'ನನ್ನ ಮಗ ಮುಗ್ಧ' ಎನ್ನುತ್ತ ಕಣ್ಣೀರಿಟ್ಟ ಉಗ್ರ ಖುರೇಶಿ ತಂದೆ!

ನವದೆಹಲಿ, ಜನವರಿ 23: "ನನ್ನ ಮಗ ಯಾವುದೇ ಅಪರಾಧ ಮಾಡಿಲ್ಲ. ಆತ ಯಾವುದೇ ಮುಗ್ಧ. ಯಾವುದೇ ಅಪರಾಧ ಪ್ರಕರಣಗಳಲ್ಲಿ ಆತ ಪಾಲಗೊಂಡಿಲ್ಲ" ಎಂದು ಅಬ್ದುಲ್ ಸುಭಾನ್ ಖುರೇಶಿ ತಂದೆ ಕಣ್ಣೀರು ಸುರಿಸಿದ್ದಾರೆ

2008 ರ ಗುಜರಾತ್ ಸರಣಿ ಸ್ಫೋಟದ ರೂವಾರಿ, ಇಂಡಿಯನ್ ಮುಜಾಹಿದ್ದೀನ್ ಭಯೋತ್ಪದಕ ಸಂಘಟನೆಯ ಉಗ್ರ ಅಬ್ದುಲ್ ಸುಭಾನ್ ಖುರೇಶಿಯನ್ನು ದೆಹಲಿ ಪೊಲೀಸರು ನಿನ್ನೆ(ಜ.22) ಸೆರೆ ಹಿಡಿದಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರ ತಂದೆ, ನನ್ನ ಮಗ ಅಂಥವನಲ್ಲ. ಆತ ಮುಗ್ಧ. ಆತ ಯಾವುದೇ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಇಷ್ಟನ್ನು ಮಾತ್ರ ನಾನು ಹೇಳಬಲ್ಲೆ ಎಂದು ಅವರು ನುಡಿದರು.

Father of arrested terrorist Qureshi cries foul

ಹೆತ್ತ ತಾಯಿಗೆ ಹೆಗ್ಗಣವೂ ಮುಂದು ಎಂಬ ಗಾದೆ ನೆನಪಾದರೆ ಅಚ್ಚರಿಯಿಲ್ಲ. ಗುಜರಾತ್ ಸರಣಿ ಸ್ಫೋಟ ಮತ್ತು ಮುಂಬೈ ರೈಲಿನಲ್ಲಿ ಬಾಂಬ್ ಸ್ಫೋಟ ನಡೆಸಿದ ಆಅರೋಪ ಈತನ ಮೇಲಿತ್ತು. ದಶಕಗಳಿಂದ ತಲೆ ಮರೆಸಿಕೊಂಡಿದ್ದ ಈತ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ. ಸಿಮಿ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದ ಈತ ತಾಖೀರ್ ಎಂಬ ಹೆಸರಿನಲ್ಲೂ ಕರೆಸಿಕೊಳ್ಳುತ್ತಿದ್ದ. ಬಾಂಬ್ ತಯಾರಿಕೆಯಲ್ಲಿ ಈತನದು ಎತ್ತಿದ ಕೈ. ಅದಕ್ಕೆಂದೇ ಈತನನ್ನು ಭಾರತದ ಒಸಾಮಾ ಬಿನ್ ಲಾಡೆನ್ ಎಂದು ಕರೆಯಲಾಗುತ್ತಿತ್ತು!

ಜುಲೈ 26, 2008 ರಂದು ಗುಜರಾತಿನ ಅಹ್ಮದಾಬಾದಿನಲ್ಲಿ 21 ಕಡೆಗಳಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. 70 ನಿಮಿಷಗಳ ಕಾಲ ನಡೆದ ಈ ಸ್ಫೋಟದಲ್ಲಿ 56 ಮಂದಿ ಸಾವಿಗೀಡಾಗಿದ್ದರೆ, 200 ಮಂದಿ ಗಾಯಗೊಂಡಿದ್ದರು.

ಜುಲೈ 11 2006 ರಂದು ಮುಂಬೈಯ ಸಬ್ ಅರ್ಬನ್ ರೈಲ್ವೆಯಲ್ಲಿ 7 ಕಡೆಗಳಲ್ಲಿ 11 ನಿಮಿಷಗಳ ಕಾಲ ನಡೆಸಿದ ಬಾಂಬ್ ದಾಳಿಯಲ್ಲಿ 200 ಜನ ಮೃತರಾಗಿದ್ದರೆ, 700 ಗಾಯಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+