• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆ ಶಿವಕುಮಾರ್ ಆಪ್ತ ಆಂಜನೇಯ ಮನೆ ಮೇಲೆ 'ಇಡಿ' ದಾಳಿ

|

ನವದೆಹಲಿ, ಸೆ. 10: ದೆಹಲಿಯ ಸಫ್ಜರ್ ದಂಗ್ ಎನ್ಕ್ಲೇವ್ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕ ಹಣದ ಲೆಕ್ಕ ನೀಡಲು ವಿಫಲರಾಗಿ ಜೈಲು ಸೇರಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಆಪ್ತರಿಗೆ ಜಾರಿ ನಿರ್ದೇಶನಾಲಯ ಬಲೆ ಬೀಸಿದೆ. ಡಿಕೆ ಶಿವಕುಮಾರ್ ಅವರ ಆಪ್ತ ಆಂಜನೇಯ ಹನುಮಂತಯ್ಯ ಮನೆ ಮೇಲೆ 'ಇಡಿ' ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದೆಹಲಿಯ ಕರ್ನಾಟಕ ಭವನದ ಅಧಿಕಾರಿಯೂ ಆಗಿರುವ ಹನುಮಂತಯ್ಯಗೂ ಮನಿ ಲಾಂಡ್ರಿಂಗ್ ಪ್ರಕರಣಕ್ಕೂ ನಂಟಿದ್ದು ಈ ಬಗ್ಗೆ ಪ್ರಶ್ನಿಸಲು ಜಾರಿ ನಿರ್ದೇಶನಾಲಯ ಮುಂದಾಗಿದೆ.

ಡಿ. ಕೆ ಶಿವಕುಮಾರ್ ಅವರ ದೆಹಲಿಯ 4 ಫ್ಲಾಟ್ ಗಳ ಉಸ್ತುವಾರಿಯನ್ನು ಶರ್ಮಾ ಟ್ರಾವೆಲ್ಸ್ ನ ಸುಶೀಲ್ ಕುಮಾರ್ ಶರ್ಮಾ ನೋಡಿಕೊಳ್ಳುತ್ತಿದ್ದಾರೆ. ಡಿಕೆಶಿ ಆಪ್ತ ರಾಜೇಂದ್ರ ಮನೆಯಲ್ಲಿ ದಾಳಿ ವೇಳೆ ಸಿಕ್ಕ ಡೈರಿಯಲ್ಲಿ ಹೈಕಮಾಂಡ್ ಗೆ ಹಣ ರವಾನೆಯಾಗಿರುವ ಆರೋಪ ಇದೆ. ಜೊತೆಗೆ ಹನುಮಂತಯ್ಯ, ಸಚಿನ್ ನಾರಾಯಣ್, ಆಂಜನೇಯುಲು ಎಂಬುವರು ನೀಡಿದ ಹೇಳಿಕೆಯೇ ಇಂದು ಡಿಕೆಶಿ ಬಂಧನಕ್ಕೆ ಕಾರಣವಾಗಿದೆ.

ಬಂಧನ ನಂತರ ಡಿಕೆ ಶಿವಕುಮಾರ್ ಮುಂದಿನ ಆಯ್ಕೆಗಳೇನು?

ದೆಹಲಿಯಲ್ಲಿ ಹಣ ರವಾನೆ ಜವಾಬ್ದಾರಿಯನ್ನು ಶರ್ಮಾ ಹಾಗೂ ಹನುಮಂತ್ರಯ್ಯ ವಹಿಸಿಕೊಂಡಿದ್ದರು ಎಂಬ ಆರೋಪವಿದೆ.

ಮನಿಲಾಂಡ್ರಿಂಗ್ ಪ್ರಕರಣದಲ್ಲಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ

English summary
Enforcement Directorate carried out searches at the residence of Anjaneya Hanumanthaiah close aide of Congress leader DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X