ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ಮತ್ತೆ ಪ್ರಬಲ ಭೂಕಂಪ, ದೆಹಲಿ ಗಡ ಗಡ

By Mahesh
|
Google Oneindia Kannada News

ನವದೆಹಲಿ, ಮೇ.12: ನೇಪಾಳದಲ್ಲಿ ಮತ್ತೊಮ್ಮೆ ಪ್ರಬಲವಾದ ಭೂಕಂಪ ಸಂಭವಿಸಿದ್ದು ಇದರ ಪರಿಣಾಮ ಭಾರತದ ನವದೆಹಲಿ ಹಾಗೂ ಉತ್ತರ ಭಾರತದ ಅನೇಕ ಭಾಗಗಳು ಕಂಪಿಸಿವೆ. ಮಂಗಳವಾರ ಮಧ್ಯಾಹ್ನ 12.38 ರ ಸುಮಾರಿಗೆ 60 ಸೆಕೆಂಡುಗಳ ಕಂಪನದ ಅನುಭವವಾಗಿದೆ.

ನೇಪಾಳದಲ್ಲಿ ಕಳೆದ ಎರಡು ವಾರಗಳ ಹಿಂದೆ ಸಂಭವಿಸಿದ ಸರಣಿ ಭೂಕಂಪದಿಂದ ಸುಮಾರು 8000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. 17,800 ಮಂದಿ ಗಾಯಗೊಂಡಿದ್ದರು. [ಗೂಗಲ್ ಗುರು ಬಳಸಿ ನಿಮ್ಮವರ ಹುಡುಕಾಟ ನಡೆಸಿ]

Strong tremors were felt in Delhi, NCR and other parts of North India

ಹಿಮಾಲಯದ ತಪ್ಪಲಿನಲ್ಲಿರುವ ನಾಮ್ಚೆ ಬಜಾರ್ ನಲ್ಲಿ ಭೂಕಂಪದ ಕೇಂದ್ರ ಪ್ರದೇಶ ಕಂಡು ಬಂದಿದೆ.


ಮಂಗಳವಾರ (ಮೇ.12) ಸಂಭವಿಸಿರುವ ಭೂಕಂಪದ ಪ್ರಮಾಣ ರಿಕ್ಚರ್ ಮಾಪಕದಲ್ಲಿ 7.1 ರಿಂದ 7.4ರಷ್ಟು ತೀವ್ರತೆ ಹೊಂದಿದೆ. 19 ಕಿ.ಮೀಗಳಷ್ಟು ಆಳಕ್ಕೆ ಕಂಪನ ಇಳಿದಿದೆ. ಏ.25ರಂದು ಸಂಭವಿಸಿದ ಭೂಕಂಪದ ತೀವ್ರತೆ 7.8ರಷ್ಟಿತ್ತು. [ನೇಪಾಳದಲ್ಲಿ ಉಳಿದಿರುವುದು ಬರೀ ಅವಶೇಷಗಳೇ!]

ಹಿಮಾಲಯದ ತಪ್ಪಲಿನಲ್ಲಿರುವ ನಾಮ್ಚೆ ಬಜಾರ್ (ಸಮುದ್ರಮಟ್ಟದಿಂದ 11,286 ಅಡಿ ಎತ್ತರ) ನಿಂದ ಪಶ್ಚಿಮಕ್ಕೆ 68 ಕಿ.ಮೀಗಳ ದೂರದಲ್ಲಿ ಭೂಕಂಪದ ಕೇಂದ್ರ ಪ್ರದೇಶ ಕಂಡು ಬಂದಿದೆ. ಎವರೆಸ್ಟ್ ಬೇಸ್ ಕ್ಯಾಂಪಿಗೆ ಸಮೀಪದಲ್ಲೇ ಮತ್ತೆ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂಗರ್ಭ ಇಲಾಖೆ ವರದಿ ನೀಡಿದೆ. [ಭೂಕಂಪ :ಭೀಕರ, ಭಯಾನಕ ವಿಡಿಯೋಗಳು]

ಚೀನಾ ಗಡಿ ತತ್ತರ: ನೇಪಾಳ -ಟಿಬೇಟ್-ಚೀನಾ ಗಡಿ ಭಾಗದ ಕೊಡಾರಿ ಕೇಂದ್ರದಲ್ಲಿ ಭೂಕಂಪದ ತೀವ್ರ ಅನುಭವವಾಗಿದೆ. ಭೂಕಂಪದ ಕೇಂದ್ರ ಪ್ರದೇಶದಿಂದ ಚೀನಾ ಗಡಿ ಕೇವಲ 23 ಕಿ.ಮೀ ಆಗ್ನೇಯ ಭಾಗಕ್ಕೆ ಚೀನಾದ ಝಾಮ್ ಪ್ರದೇಶವಿದೆ, ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಕೇಂದ್ರ ಬಿಂದು 83 ಕಿ.ಮೀ ದೂರವಿದೆ. [ಭೂಕಂಪದ ಮನಕಲಕುವ ಚಿತ್ರಗಳು]

Strong tremors were felt in Delhi

ಭಾರತದಲ್ಲಿ ಗಡ ಗಡ: ದೆಹಲಿಯಲ್ಲಿ ಸುಮಾರು 6.2 ತೀವ್ರತೆಯ ಕಂಪನದ ಜೊತೆಗೆ ಒಡಿಶಾ, ಅಸ್ಸಾಂ, ಉತ್ತರ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ, ದೆಹಲಿಯಲ್ಲಿ ಜನತೆ ಕಚೇರಿ, ಮನೆಯಿಂದ ಆತಂಕಗೊಂಡು ಹೊರಕ್ಕೆ ಬಂದಿದ್ದಾರೆ.

