• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇ.ಡಿಯಲ್ಲಿ ಇಂದು ಐಶ್ವರ್ಯಾ-ಡಿಕೆ ಶಿವಕುಮಾರ್ ಮುಖಾಮುಖಿ?

|

ನವದೆಹಲಿ, ಸೆಪ್ಟೆಂಬರ್ 13: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಗುರುವಾರ ವಿಚಾರಣೆಗೆ ಒಳಗಾಗಿದ್ದ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಕೂಡ ವಿಚಾರಣೆಗೆ ಒಳಪಡಿಸಲಿದ್ದಾರೆ.

ಗುರುವಾರ ಬೆಳಿಗ್ಗೆ ಸುಮಾರು 11.30ರಿಂದ ಐಶ್ವರ್ಯಾ ಅವರನ್ನು ಸತತವಾಗಿ ಎಂಟು ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು. ಬಳಿಕ ಶುಕ್ರವಾರವೂ ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ಸಮನ್ಸ್ ನೀಡಲಾಯಿತು. ಸಮನ್ಸ್ ಪ್ರಕಾರ ಐಶ್ವರ್ಯಾ ಅವರು ಬೆಳಿಗ್ಗೆ 11 ಗಂಟೆಗೆ ಪುನಃ ಇ.ಡಿ ಕಚೇರಿಗೆ ತೆರಳಿ ವಿಚಾರಣೆಗೆ ಒಳಗಾಗಬೇಕಿದೆ.

   DK Shivakumar : ವಿಚಾರಣೆಗೆ ಹಾಜರಾದ ಡಿಕೆಶಿ ಪುತ್ರಿ ಐಶ್ವರ್ಯ | Oneindia Kannada

   ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಹಿಟ್

   ಇ.ಡಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಅವರನ್ನೂ ಕರೆತರಲಿದ್ದು, ತಂದೆ-ಮಗಳು ಇಬ್ಬರೂ ಮುಖಾಮುಖಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳೆದ 10 ದಿನಗಳಿಂದ ಇ.ಡಿ ವಶದಲ್ಲಿರುವ ಡಿಕೆ ಶಿವಕುಮಾರ್ ಅವರ ಕಸ್ಟಡಿ ಶುಕ್ರವಾರ ಅಂತ್ಯವಾಗಲಿದೆ. ಹೀಗಾಗಿ ಮಧ್ಯಾಹ್ನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

   ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯ; ಮುಂದಿರುವ 4 ಆಯ್ಕೆ

   ಐಶ್ವರ್ಯಾ ಅವರ ವಿಚಾರಣೆಯಿಂದ ಇ.ಡಿ ಅಧಿಕಾರಿಗಳು ಕೆಲವು ಮಹತ್ವದ ವಿಚಾರಗಳನ್ನು ಸಂಗ್ರಹಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಆಳವಾದ ವಿಚಾರಣೆಯ ಅಗತ್ಯವಿದೆ. ಅದರ ಬಗ್ಗೆ ಡಿಕೆ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ ಮತ್ತೆ ನಾಲ್ಕು ದಿನ ತಮ್ಮ ವಶಕ್ಕೆ ಒಪ್ಪಿಸುವಂತೆ ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಿದ್ದಾರೆ.

   ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?

   ಐಶ್ವರ್ಯಾ ಅವರ ಬ್ಯಾಂಕ್ ಖಾತೆಯಿಂದ ನಡೆದಿರುವ ಹಣದ ವರ್ಗಾವಣೆಗಳ ಬಗ್ಗೆ ಅವರನ್ನು ಪ್ರಶ್ನಿಸಲಾಗಿದೆ. ಐಶ್ವರ್ಯಾ ಅವರ ಹೆಸರಿನಲ್ಲಿ ಹಲವು ಕಡೆ ಹೂಡಿಕೆಗಳನ್ನು ಮಾಡಲಾಗಿದೆ. ಅಲ್ಲದೆ, ಅವರ ಆಸ್ತಿ ಮೌಲ್ಯದಲ್ಲಿ ದಿಢೀರ್ ಏರಿಕೆಯಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಶುಕ್ರವಾರ ಇನ್ನಷ್ಟು ಮಾಹಿತಿ ಕೆದಕಲಿದ್ದಾರೆ.

   English summary
   ED again issued summons to DK Shivakumar's daughter Aishwarya and asked her to appear before it on Friday morning.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X