ಪ್ರಧಾನಿ ಮೋದಿ ನಿವಾಸದ ಬಳಿ ಫೈರಿಂಗ್ ಆಗಿದ್ದೇಕೆ?

ನವದೆಹಲಿ, ನ.19: ನಂ.7, ರೇಸ್ ಕೋರ್ಸ್ ರಸ್ತೆ (7 ಆರ್ ಸಿಆರ್) ಬಳಿ ಬುಧವಾರ ರಾತ್ರಿ ಮೂರು ಸುತ್ತಿನ ಫೈರಿಂಗ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಗನ್ ಫೈರ್ ಆಗಿದ್ದು ಸಹಜವಾಗಿ ಆತಂಕ ಮೂಡಿಸಿದೆ. ಇಷ್ಟಕ್ಕೂ ಫೈರ್ ಆಗಿದ್ದು ಏಕೆ ಮುಂದೆ ಓದಿ...

ಬುಧವಾರ ರಾತ್ರಿ 8.30 ರ ಸುಮಾರಿಗೆ ಮೂರು ಸುತ್ತಿನ ಗುಂಡು ಹಾರಿಸಿರುವುದು ಕೇಳಿ ಬಂದಿದೆ. ತಕ್ಷಣವೇ ಪ್ರಧಾನಿ ಅವರ ಆಪ್ತ ಅಂಗರಕ್ಷಕರು ಅಲರ್ಟ್ ಘೋಷಿಸಿ ನಿವಾಸದ ಸುತ್ತ ಮುತ್ತಾ ತಪಾಸಣೆ ಮಾಡಿದ್ದಾರೆ.

Shocking: Why gunfire were shot near PM Narendra Modi's residence in Delhi

ನಂತರ ಪಿಸಿಆರ್ ವಿಂಗ್ ನ ಕಾನ್ಸ್ ಟೇಬಲ್ ಒಬ್ಬರ ಬಳಿ ಇದ್ದ ಎಕೆ 47ನಿಂದ ಆಕಸ್ಮಿಕವಾಗಿ ಫೈರಿಂಗ್ ಆಗಿದೆ. ಶಿಫ್ಟ್ ಮುಗಿಸಿಕೊಂಡು ಮತ್ತೊಬ್ಬರಿಗೆ ಕೆಲಸ ವಹಿಸಿಕೊಡುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆದರೂ, ಈ ಘಟನೆ ಬಗ್ಗೆ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಪ್ರಧಾನಿ ನಿವಾಸದ ಎದುರುಗಡೆ ಇರುವ ಮಾಧ್ಯಮಗಳ ಪಾರ್ಕಿಂಗ್ ಲಾಟ್ ನಲ್ಲಿ ಎಕೆ 47ನಿಂದ ಮೂರು ಸುತ್ತಿನ ಗುಂಡು ಹಾರಿರುವುದು ತಿಳಿದು ಬಂದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ದೆಹಲಿ ಡಿಸಿಪಿ ಜತಿನ್ ನರ್ವಾಲ್ ಹೇಳಿದ್ದಾರೆ. ಸದ್ಯಕ್ಕೆ ಯಾರ ವಿರುದ್ಧವೂ ಎಫ್ ಐಆರ್ ಹಾಕಿಲ್ಲ, ಕೂಲಂಕುಷ ತನಿಖೆ ನಡೆಸಲಾಗುವುದು ಎಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+