನೆಗಳನ್ನು ಪ್ರಕಟಿಸುವ ಉದ್ದೇಶದಿಂದ ನಿರ್ಮಲಾ ಅವರು ಇಂದು ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದಾರೆ.
Finance Minister Smt. @nsitharaman will address a Press Conference today, 14th May 2020, at 4 PM in New Delhi.#EconomicPackage#AatmanirbharBharat #AatmaNirbharBharatAbhiyan #IndiaFightsCorona pic.twitter.com/mTEISUNFGQ
— Ministry of Finance 🇮🇳 #StayHome #StaySafe (@FinMinIndia) May 14, 2020
ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 20 ಲಕ್ಷ ಕೋಟಿ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಮೊದಲ ಹಂತದ ಯೋಜನೆಗಳನ್ನು ಘೋಷಣೆ ಮಾಡಿದ್ದರು.
ಮೋದಿ ಘೋಷಣೆ ಮಾಡಿರುವ ಈ ಪ್ಯಾಕೇಜ್ ಆರ್ಥಿಕವಾಗಿ ಚೈತನ್ಯ ತುಂಬಲಿದೆ ಮತ್ತು ವಿವಿಧ ಕ್ಷೇತ್ರಗಳಿಗೆ ನೆರವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
* ಎಂ.ಎಸ್.ಎಂ.ಇ ಗಳಿಗೆ (ಅತಿ ಸಣ್ಣ, ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆ) ಸಂಬಂಧಿಸಿದಂತೆ 6 ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. 3 ಲಕ್ಷ ಬ್ಯಾಂಕ್ ಸಾಲ, ಸಾಲ ಮರುಪಾವಾತಿಗೆ 4 ವರ್ಷ ಕಾಲಾವಕಾಶ, ಗ್ಲೋಬಲ್ ಟೆಂಟರ್‌ನಲ್ಲಿ ಸಣ್ಣ ಕೈಗಾರಿಕೆಗಳಿಗೆ ಆಧ್ಯತೆ ನೀಡುವುದು.
* ನೌಕರರು ಮತ್ತು ಉದ್ಯಮಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 2500 ಕೋಟಿ ಇ.ಪಿ.ಎಫ್ ಸಪೋರ್ಟ್.
* ಐಟಿ ರಿಟರ್ನ್ಸ್ ಸಲ್ಲಿಕೆಗೆ ನವೆಂಬರ್ 30, 2020 ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ.
* ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 45 ಸಾವಿರ ಕೋಟಿ ರೂಪಾಯಿ ಸಾಲ.
* ಜನ್ ಧನ್ ಅಕೌಂಟ್ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮುಂದಿನ ಮೂರು ತಿಂಗಳ ಕಾಲ, ಪ್ರತಿ ತಿಂಗಳು 500 ರೂಪಾಯಿ ಸಿಗಲಿದೆ.
* ಮುಂದಿನ ಮೂರು ತಿಂಗಳು 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಿಗಲಿದೆ.