ದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ: ಎಬಿವಿಪಿ ಜಯಭೇರಿ

Written By:
Subscribe to Oneindia Kannada

ನವದೆಹಲಿ, ಸೆ 10: ಭಾರೀ ಕುತೂಹಲ ಹುಟ್ಟು ಹಾಕಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಯಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಯಭೇರಿ ಭಾರಿಸಿದೆ.

ಎಬಿವಿಪಿ ಮೂರು ಸ್ಥಾನವನ್ನು ಗೆದ್ದರೆ, ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆಯಾಗಿರುವ NSUI ಒಂದು ಸ್ಥಾನವನ್ನು ಗೆದ್ದಿದೆ.

ಎಬಿವಿಪಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನವನ್ನು ಗೆದ್ದಿದ್ದರೆ, NSUI ಜಂಟಿ ಕಾರ್ಯದರ್ಶಿ ಸ್ಥಾನದಲ್ಲಿ ಗೆಲುವು ಸಾಧಿಸಿದೆ. ವಿದ್ಯಾರ್ಥಿ ಸಂಘದ ವಿವಿಧ ಹುದ್ದೆಗೆ ಶುಕ್ರವಾರ (ಸೆ 9) ಚುನಾವಣೆ ನಡೆದಿತ್ತು.

ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಮಿತ್ ತನ್ವರ್, ಉಪಾಧ್ಯಕ್ಷರಾಗಿ ಪ್ರಿಯಾಂಕ ಛಬ್ರಿ, ಅಂಕಿತ್ ಸಂಘ್ವಾನ್ ಕಾರ್ಯದರ್ಶಿಯಾಗಿ ಮತ್ತು ಮೋಹಿತ್ ಗರಿದ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಅಮಿತ್ ತನ್ವರ್ 16,357, ಪ್ರಿಯಾಂಕಾ ಛಬ್ರಿ 15,592, ಅಂಕಿತ್ 15,516 ಮತ್ತು ಮೋಹಿತ್ ಗರಿದ್ 16,526 ಮತಗಳನ್ನು ಪಡೆದಿದ್ದಾರೆ.

ವೆಂಕಯ್ಯ ನಾಯ್ಡು ಸೇರಿ, ಎಬಿವಿಪಿ ವಿದ್ಯಾರ್ಥಿ ಮುಖಂಡರಿಗೆ ಅಭಿನಂದನೆಯ ಮಹಾಪೂರ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಎಬಿವಿಪಿ ಕಾರ್ಯಕರ್ತರು

ಸಂಘಟನೆಯ ಮುಖಂಡರ ಜಯಕ್ಕೆ ಕಾರ್ಯಕರ್ತರಿಂದ ವಿಜಯೋತ್ಸವ.

ಬಿಜೆಪಿ ಮುಖಂಡರ ಅಭಿನಂದನೆ

ಎಬಿವಿಪಿ ಸಂಘಟನೆಯ ಮೇಲೆ ನಂಬಿಕೆಯಿಟ್ಟಿದ್ದಕ್ಕೆ ಅಭಿನಂದನೆ ಎಂದು ಬಿಜೆಪಿ ಮುಖಂಡ ಶಾನವಾಜ್ ಹುಸೇನ್ ಟ್ವೀಟ್ ಮಾಡಿದ್ದಾರೆ.

ನಾಯಕರಿಂದ ಅಭಿನಂದನೆ

ದೆಹಲಿ ವಿವಿ ಚುನಾವಣೆ ಗೆದ್ದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಬಿಜೆಪಿಯ ಮತ್ತೋರ್ವ ನಾಯಕಿ ಮೀನಾಕ್ಷಿ ಲೇಖಿ ಟ್ವೀಟ್ ಮಾಡಿದ್ದಾರೆ.

ಎಬಿವಿಪಿ ರಾಷ್ಟ್ರೀಯತೆ

ಎಬಿವಿಪಿ ದೇಶದ ಸಂಸ್ಕೃತಿ ಮತ್ತು ರಾಷ್ಟ್ರೀಯತೆಗೆ ಬದ್ದವಾಗಿದೆ ಎಂದು ಪ್ರೊ. ರಾಕೇಶ್ ಸಿನ್ಹಾ ಟ್ವೀಟ್

ವೆಂಕಯ್ಯ ನಾಯ್ಡು ಅಭಿನಂದನೆ

ಎಬಿವಿಪಿ ಎಲ್ಲಾ ಮುಖಂಡರಿಗೆ ಅಭಿನಂದನೆ. ಯುವ ಸಮುದಾಯದ ಹೊಸ ಚಿಂತನೆ ಚುನಾವಣೆಯ ಫಲಿತಾಂಶ ತೋರಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Delhi University students union poll: ABVP sweeps election with top three posts and NSUI wins one.
Please Wait while comments are loading...