• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

16 ರಾಜ್ಯಗಳಲ್ಲಿ ಭಾರೀ ಮಳೆಯ ಭಯ: ದೆಹಲಿಯ ವಾಯುಮಾಲಿನ್ಯ ಸುಧಾರಣೆ

|
Google Oneindia Kannada News

ನವದೆಹಲಿ ಜನವರಿ11: ಎಡೆಬಿಡದೆ ಸುರಿಯುತ್ತಿರುವ ಮಳೆ ಉತ್ತರ ಭಾರತದಲ್ಲಿ ಚಳಿ ಹೆಚ್ಚಿಸಿದೆ. ಕೊರೆಯುವ ಚಳಿಯಿಂದ ಜನರು ತೀವ್ರ ತೊಂದರೆಗೀಡಾಗಿದ್ದರೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪಾದರಸ 5 ಡಿಗ್ರಿ ತಲುಪಿದೆ. ಆದರೆ ದೆಹಲಿಯಲ್ಲಿ ಹಲವೆಡೆ ಸುರಿಯುತ್ತಿರುವ ಮಳೆಯಿಂದಾಗಿ ಮಾಲಿನ್ಯ ಪ್ರಮಾಣ ಕೊನೆಗೂ ತಗ್ಗಿದೆ. ಇಂದು ರಾಜಧಾನಿಯಲ್ಲಿ ವಾಯುಮಾಲಿನ್ಯ ಸೂಚ್ಯಂಕ 93ರಷ್ಟಿದೆ. ಇದು ತೃಪ್ತಿದಾಯಕ ವಿಭಾಗದಲ್ಲಿ ಬರುತ್ತದೆ. ಮುಂದಿನ ನಾಲ್ಕು ದಿನಗಳಲ್ಲಿ 16 ರಾಜ್ಯಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ದೆಹಲಿಯ ಜನ ಇದೀಗ ಚಳಿಯಿಂದ ನಡುಗುತ್ತಿದ್ದಾರೆ. ಸತತ ಮೂರು ದಿನಗಳ ಮಳೆಯ ನಂತರ ನಿನ್ನೆ ರಾತ್ರಿ ದೆಹಲಿಯಲ್ಲಿ ಕನಿಷ್ಠ ತಾಪಮಾನ ನಾಲ್ಕು ಡಿಗ್ರಿ ದಾಖಲಾಗಿದೆ. ಪಶ್ಚಿಮದಲ್ಲಿ ಹಠಾತ್ ಹವಮಾನ ಬದಲಾವಣೆಯಿಂದಾಗಿ ಉತ್ತರ ಭಾರತದಲ್ಲಿ ಮಳೆಯಾಗುತ್ತಿದೆ. ಆದರೆ ಈಗ ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳಲ್ಲಿ ದೆಹಲಿ ಸೇರಿದಂತೆ 16 ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಮಳೆಯಾಗುವ ಸಾಧ್ಯತೆ

ಮಳೆಯಾಗುವ ಸಾಧ್ಯತೆ

ಜನವರಿ 14 ರವರೆಗೆ, ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಕಾಶ್ಮೀರ, ಲಡಾಖ್ ಮತ್ತು ಈಶಾನ್ಯದ ಎಲ್ಲಾ ರಾಜ್ಯಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ ಚಳಿ ಹೆಚ್ಚಾಗಲಿದೆ. ಕಳೆದ ಕೆಲ ವಾರಗಳಿಂದ ಮೈಕೊರೆಯುವ ಚಳಿ ಮಂಜು ಕವಿದ ವಾತಾವರಣದಿಂದ ಜನ ಮನೆ ಬಿಟ್ಟು ಹೊರಬಾರದ ಪರಿಸ್ಥಿತಿ ಇದೆ.

