ದಂಡ ಕಟ್ಟಲು ನಕಾರ, ಜೈಲಿಗೆ ಹೋಗಲು ಸಿದ್ಧ: ಶ್ರೀಶ್ರೀ ರವಿಶಂಕರ್
ನವದೆಹಲಿ, ಮಾರ್ಚ್ 10: ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಯೋಜನೆಯ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ರಾಷ್ಟ್ರೀಯ ಹಸಿರು ಪ್ರಾಧಿಕಾರದಿಂದ ಬುಧವಾರ ಷರತ್ತುಬದ್ಧ ಒಪ್ಪಿಗೆ ಸಿಕ್ಕಿದೆ. ಆದರೆ, ಪರಿಸರ ಹಾನಿಯಾಗಿರುವುದಕ್ಕೆ ಪರಿಹಾರ ರೂಪವಾಗಿ 5 ಕೋಟಿ ರು ದಂಡ ಕಟ್ಟಲು ಎಒಎಲ್ ಗೆ ಸೂಚಿಸಲಾಗಿದ್ದು, ದಂಡ ಕಟ್ಟಲು ರವಿಶಂಕರ್ ಗುರೂಜಿ ನಿರಾಕರಿಸಿ, ಜೈಲಿಗೆ ಹೋಗಲು ಸಿದ್ಧ ಎಂದಿದ್ದಾರೆ.
'ಮಾರ್ಚ್ 11ರಂದು ಯಮುನಾ ನದಿ ತೀರದಲ್ಲೇ ನಿಗದಿಯಂತೆ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ನಡುವೆ ಆರ್ಟ್ ಆಫ್ ಲಿವಿಂಗ್ ಮೇಲೆ ರಾಷ್ಟೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) 5 ಕೋಟಿ ರು ದಂಡ ವಿಧಿಸಿರುವುದು ಸರಿಯಿಲ್ಲ. ದಂಡ ಪಾವತಿ ಮಾಡುವುದಿಲ್ಲ. ಈ ವಿಷಯವಾಗಿ ಜೈಲಿಗೆ ಹೋಗಲು ಸಿದ್ಧ' ಎಂದು ಪ್ರತಿಕ್ರಿಯಿಸಿದ್ದಾರೆ. [ಎಒಎಲ್ ಗೆ 5 ಕೋಟಿ ರು ದಂಡ, ಉತ್ಸವಕ್ಕೆ ಗ್ರೀನ್ ಸಿಗ್ನಲ್]

ಯಮುನಾ ನದಿ ನೀರು ಹಾನಿಯಾಗಿರುವ ಕಾರಣ ಸುಮಾರು 100 ರಿಂದ 200 ಕೋಟಿ ರು ಪರಿಹಾರಕ್ಕೆ ಆಗ್ರಹಿಸಲಾಗಿತ್ತು. ಆದರೆ, ಪರಿಸರ ನಾಶ ಮಾಡಿದ ಕಾರಣಕ್ಕೆ ಆರ್ಟ್ ಆಫ್ ಲಿವಿಂಗ್ ಗೆ 5 ಕೋಟಿ ರು ದಂಡ ವಿಧಿಸಲಾಗಿದೆ. ಜೊತೆಗೆ ಯಮುನಾ ನದಿ ಪ್ರದೇಶದಲ್ಲಿ ಸಂಪೂರ್ಣವಾಗಿ ಜೀವ ವೈವಿಧ್ಯ ಉದ್ಯಾನ ನಿರ್ಮಿಸುವಂತೆ ಎಒಎಲ್ ಗೆ ಪ್ರಾಧಿಕಾರ ಸೂಚಿಸಿದೆ. [ಏನಿದು? ರವಿಶಂಕರ್ ಗುರೂಜಿ ಯಮುನಾ ನದಿ ತೀರ ವಿವಾದ]
ಹಸಿರು ಪ್ರಾಧಿಕಾರದ ನಿರ್ಣಯದಿಂದ ತೃಪ್ತರಾಗಿಲ್ಲ ಎಂದಿರುವ ರವಿಶಂಕರ್ ಗುರೂಜಿ ಅವರು ನೀಡಿದ ಪ್ರತಿಕ್ರಿಯೆ ಮುಂದಿದೆ...

ಆರ್ಟ್ ಆಫ್ ಲಿವಿಂಗ್ ನ ಪ್ರತಿನಿಧಿಗಳು ಸ್ಪಷ್ಟನೆ
ಈ ಕಾರ್ಯಕ್ರಮದ ಆಯೋಜನೆಯಿಂದ ಯಮುನಾ ನದಿ ಕಲುಷಿತಗೊಂಡಿದೆ ಎಂದು ಪರಿಸರವಾದಿಗಳು ಆರೋಪಿಸಿ, ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಈ ಬಗ್ಗೆ ಬುಧವಾರ ಆರ್ಟ್ ಆಫ್ ಲಿವಿಂಗ್ ನ ಪ್ರತಿನಿಧಿಗಳು ಸ್ಪಷ್ಟನೆ ನೀಡಿ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲು 15.63 ಕೋಟಿ ರು ವೆಚ್ಚವಾಗಿದ್ದು, ಅಲಂಕಾರಕ್ಕಾಗಿ 10 ಕೋಟಿ ರು ಖರ್ಚು ಮಾಡಲಾಗಿದೆ ಎಂದು ಹೇಳಿದ್ದರು.
|
ವಿಶ್ವ ಸಾಂಸ್ಕೃತಿಕ ಉತ್ಸವದ ಬಗ್ಗೆ ಶ್ರೀಶ್ರೀ ಟ್ವೀಟ್
172 ಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಪದಾಧಿಕಾರಿಗಳು, ಸಂಸದರು ವಿಶ್ವ ಸಾಂಸ್ಕೃತಿಕ ಉತ್ಸವ 2016ದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
|
ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆಯಿದೆ
155 ದೇಶಗಳಿಂದ 20,000ಕ್ಕೂ ಅಧಿಕ ಗಣ್ಯರು ಸೇರಿದಂತೆ ಲಕ್ಷಾಂತರ ಮಂದಿ ವಿಶ್ವಶಾಂತಿಗಾಗಿ ಪ್ರಾರ್ಥಿಸುವ ಕಾರ್ಯಕ್ರಮ ಇದಾಗಿದೆ.
|
ದೆಹಲಿಗರೇ, ಜಮೀನು ನೀಡಿ ಸ್ವರ್ಗ ನಿರ್ಮಿಸೋಣ
ದೆಹಲಿಗರೇ, ಯಮುನಾ ನದಿ ತೀರದಲ್ಲಿ ಸ್ವಲ್ಪ ಜಮೀನು ನೀಡಿ ಸ್ವರ್ಗ ನಿರ್ಮಿಸೋಣ
|
ನಮ್ಮ ಮೇಲೆ ದಂಡ ವಿಧಿಸಲಾಗಿದೆ
ನಮ್ಮ ಮೇಲೆ ದಂಡ ವಿಧಿಸಲಾಗಿದೆ. ನಾವು ಈ ನಿರ್ಣಯದಿಂದ ಸಂತುಷ್ಟರಾಗಿಲ್ಲ. ಸತ್ಯಮೇವ ಜಯತೇ












Click it and Unblock the Notifications