ದೆಹಲಿಯಲ್ಲಿ ಜಿಗ್ನೇಶ್ ಯಾತ್ರೆಗೆ ಅನುಮತಿ ನಿರಾಕರಣೆ

Posted By:
Subscribe to Oneindia Kannada

ನವದೆಹಲಿ, ಜನವರಿ, 09: ನವದೆಹಲಿಯ ಪಾರ್ಲಿಪೆಂಟ್ ರಸ್ತೆಯಲ್ಲಿ ಗುಜರಾತಿನ ವಡ್ಗಾಂ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್ ಮೆವಾನಿ ನಡೆಸಲು ಇಚ್ಛಿಸಿದ್ದ ಯಾತ್ರೆಗೆ ಇದುವರೆಗೂ ಅನುಮತಿ ದೊರಕಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯ ಯಾತ್ರೆ ಅಥವಾ ಯುವ ಹೂಂಕಾರ್ rally ಎಂಬ ಹೆಸರಿನಲ್ಲಿ ಜಾಥಾ ನಡೆಸಲು ಜಿಗ್ನೇಶ್ ಮೇವಾನಿ ಮತ್ತು ಅಸ್ಸಾಮಿನ ರೈತ ಮುಖಂಡ ಅಖಿಲ್ ಗೋಗೋಯ್ ನಿರ್ಧರಿಸಿದ್ದರು. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಈ ಜಾಥಾಕ್ಕೆ ಅನುಮತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

21ನೇ ಶತಮಾನದ ಜಗತ್ತಿನ ಅದ್ಭುತ ನಟ ಭಾರತದವರು: ಮೋದಿ ಬಗ್ಗೆ ವ್ಯಂಗ್ಯ

ಆದರೆ ಅಸಮ್ಮತಿಯ ನಡುವೆಯೂ ತಮ್ಮ ಯೋಜನೆಯಂತೆ ಜಾಥಾ ನಡೆಸಲಾಗುವುದು ಎಂದು ಮೆವಾನಿ ಹೇಳಿದ್ದಾರೆ.

Delhi police refuses to grant permission to Mewani's Delhi rally

2018ರ ಚುನಾವಣೆ : ಜಿಗ್ನೇಶ್ ಮೇವಾನಿ ಹೇಳಿದ್ದೇನು?

ಪುಣೆಯಲ್ಲಿ ಜಿಗ್ನೇಶ್ ಮೆವಾನಿ ಅವರ ಪ್ರಚೋದನಾಕಾರಿ ಭಾಷಣದಿಂದಾಗಿ ಇತ್ತೀಚೆಗೆ ತಾನೇ ಮಹಾರಾಷ್ಟ್ರದಾದ್ಯಂತ ