ಎಎಪಿ ತೊರೆದು ಬಿಜೆಪಿ ಸೇರಿದ ಗಾಂಧಿನಗರ ಶಾಸಕ

Recommended Video

      ಬಿಜೆಪಿಯ ಆಟಕ್ಕೆ ಬೆಚ್ಚಿಬಿದ್ದ ಕೇಜ್ರಿವಾಲ್..!? | Oneindia Kannada

      ನವದೆಹಲಿ, ಮೇ 03: ಆಮ್ ಆದ್ಮಿ ಪಕ್ಷದ ಶಾಸಕರು ಪಕ್ಷ ತೊರೆಯಲು ಸಿದ್ಧರಿದ್ದಾರೆ ಎಂದು ಬಿಜೆಪಿ ಮುಖಂಡ, ಕೇಂದ್ರ ಸಚಿವ ವಿಜಯ್ ಗೋಯೆಲ್ ಅವರು ಹೇಳಿದಂತೆ ಎಎಪಿ ತೊರೆದ ಹಾಲಿ ಶಾಸಕರೊಬ್ಬರು ಬಿಜೆಪಿ ಸೇರಿದ್ದಾರೆ. ಲೋಕಸಭೆ ಚುನಾವಾಣೆ ವೇಳೆಯಲ್ಲಿ ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗಿದೆ.

      ಬಿಜೆಪಿಯು ಎಎಪಿಯ ಕೆಲವು ಶಾಸಕರಿಗೆ 10 ಕೋಟಿ ರೂ. ಆಮಿಷವೊಡ್ಡಿ ಅವರನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು.

      Elections 2019: AAP Gandhi Nagar MLA joins BJP

      ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿಜಯ್ ಗೋಯಲ್, ಬಿಜೆಪಿ ಯಾವ ಶಾಸಕರನ್ನೂ ಸೆಳೆಯಲು ಪ್ರಯತ್ನಿಸುತ್ತಿಲ್ಲ, ಖರೀದಿಸಲೂ ಯತ್ನಿಸಿಲ್ಲ. ಆದರೆ ಪಕ್ಷ್(ಎಎಪಿ) ತನ್ನ ಮೂಲ ಉದ್ದೇಶವನ್ನು ಮರೆತಿರುವುದರಿಂದ ಬೇಸರಗೊಂಡು 14 ಎಎಪಿ ಶಾಸಕರು ಪಕ್ಷ ತೊರೆಯಲು ಸಿದ್ಧರಿದ್ದಾರೆ ಎಂದು ಗೋಯಲ್ ತಿಳಿಸಿದ್ದರು.

      ಇದಕ್ಕೆ ಪೂರಕವಾಗಿ ಶುಕ್ರವಾರ(ಮೇ 03)ದಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಅನಿಲ್ ಬಾಜಪೇಯಿ ಅವರು ಬಿಜೆಪಿ ಸೇರಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಬಿಜೆಪಿ ಸೇರಿದ ಎರಡನೇ ಶಾಸಕರೆನಿಸಿದ್ದಾರೆ. ದೆಹಲಿ ಬಿಜೆಪಿ ಉಸ್ತುವಾರಿ ಶ್ಯಾಮ್ ಜಾಜು ಹಾಗೂ ಕೇಂದ್ರ ಸಚಿವ ವಿಜಯ್ ಗೋಯೆಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

      'ನಾನು ಹಲವು ವರ್ಷಗಳ ಕಾಲ ಎಎಪಿ ಪರ ಕಾರ್ಯ ನಿರ್ವಹಿಸಿದೆ. ಆದರೆ, ನನಗೆ ಯಾವುದೇ ಗೌರವ ಸಿಗಲಿಲ್ಲ. ಹೀಗಾಗಿ, ನಾನು ಪಕ್ಷವನ್ನು ತೊರೆದಿದ್ದೇನೆ ಎಂದು ಬಾಜ್ ಪೇಯಿ ಹೇಳಿದರು.

      ಎಎಪಿ ರೆಬೆಲ್ ಶಾಸಕ ಕಪಿಲ್ ಮಿಶ್ರಾ ಅವರು ಬಿಜೆಪಿಯ ಲೋಕಸಭೆ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸುವುದಾಗಿ ಗುರುವಾರದಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಎಎಪಿಯಿಂದ ಅಮಾನತುಗೊಂಡಿರುವ ಪಂಜಾಬಿನ ಹಾಲಿ ಶಾಸಕ ಹರೀಂದರ್ ಸಿಂಗ್ ಖಲ್ಸಾ ಅವರು ಮಾರ್ಚ್ ತಿಂಗಳಿನಲ್ಲಿ ಬಿಜೆಪಿ ಸೇರಿದ್ದರು.(ಪಿಟಿಐ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+