ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'M' ಪವರ್ ನಿಂದ Empower: ಸೈಬರ್ ಸ್ಪೇಸ್ ಸಮ್ಮೇಳನದಲ್ಲಿ ಮೋದಿ ಮೋಡಿ

|
Google Oneindia Kannada News

ನವದೆಹಲಿ, ನವೆಂಬರ್ 23: ತಂತ್ರಜ್ಞಾನ ನಮ್ಮ ನಡುವಿನ ಎಲ್ಲಾ ಗೋಡೆಗಳನ್ನೂ ಮುರಿಯುವಲ್ಲಿ ಯಶಸ್ವಿಯಾಗಿದೆ. ಅದು ಭಾರತೀಯ ಸಂಸ್ಕೃತಿಯ ಮೂಲತತ್ತ್ವವಾದ 'ವಸುಧೈವ ಕುಟುಂಬಕಂ' ಎಂಬುದನ್ನು ಪ್ರತಿಪಾದಿಸುತ್ತದೆ ಎಂದು ಭಾರತದಲ್ಲಾದ ಡಿಜಿಟಲ್ ಲೋಕದ ಪ್ರಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

ದೆಹಲಿಯಲ್ಲಿ ಇಂದು(ನ.23) 2 ದಿನಗಳ 5 ನೇ ಸೈಬರ್ ಸ್ಪೇಸ್ ಜಾಗತಿಕ ಸಮಾವೇಶವನ್ನು ಉದ್ಘಾಟಿಸಿದ ಅವರು ಡಿಜಿಟಲ್ ತಂತ್ರಜ್ಞಾನದಿಂದ ಭಾರತದಲ್ಲಾದ ಹಲವು ಧನಾತ್ಮಕ ಬದಲಾವಣೆಗಳನ್ನು ಮುಕ್ತಕಂಠದಲ್ಲಿ ಹೊಗಳಿದರು.

ಮೋದಿ, ಚಾಯ್ ವಾಲಾರನ್ನು ಅಣಕಿಸಿದ ಕಾಂಗ್ರೆಸ್ ಗೆ ಜನರಿಂದ ಛೀಮಾರಿಮೋದಿ, ಚಾಯ್ ವಾಲಾರನ್ನು ಅಣಕಿಸಿದ ಕಾಂಗ್ರೆಸ್ ಗೆ ಜನರಿಂದ ಛೀಮಾರಿ

ಎರಡು ದಿನಗಳ ಈ ಸಮ್ಮೇಳನದ ಧ್ಯೇಯ ವಾಕ್ಯ, 'ಸೈಬರ್ ಫಾರ್ ಆಲ್: ಅ ಸೆಕ್ಯೂರ್ ಅಂಡ್ ಇನ್ ಕ್ಲೂಸಿವ್ ಸೈಬರ್ ಸ್ಪೇಸ್ ಫಾರ್ ಸಸ್ಟೆನೆಬಲ್ ಡೆವಲಪ್ ಮೆಂಟ್ ಎಂಬುದು.

ಮೋದಿ ಇಂಗ್ಲಿಷ್ ಬಗ್ಗೆ ಯುವ ಕಾಂಗ್ರೆಸ್ ನಿಂದ ಕೀಳು ಅಭಿರುಚಿ ಟ್ವೀಟ್ಮೋದಿ ಇಂಗ್ಲಿಷ್ ಬಗ್ಗೆ ಯುವ ಕಾಂಗ್ರೆಸ್ ನಿಂದ ಕೀಳು ಅಭಿರುಚಿ ಟ್ವೀಟ್

ಈ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹೇಳಿದ ಮಾತುಗಳು ಇಲ್ಲಿವೆ...

ಭ್ರಷ್ಟಾಚಾರ ನಿಯಂತ್ರಣಕ್ಕೆ ಕಾರಣವಾದ 3 ಅಂಶಗಳು!

ಭ್ರಷ್ಟಾಚಾರ ನಿಯಂತ್ರಣಕ್ಕೆ ಕಾರಣವಾದ 3 ಅಂಶಗಳು!

'ಜನ್ ಧನ್ ಬ್ಯಾಂಕ್ ಖಾತೆ, ಆಧಾರ್ ಮತ್ತು ಮೊಬೈಲ್ ಫೋನ್ ಈ ಮೂರು ಅಂಶಗಳು ಭಾರತದಲ್ಲಿ ಭ್ರಷ್ಟಾಚಾರ ನಿಯಂತ್ರಣ ಮತ್ತು ಪಾರದರ್ಶಕ ಆಡಳಿತದಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ'

ಗೋಡೆಗಳನ್ನು ಕೆಡವಿದ ಡಿಜಿಟಲ್ ತಂತ್ರಜ್ಞಾನ

ಗೋಡೆಗಳನ್ನು ಕೆಡವಿದ ಡಿಜಿಟಲ್ ತಂತ್ರಜ್ಞಾನ

ದಕ್ಷ ಸೇವೆ ಮತ್ತು ಆಡಳಿತದಲ್ಲಿ ತಂತ್ರಜ್ಞಾನದ ಪಾತ್ರ ಅಪಾರವಾದುದು. ಇದು ನಮ್ಮ ನಡುವಿನ ಗೋಡೆಗಳನ್ನೆಲ್ಲ ಕೆಡವಿ, ವಸುಧೈವ ಕುಟುಂಬಕಂ ಎಂಬ ತತ್ತ್ವದಡಿಯಲ್ಲಿ ನಾವೆಲ್ಲರೂ ಬದುಕುವಂತೆ ಮಾಡುತ್ತಿದೆ. ಇಡಿ ವಿಶ್ವವೂ ಒಂದೇ ಕುಟುಂಬ ಎಂಬ ಭಾವವನ್ನು ಗಟ್ಟಿಗೊಳಿಸುತ್ತಿದೆ.

'M' ಪವರ್- ಎಂಪವರ್!

'M' ಪವರ್- ಎಂಪವರ್!

ನಾವು ಮೊಬೈಲ್ ಗಳನ್ನು ನಮ್ಮ ಪ್ರಗತಿಗಾಗಿ, ಸಬಲರಾಗುವುದಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ಮೊಬೈಲ್ ಅನ್ನು 'M' ಪವರ್ ಎಂದು ಕರೆದರೆ ಅದರಿಂದಲೇ ನಾವು empower (ಸಬಲ) ಆಗುತ್ತಿದ್ದೇವೆ ಎಂದು ಮಾರ್ಮಿಕವಾಗಿ ಮೋದಿ ಹೇಳಿದರು.

ಭಯೋತ್ಪಾದಕರಿಗೆ ಆಟದ ವಸ್ತುವಾಗದಿರಲಿ

ಭಯೋತ್ಪಾದಕರಿಗೆ ಆಟದ ವಸ್ತುವಾಗದಿರಲಿ

"ಸೈಬರ್ ಸ್ಪೇಸ್ ಎಂಬುದು ಭಯೋತ್ಪಾದಕರು ಮತ್ತು ಮೂಲಭೂತವಾದಿಗಳಿಗೆ ಆಟದ ವಸ್ತುವಾಗದಂಗತೆ ನೋಡಿಕೊಳ್ಳುವ ಹೊಣೆಯೂ ದೇಶದ ಮೇಲಿದೆ. ಆದ್ದರಿಂದ ಸೈಬರ್ ಸ್ಪೇಸ್ ನಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನೂ ಅಲ್ಲಗಳೆಯಬಾರದು"

English summary
Digital technology has emerged as a great enabler, it paves way for efficient service delivery & governance: PM Modi at 5th Global Conference on Cyberspace in Delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X