ಭೂಕಂಪದ ಬಗ್ಗೆ ಅಪ್ಡೇಟ್ಸ್ ಇಲ್ಲಿದೆ:

* Indian Embassy Helpline numbers in Nepal: (+977) 98511 07021, (+977) 98511 35141.
* ನೇಪಾಳದಲ್ಲಿ ಕಂಪನದ ನಂತರದ ದೃಶ್ಯ.

* ವಿಪತ್ತು ನಿರ್ವಹಣಾ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನೇಪಾಳ ಹಾಗೂ ಭಾರತದ ಭೂಕಂಪ ಪೀಡಿತ ಪ್ರದೇಶಗಳಿಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದಿದ್ದಾರೆ.

Strong tremors were felt in Delhi, NCR and other parts of North India

* ನಾಮ್ಜೆ ಬಜಾರ್ ಕಡೆಗೆ ಐಎಎಫ್ ನ ಎಂಐ 17 ಹೆಲಿಕಾಪ್ಟರ್ ತೆರಳುತ್ತಿದೆ. ನೇಪಾಳದ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ.

* ಭಾರತದ ನೆರವು ಮತ್ತೆ ಸಿಗುವ ಭರವಸೆ ಇದೆ ಎಂದ ನೇಪಾಳದ ರಾಯಭಾರಿ ಕಚೇರಿ

* ನೇಪಾಳದಲ್ಲಿ ಸಂಭವಿಸಿದ ಭೂಕಂಪ ಹಾಗೂ ಉತ್ತರ ಭಾರತದ ಹಲವೆಡೆಯ ಕಂಪನದ ಪರಿಣಾಮ ಐಪಿಎಲ್ ಆಟಗಾರರಿಗೂ ತಟ್ಟಿದೆ. [ವಿವರ ಇಲ್ಲಿ ಓದಿ].

* ನೇಪಾಳ ಹಾಗೂ ಭಾರತದಲ್ಲಿ ಭೂಕಂಪದಿಂದ 30 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನಕ್ಕೆ ಗಾಯಗಳಾಗಿವೆ.
* ಉತ್ತರಪ್ರದೇಶದ ಲಖ್ನೋದಲ್ಲಿ ಕಂಪನದ ಅನುಭವವಾದ ತಕ್ಷಣ ಕಟ್ಟಡದಿಂದ ಹೊರ ಬಂದ ಮುಖ್ಯಮಂತ್ರಿ ಅಖಿಲೇಶ್ ಯಾದವ್.


* ನೇಪಾಳದಲ್ಲಿ 12.35 ರಿಂದ 2 ಗಂಟೆ ತನಕ ಸುಮಾರು 7 ಬಾರಿ ಭೂಮಿ ಕಂಪಿಸಿದೆ.

* ನೇಪಾಳದಲ್ಲಿ ಕಂಡ ಬಂದ ಮೊದಲ ದೃಶ್ಯ


* ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಬಲಿಯಾಗಿರುವ ಪ್ರಾಥಮಿಕ ವರದಿ ಬಂದಿದೆ.
* ದೆಹಲಿ, ಎನ್ ಸಿಆರ್, ಪಾಟ್ನ, ಬಿಹಾರ್, ಪಶ್ಚಿಮ ಬಂಗಾಳ, ಒಡಿಸ್ಸಾ, ಮೊರಾದಾಬಾದ್ ಹಾಗೂ ಅಸ್ಸಾಂ ಮುಂತಾದೆಡೆ ಭೂಕಂಪದ ಅನುಭವ. [ಭೂಕಂಪ ಪೀಡಿತರಿಗೆ ಸಹಾಯವಾಣಿ]
* ಉತ್ತರ ಭಾರತದ ಹಲವೆಡೆ ಮೊಬೈಲ್,ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ.
* ದೆಹಲಿಯಲ್ಲಿ ಮೆಟ್ರೋ ಸೇವೆ ಸ್ಥಗಿತ. ಆತಂಕಗೊಂಡ ಜನತೆ ರಸ್ತೆಯಲ್ಲೇ ನಿಂತಿದ್ದಾರೆ.
* ಅಫ್ಘಾನಿಸ್ತಾನದಲ್ಲಿ 6.9 ಪ್ರಮಾಣದ ಭೂಕಂಪ ಮತ್ತೊಂದು ಕೇಂದ್ರ ಬಿಂದು ಪತ್ತೆ.
* ರಾಷ್ಟ್ರೀಯ ವಿಪತ್ತು ನಿರ್ವಹಣಾಧಿಕಾರಿಗಳ ಜೊತೆ ಗೃಹ ಸಚಿವ ರಾಜನಾಥ್ ಸಿಂಗ್ ಚರ್ಚೆ.

English summary
Strong tremors were felt in Delhi, NCR and other parts of North India. The epicentre of the earthquake was said to be in Kathmandu, Nepal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X