ಶಶಿಕಲಾ ಆಯ್ಕೆ, ದಿನಕರನ್ ಪತ್ರಕ್ಕೆ ಬೆಲೆಯಿಲ್ಲ ಎಂದ ಚುನಾವಣೆ ಆಯೋಗ

ಶಶಿಕಲಾ ನಟರಾಜನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಎಐಎಡಿಎಂಕೆಗೆ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಚುನಾವಣೆ ಆಯೋಗ ಕಳಿಸಿದ್ದ ನೋಟಿಸ್ ಗೆ ಟಿಟಿವಿ ದಿನಕರನ್ ನೀಡಿದ ಉತ್ತರವನ್ನು ಅಯೋಗ ತಿರಸ್ಕರಿಸಿದೆ

ನವದೆಹಲಿ, ಮಾರ್ಚ್ 4: ಶಶಿಕಲಾ ನಟರಾಜನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಬಗ್ಗೆ ಎಐಎಡಿಎಂಕೆ ನೀಡಿದ ಉತ್ತರವನ್ನು ಚುನಾವಣೆ ಆಯೋಗ ಶನಿವಾರ ನಿರಾಕರಿಸಿದೆ. ಆ ಪತ್ರಕ್ಕೆ ಟಿಟಿವಿ ದಿನಕರನ್ ಸಹಿ ಮಾಡಿದ್ದು, ಪಕ್ಷದ ಜವಾಬ್ದಾರಿ ಹೊತ್ತಿರುವವರ ಪಟ್ಟಿಯಲ್ಲಿ ಅತನ ಹೆಸರಿಲ್ಲ ಎಂದು ತಿಳಿಸಿದೆ.

ಒಂದೋ ಶಶಿಕಲಾರೇ ಪತ್ರಕ್ಕೆ ಸಹಿ ಹಾಕಬೇಕು ಅಥವಾ ಯಾರಿಗೆ ಸಹಿ ಮಾಡುವ ಅಧಿಕಾರ ಇದೆಯೋ ಅಂಥವರು ಅಂದರೆ ಚುನಾವಣೆ ಆಯೋಗದ ಬಳಿಯಿರುವ ಎಐಎಡಿಎಂಕೆ ಪಟ್ಟಿಯಲ್ಲಿರುವವರ ಸಹಿ ಹಾಕಿಸಿ, ಮಾರ್ಚ್ 10ರೊಳಗೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.[ಜಯಲಲಿತಾ ಸಾವಿನ ರಹಸ್ಯ, ಪಾಂಡಿಯನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]

EC rejects AIADMK reply on Sasikala elevation

ಚುನಾವಣೆ ಆಯೋಗದ ಬಳಿಯಿರುವ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಪಟ್ಟಿಯಲ್ಲಿ ದಿನಕರನ್ (ಶಶಿಕಲಾ ಸೋದರ ಸಂಬಂಧಿ, ದಿಢೀರನೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದವರು) ಹೆಸರಿಲ್ಲ ಎಂದು ತಿಳಿಸಲಾಗಿದೆ. ಸದ್ಯಕ್ಕೆ ಶಶಿಕಲಾ ನಟರಾಜನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.[ಶಶಿಕಲಾಗೆ ಪರಪ್ಪನ ಅಗ್ರಹಾರಕ್ಕೆ ಚುನಾವಣೆ ಆಯೋಗದ ನೋಟಿಸ್]

ಶಶಿಕಲಾ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಅಧಿಕಾರ ಸಾಮಾನ್ಯ ಸಭೆಗೆ ಇದೆ ಎಂದು ಎಐಎಡಿಎಂಕೆ ಸಮರ್ಥನೆ ನೀಡಿತ್ತು. ಫೆಬ್ರವರಿ 17ರಂದು ಚುನಾವಣೆ ಆಯೋಗ ನೋಟಿಸ್ ನೀಡಿತ್ತು. ಅದಕ್ಕೆ ಉತ್ತರಿಸಿದ್ದ ಎಐಎಡಿಎಂಕೆ, ಈಗ ಶಶಿಕಲಾ ಅವರ ಪದೋನ್ನತಿ ಬಗ್ಗೆ ದೂರು ನೀಡಿದವರೇ ಆರಂಭದಲ್ಲಿ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿ, ಸಹಿ ಮಾಡಿದ್ದರು ಎಂದು ತಿಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+