ನೇಪಾಳದಲ್ಲಿ ಉಳಿದಿರುವುದು ಬರೀ ಅವಶೇಷಗಳೇ!
ಕಡ್ಮಂಡು, ಏ. 29: ಭೂಕಂಪದಿಂದ ನಲುಗಿ ಹೋಗಿರುವ ನೇಪಾಳದಲ್ಲಿ ಉಳಿದುಕೊಂಡಿರುವವುದು ಬರಿ ಅವಶೇಷಗಳೇ. ಕಣ್ಣೇದುರೇ ಮುರಿದು ಬಿದ್ದ ಮನೆ, ತನ್ನವರನ್ನೆಲ್ಲ ಕಳೆದುಕೊಂಡು ಏಕಾಂಗಿಯಾದವ ನೋವು ತೋಡಿಕೊಳ್ಳಲು ಆಗದ ಸ್ಥಿತಿ. ಮನೆ ಬಿಟ್ಟು ಬಯಲಿನ ಬಿಡಾರದಲ್ಲಿ ವಾಸ. ಮತ್ತೆ ನಿಸರ್ಗ ಮುನಿಯುವುದೇನೋ ಎಂಬ ಭಯದಲ್ಲಿ ದಿನ ದೂಡುವ ಕಾಯಕ...ಇದೆಲ್ಲ ಇಂದಿನ ನೇಪಾಳ ದ ಚಿತ್ರಗಳು.
ನೇಪಾಳ ಪುನರ್ ನಿರ್ಮಾಣಕ್ಕೆ 30,000 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅಗತ್ಯವಿದೆ ಎಂದು ಜಾಗತಿಕ ಮಾಹಿತಿ ಕಂಪನಿ ಐಎಚ್‌ಎಸ್ ಗ್ಲೋಬಲ್ ಹೇಳಿದೆ. ಸ್ಥಳೀಯವಾಗಿ ಉತ್ಪಾದಿಸುತ್ತಿದ್ದ ವಸ್ತುಗಳು ಹಾಗೂ ಪ್ರವಾಸೋದ್ಯಮ ನೇಪಾಳದ ಪ್ರಮುಖ ಆರ್ಥಿಕ ಮೂಲಗಳಾಗಿದ್ದವು ಆದರೆ ಇವೆಲ್ಲ ಇಂದು ಹೆಸರಿಗೆ ಮಾತ್ರ ಉಳಿದುಕೊಂಡು ಎಲ್ಲವನ್ನು ಹೊಸದಾಗಿ ನಿರ್ಮಾಣ ಮಾಡಬೇಕಿದೆ. ಮೊದಲು ಬದುಕು ಆಮೇಲೆ ಪ್ರವಾಸೋದ್ಯಮ ಎಂಬ ಸ್ಥಿತಿ ನೇಪಾಳಿಗಳದ್ದು.[ನೇಪಾಳ ಭೂಕಂಪ :ಭೀಕರ, ಭಯಾನಕ ವಿಡಿಯೋಗಳು]
ಭೂಕಂಪ ಬಿಟ್ಟು ಹೋದ ಕರಾಳತೆಯ ಕೆಲ ಫೋಟೋ ಗಳನ್ನು ನೋಡಿದರೆ ಪರಿಣಾಮ ಅನುಭವಿಸಿದವರ ಸಂಕಷ್ಟ ಕಣ್ಣ ಮುಂದೆ ಹಾದು ಹೋಗುತ್ತದೆ. ಜೀವ ಮತ್ತು ಜೀವನಕ್ಕೆ ಇರುವ ಬೆಲೆಯ ಅಂದಾಜು ಸಿಗುವುದು ಇಲ್ಲಿಯೇ...(ಪಿಟಿಐ ಚಿತ್ರಗಳು)

ಎಲ್ಲಿಂದ ನೋಡಿದರೂ ಅದೇ ಅವಸ್ಥೆ
ಭೂಕಂಪದಿಂದ ನುಜ್ಜುಗುಜ್ಜಾಗಿರುವ ನೇಪಾಳದ ದುಂಛಾ ವೈಮಾನಿಕವಾಗಿ ಕಂಡು ಬಂದಿದ್ದು ಹೀಗೆ. ಮನೆಗಳು ಧ್ವಂಸವಾಗಿರುವ ರೀತಿ ಭಯ ಹುಟ್ಟಿಸುತ್ತದೆ.

ನಿಮ್ಮ ಜತೆ ನಾವಿದ್ದೇವೆ
ಕಲಾವಿದರೊಬ್ಬರು ಪುರಿಯ ಸಮುದ್ರ ತೀರದಲ್ಲಿ ನೇಪಾಳಿಗರಿಗೆ ಧೈರ್ಯ ತುಂಬುವ ಕಲಾಕೃತಿ ನಿರ್ಮಾಣ ಮಾಡಿ ನೊಂದವರಿಗೆ ಧೈರ್ಯ ತುಂಬಿದ ಬಗೆ. ನೇಪಾಳದಲ್ಲಿ ಅವಘಡ ಸಂಭವಿಸಿದ ತಕ್ಷಣ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದಾಗಿ ಆಪರೇಶನ್ ಮೈತ್ರಿ ಹೆಸರಿನಲ್ಲಿ ಸೈನಿಕರನ್ನು ಕಳುಹಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದರು.

ಎಲ್ಲಿಗೆ ಪಯಣ? ಯಾವುದು ದಾರಿ?
79 ವರ್ಷದ ವೃದ್ಧೆ ತನ್ನ ಮೊಮ್ಮಗನ ಕರೆದುಕೊಂಡು ಸುರಕ್ಷಿತ ಸ್ಥಳ ಅರಸುತ್ತ ಹೊರಟ ರೀತಿ. ಭೂಕಂಪದ ಪರಿಣಾಮ ನಿರಾಶ್ರಿತರಾದವರು ಮತ್ತು ಪ್ರಾಣ ಕಳೆದುಕೊಂಡವರ ಲೆಕ್ಕ ಇನ್ನು ಸರಿಯಾಗಿ ಸಿಕ್ಕಿಲ್ಲ.

ಬೀದಿಯಲ್ಲೂ ಮಲಗಿದ್ದಾಯ್ತು
ಭೂ ಕಂಪನದ ಭಯಕ್ಕೆ ಸಿಕ್ಕಿ ಬಯಲಿನಲ್ಲಿ ಟೆಂಟ್ ಹಾಕಿಕೊಂಡು ಮಲಗಿದ್ದ ನೇಪಾಳದ ನಾಗರೀಕರು ಕೊಂಚ ಸುಧಾರಿಸಿಕೊಂಡು ಮನೆಯತ್ತ ಹೆಜ್ಜೆ ಹಾಕಲು ಮುಂದಾಗಿರುವ ಸಂದರ್ಭ.

ರಕ್ಷಣಾ ಕಾರ್ಯಕ್ಕೆ ಅಂತ್ಯವಿಲ್ಲ
ಭಾರತೀಯ ಸೈನಿಕರು ಅಪಾಯಕ್ಕೆ ಸಿಲುಕಿದ್ದವರನ್ನು ರಕ್ಷಣೆ ಮಾಡಿ ಭಾರತಕ್ಕೆ ವಾಪಸ್ ಕರೆತರುವ ಕೆಲಸ ಮುಂದುವರಿಸಿಯೇ ಇದ್ದಾರೆ. ಭಾರತಕ್ಕೆ ಹಿಂದಿರುಗಲು ವಿಮಾನವೇರಿದ್ದ ನಾಗರೀಕರಲ್ಲಿ ದೊಡ್ಡ ಅಪಾಯದಿಂದ ಬಚಾವಾದ ನಿಟ್ಟುಸಿರು ಕಾಣುತ್ತಿದೆ.

ಇಲ್ಲಿ ಜಾತಿ ತಾರತಮ್ಯವಿಲ್ಲ
ಅಪಾಯಕ್ಕೆ ಸಿಲುಕಿದ್ದವರಿಗೆ ಬೇಕಾಗಿದ್ದದ್ದು ಕೇವಲ ಮಾನವೀಯತೆಯ ಸಹಾಯ ಹಸ್ತ. ಸೈನಿಕರು ಅದನ್ನು ನೆರವೇರಿಸಿದ್ದಾರೆ. ಅಂಥದ್ದೇ ಒಂದು ಮನಕಲಕುವ ದೃಶ್ಯ.












Click it and Unblock the Notifications