ಅಕ್ಷರಧಾಮದ ಬಳಿ ಕಾರಿಗೆ ಬೆಂಕಿ, ಮಹಿಳೆ ಇಬ್ಬರು ಪುತ್ರಿಯರ ಸಜೀವ ದಹನ
ನವದೆಹಲಿ, ಮಾರ್ಚ್ 11: ಕಾರಿಗೆ ಬೆಂಕಿ ಹೊತ್ತಿಕೊಂಡು ಒಳಗಿದ್ದ ಮಹಿಳೆ ಹಾಗೂ ಇಬ್ಬರು ಪತ್ರಿಯರು ಸಜೀವ ದಹನವಾಗಿರುವ ಘಟನೆ ಪೂರ್ವ ದೆಹಲಿಯಲ್ಲಿ ಭಾನುವಾರ ಸಂಜೆ 6.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಅಕ್ಷರಧಾಮ ದೇವಾಲಯದ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣದಲ್ಲಿಯೇ ಸಂಪೂರ್ಣವಾಗಿ ಬೆಂಕಿ ಕಾರನ್ನು ಆಕ್ರಮಿಸಿಕೊಂಡಿತ್ತು. ಇದರ ಪರಿಣಾಮ 35 ವರ್ಷದ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಜೀವದಹನವಾಗಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಆರಿಸುವಾಗ ಮಹಿಳೆಯ ಶವ ಪತ್ತೆ
ಡಾಟ್ಸನ್ ಗೋ ಕಾರಿನಲ್ಲಿ ಮೂವರು ಮಕ್ಕಳನ್ನು ಒಳಗೊಂಡ ಕುಟುಂಬ ಪ್ರಯಾಣಿಸುತ್ತಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಕಾರಿನ ಹಿಂಬದಿ ಗ್ಯಾಸ್ ಸಂಗ್ರಹದಲ್ಲಿ ಉಂಟಾದ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ.
ಒಬ್ಬಳು ಮಗಳು ತಕ್ಷಣವೇ ಕಾರಿನಿಂದ ಹೊರಬಂದಿದ್ದಾಳೆ. ರಂಜನಾ ಮಿಶ್ರಾ, ರಿಧಿ ಹಾಗೂ ನಿಕ್ಕಿ ಸಾವಿಗೀಡಾದವರು. ಕಾರಿನಿಂದ ಹೊರಬರಲಾರದೆ ಅಲ್ಲಿಯೇ ಬೆಂದು ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದಾರೆ.