ಹೆಂಡತಿ- ಮಕ್ಕಳನ್ನು ಕೊಂದು, ತಪ್ಪೊಪ್ಪಿಗೆ ವಿಡಿಯೋ ಕಳಿಸಿದ ಕೆಲಸ ಕಳ್ಕೊಂಡ ಟೆಕಿ

ಘಾಜಿಯಾಬಾದ್, ಏಪ್ರಿಲ್ 22: ದೆಹಲಿ ಸಮೀಪ ಸಾಫ್ಟ್ ವೇರ್ ಎಂಜಿನಿಯರ್ ರೊಬ್ಬ ಭಾನುವಾರ ತನ್ನ ಹೆಂಡತಿ ಹಾಗೂ ಮೂವರು ಮಕ್ಕಳನ್ನು ಕೊಂದು, ತನ್ನ ತಪ್ಪೊಪ್ಪಿಗೆ ವಿಡಿಯೊವನ್ನು ಕುಟುಂಬ ಸದಸ್ಯರ ವಾಟ್ಸ್ ಅಪ್ ಗ್ರೂಪ್ ಗೆ ಕಳುಹಿಸಿದ್ದಾನೆ. ಘಾಜಿಯಾಬದ್ ನ ವ್ಯಕ್ತಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದವನು ಆ ನಂತರ ನಾಪತ್ತೆ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಿತ್ ಆರೋಪಿ. ಮೂವತ್ತೆರಡು ವರ್ಷದ ಪತ್ನಿ ಹಾಗೂ ಮಕ್ಕಳನ್ನು ಭಾನುವಾರ ಬೆಳಗ್ಗೆ ಇಂದಿರಾಪುರಂನಲ್ಲಿರುವ ತನ್ನ ಮನೆಯಲ್ಲಿ ಕೊಲೆ ಮಾಡಿದ್ದಾನೆ. ಈತನ ದೊಡ್ಡ ಮಗುವಿನ ವಯಸ್ಸು ಐದು ವರ್ಷ. ಜತೆಗೆ ನಾಲ್ಕು ವರ್ಷದ ಅವಳಿ ಮಕ್ಕಳಿವೆ. ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಉದ್ಯೊಗ ಮಾಡುತ್ತಿದ್ದ ಆತ, ಕಳೆದ ಜನವರಿಯಲ್ಲಿ ಕೆಲಸ ಕಳೆದುಕೊಂಡಿದ್ದ.

ಆ ನಂತರ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ತನ್ನ ಕುಟುಂಬ ಸದಸ್ಯರನ್ನು ಕೊಲೆ ಮಾಡುವ ನಿರ್ಧಾರಕ್ಕೆ ಆತ ಬಂದಿದ್ದಾನೆ. ಭಾನುವಾರ ಸಂಜೆ ಆರು ಗಂಟೆ ಹೊತ್ತಿಗೆ ಘಟನೆ ಬೆಳಕಿಗೆ ಬಂದಿದೆ. ತಾನು ಕೊಲೆ ಮಾಡಿದ ಸಂಗತಿಯ ತಪ್ಪೊಪ್ಪಿಗೆಯನ್ನು ವಿಡಿಯೋ ಮಾಡಿ, ಅದನ್ನು ತನ್ನ ಕುಟುಂಬ ಸದಸ್ಯರು ಇರುವ ಗ್ರೂಪ್ ಗೆ ಆತ ಕಳುಹಿಸಿದ್ದ.

Ex techie kills wife, 3 children, confesses to family on whatsapp

ಜತೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂಬಂಧಿಕರೊಬ್ಬರಿಗೆ ಫೋನ್ ಮಾಡಿ ತಿಳಿಸಿದ್ದ. ತಾಯಿ ಹಾಗೂ ಮೂವರು ಮಕ್ಕಳ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+