ವಾಜಪೇಯಿ ಅಂತಿಮ ದರ್ಶನ ಪಡೆದ ದೇವೇಗೌಡ, ಕುಮಾರಸ್ವಾಮಿ
Recommended Video

ನವದೆಹಲಿ, ಆಗಸ್ಟ್ 17: ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರೂ ಸಹ ಇಂದು ದೆಹಲಿಗೆ ತೆರಳಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆದರು.
ಕೃಷ್ಣ ಮೆನನ್ ರಸ್ತೆಯಲ್ಲಿ ಅಟಲ್ ಜೀ ಅವರ ನಿವಾಸಕ್ಕೆ ತೆರಳಿದ ಇಬ್ಬರೂ ರಾಜ್ಯದ ನಾಯಕರು ಅಲ್ಲಿಯೇ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಜೀ ಅವರ ಅಗಲಿಕೆ ಬಗ್ಗೆ ನಿನ್ನೆಯೇ ದೇವೇಗೌಡ ಅವರು ಹಾಗೂ ಕುಮಾರಸ್ವಾಮಿ ಅವರಿಬ್ಬರೂ ಸಂತಾಪ ವ್ಯಕ್ತಪಡಿಸಿದ್ದರು. ಇಂದು ಅಂತಿಮ ದರ್ಶನದ ಬಳಿಕ ದೇವೇಗೌಡ ಅವರು ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿದ್ದಾರೆ.

ದೇವೇಗೌಡ ಅವರು ವಾಜಪೇಯಿ ಅವರೊಂದಿಗೆ ತಮ್ಮ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದರು. ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡುವ ಸಮಯದಲ್ಲಿ ತಮಗೆ ಕರೆ ಮಾಡಿದ್ದ ವಾಜಪೇಯಿ ಅವರು ಅಧಿಕಾರ ಉಳಿಸಿಕೊಡುವುದಾಗಿ ಹೇಳಿದ್ದರು ಎಂದು ದೇವೇಗೌಡ ನೆನಪು ಮಾಡಿಕೊಂಡಿದ್ದರು.
ದೇವೇಗೌಡ, ಕುಮಾರಸ್ವಾಮಿ ಮಾತ್ರವಲ್ಲದೆ ರಾಜ್ಯದ ಹಲವು ಬಿಜೆಪಿ ಶಾಸಕರು, ಸಂಸದರು, ಮುಖಂಡರು ನವದೆಹಲಿಗೆ ತೆರಳಿ ಅಟಲ್ ಜೀ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿಯೂ ಭಾಗವಹಿಸಲಿದ್ದಾರೆ.












Click it and Unblock the Notifications