ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್ ನಲ್ಲೂ ನರೇಂದ್ರ ಮೋದಿ ಫೇಮಸ್

By Mahesh
|
Google Oneindia Kannada News

ನವದೆಹಲಿ, ಜು.3: ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್ ಬುಕ್ ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಳಿಕ ಪ್ರಧಾನಿ ಮೋದಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 18 ದಶಲಕ್ಷ ಲೈಕ್‌ಗಳು ಅವರಿಗೆ ಸಿಕ್ಕಿದೆ. ಪ್ರಧಾನಿ ಮೋದಿ ತಾಯಿಯಿಂದ ಆಶೀರ್ವಾದ ಪಡೆಯುವ ಫೋಟೋ ಫೇಸ್‌ಬುಕ್‌ನಲ್ಲಿ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿತ್ತು. ವೈಯಕ್ತಿಕವಾಗಿ ತಮಗೂ ಅದು ಮೆಚ್ಚುಗೆಯಾಗಿದೆ ಎಂದು ಫೇಸ್‌ಬುಕ್ ಸಿಒಒ ಶರ್ಲಿನ್ ಸ್ಯಾಂಡ್ಬರ್ಗ್ ಹೇಳಿಕೊಂಡಿದ್ದಾರೆ. [ಟ್ವಿಟ್ಟರ್ ಲೋಕಕ್ಕೆ ಪ್ರಣಬ್ ಮುಖರ್ಜಿಗೆ ಸ್ವಾಗತ]

ಭಾರತ ಪ್ರವಾಸದಲ್ಲಿರುವ ಫೇಸ್ಬುಕ್ ಸಿಒಒ ಸಾಂಡ್ರಾ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಾಮಾನ್ಯ ಜನರೊಡನೆ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಹೇಗೆ ಬೆಸೆಯಲು ಸಾಧ್ಯ ಎಂಬುದರ ಬಗ್ಗೆ ಶರ್ಲಿನ್ ಸ್ಯಾಂಡ್ಬರ್ಗ್ ಅವರೊಂದಿಗೆ ಮೋದಿ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. [ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!]

ಭೇಟಿ ನಂತರ ಫೇಸ್ ಬುಕ್ ಪುಟದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಮೋದಿ ಅವರು ಬರೆದುಕೊಂಡಿದ್ದಾರೆ. ಇದೇ ರೀತಿ ಸ್ಯಾಂಡ್ಬರ್ಗ್ ತಮ್ಮ ಪುಟದಲ್ಲಿ ಪ್ರಧಾನಿ ಜತೆಗಿನ ಭೇಟಿ ವಿವರವನ್ನು ಹಾಕಿದ್ದಾರೆ. [ಟ್ವಿಟ್ಟರ್ ಲೋಕ- ಮೋದಿ ನಾಗಾಲೋಟ: 6 ರಿಂದ 4ಕ್ಕೆ ಜಿಗಿತ]

ಫೇಸ್ಬುಕ್ ಮೀಟ್ಸ್ ಫೇಸ್ ಆಫ್ ಇಂಡಿಯಾ

ಫೇಸ್ಬುಕ್ ಮೀಟ್ಸ್ ಫೇಸ್ ಆಫ್ ಇಂಡಿಯಾ

ಪ್ರಧಾನಿ ಮೋದಿ ತಾಯಿಯಿಂದ ಆಶೀರ್ವಾದ ಪಡೆಯುವ ಫೋಟೋ ಫೇಸ್‌ಬುಕ್‌ನಲ್ಲಿ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಗಿತ್ತು. ವೈಯಕ್ತಿಕವಾಗಿ ತಮಗೂ ಅದು ಮೆಚ್ಚುಗೆಯಾಗಿದೆ ಎಂದು ಫೇಸ್‌ಬುಕ್ ಸಿಒಒ ಶರ್ಲಿನ್ ಸ್ಯಾಂಡ್ಬರ್ಗ್ ಹೇಳಿಕೊಂಡಿದ್ದಾರೆ.

ಸ್ಯಾಂಡ್ಬರ್ಗ್ ತಮ್ಮ ಪುಟದಲ್ಲಿ ಮೋದಿ ಬಗ್ಗೆ

ಸ್ಯಾಂಡ್ಬರ್ಗ್ ತಮ್ಮ ಪುಟದಲ್ಲಿ ಮೋದಿ ಬಗ್ಗೆ

ಸ್ಯಾಂಡ್ಬರ್ಗ್ ತಮ್ಮ ಪುಟದಲ್ಲಿ ಪ್ರಧಾನಿ ಜತೆಗಿನ ಭೇಟಿ ವಿವರವನ್ನು ಹಾಕಿದ್ದಾರೆ. ಗುರ್ ಗಾಂವ್ ನ ನನ್ನ ಸಹದ್ಯೋಗಿಗಳಾದ ಮಾರ್ನೆ ಲೆವಿನ್, ಅಂಕಿ ದಾಸ್ ಜತೆ ಇಂಪು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದೆ.

ಕಳೆದ ಒಂದು ವಾರದಿಂದ ಭಾರತದಲ್ಲಿ ಪ್ರವಾಸ ಮಾಡಿದ್ದು ಫಲ ನೀಡಿದೆ. 22 ವರ್ಷಗಳ ಹಿಂದೆ ವಿಶ್ವ ಬ್ಯಾಂಕ್ ಗಾಗಿ ನಾನು ಇಲ್ಲೇ ನನ್ನ ವೃತ್ತಿ ಬದುಕನ್ನು ಆರಂಭಿಸಿದ್ದು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.
ಮೋದಿ ಮಹಿಳಾ ಪರ ಕಾಳಜಿಗೆ ಥಮ್ಸ್ ಅಪ್

ಮೋದಿ ಮಹಿಳಾ ಪರ ಕಾಳಜಿಗೆ ಥಮ್ಸ್ ಅಪ್

ಮೋದಿ ಅವರು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆಗಳು ಶ್ಲಾಘನೀಯ. ಫೇಸ್ ಬುಕ್ ಬಳಕೆ ಬಗ್ಗೆ ಅವರಿಗೆ ಸಾಕಷ್ಟು ಅರಿವಿದೆ. ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಈಗ ಜನ ಸಾಮಾನ್ಯರಿಗೆ ಜಾಲ ತಾಣಗಳ ಉಪಯೋಗ ದೊರೆಕಿಸಿಕೊಡಲು ಯೋಚಿಸಿದ್ದಾರೆ ಎಂದಿದ್ದಾರೆ.

ಪ್ರಧಾನಿ ಸಚಿವಾಲಯದಿಂದ ಟ್ವೀಟ್

ಭಾರತ ಪ್ರವಾಸದಲ್ಲಿರುವ ಫೇಸ್ಬುಕ್ ಸಿಒಒ ಸಾಂಡ್ರಾ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

English summary
Facebook COO Sheryl Sandberg met Prime Minister Narendra Modi on Thursday and discussed ways in which the social networking platform can be used to connect the Government with people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X