ಹಿಮದಂತಾದ ಪರ್ವತಗಳು

ಹಿಮದಂತಾದ ಪರ್ವತಗಳು

ಬಯಲು ಪ್ರದೇಶದಲ್ಲಿ ಹೆಚ್ಚುತ್ತಿರುವ ಹಿಮಪಾತದಿಂದಾಗಿ ಪರ್ವತಗಳ ಮೇಲಿನ ಹಿಮಗಟ್ಟುವಿಕೆ ಹೆಚ್ಚಾಗಿದೆ. ಈ ಸಮಯದಲ್ಲಿ ಪರ್ವತಗಳ ಮೇಲೆ ಮಾತ್ರ ಹಿಮವಿದೆ, ಜನರು ಮನೆಯಿಂದ ಹೊರಬರಲು ಕಷ್ಟವಾಗುತ್ತಿದೆ. ಹಿಮಾಚಲ, ಕಾಶ್ಮೀರ ಮತ್ತು ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಪಾದರಸವು ಶೂನ್ಯಕ್ಕಿಂತ ಕಡಿಮೆಯಾಗಿದೆ.

ಸಂಚಾರಕ್ಕೆ ಅಡ್ಡಿ

ಸಂಚಾರಕ್ಕೆ ಅಡ್ಡಿ

ಶಿಮ್ಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಮಪಾತದಿಂದಾಗಿ ರಸ್ತೆಗಳು ಜಾಮ್ ಆಗಿವೆ. ವಾಹನಗಳು ರಸ್ತೆಗಳಲ್ಲಿ ಸಾಗಲು ಸಾಧ್ಯವಾಗದಷ್ಟು ಹಿಮಪಾತವಾಗುತ್ತಿದೆ. ಆದ್ದರಿಂದ ವಾಹನಗಳನ್ನು ಚೈನ್‌ಗಳಿಂದ ಓಡಿಸಲಾಗುತ್ತಿದೆ. ಗಂಗೋತ್ರಿ, ಬದರಿನಾಥ್ ಮತ್ತು ಕೇದಾರನಾಥ ಕ್ಷೇತ್ರಗಳು ಪ್ರಸ್ತುತ ಹಿಮದ ಬಿಳಿ ಹೊದಿಕೆಯಿಂದ ಆವೃತವಾಗಿವೆ. ಜನ ಸಂಚಾರಕ್ಕೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

  ಫಸ್ಟ್ ಟೈಂ ಮಾನವನಿಗೆ ಹಂದಿ ಹೃದಯ ಅಳವಡಿಸಿ ಇತಿಹಾಸ ಬರೆದ ವೈದ್ಯರು | Oneindia Kannada
  ದೆಹಲಿಯಲ್ಲಿ ವಾಯುಮಾಲಿನ್ಯ ಕುಸಿತ

  ದೆಹಲಿಯಲ್ಲಿ ವಾಯುಮಾಲಿನ್ಯ ಕುಸಿತ

  ಪುಸಾ, ದೆಹಲಿ - ವಾಯುಮಾಲಿನ್ಯ ಸೂಚ್ಯಾಂಕ 129 (AQI)ರಷ್ಟಿದ್ದು ತೃಪ್ತಿಕರವಾಗಿದೆ.

  ಪಂಜಾಬಿ ಬಾಗ್ - 189 AQI ಮಧ್ಯಮವಾಗಿದೆ.

  ಶಾದಿಪುರ್, ದೆಹಲಿ - 87 AQI ತೃಪ್ತಿಕರವಾಗಿದೆ

  ದೆಹಲಿ ಮಿಲ್ಕ್ ಸ್ಕೀಮ್ ಕಾಲೋನಿ - 56 AQI ತೃಪ್ತಿಕರವಾಗಿದೆ

  ಅಶೋಕ್ ವಿಹಾರ್ ದೆಹಲಿ 98 AQI ತೃಪ್ತಿಕರವಾಗಿದೆ

  NSIT ದ್ವಾರಕಾ, 59 AQI ತೃಪ್ತಿಕರವಾಗಿದೆ

  ಲೋಧಿ ರಸ್ತೆ, 67 AQI ತೃಪ್ತಿಕರವಾಗಿದೆ

  ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

  English summary
  The steady rainfall has increased the cold in northern India. If people are severely disturbed by the drizzle. In many states of northern India, mercury has reached 5 degrees.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X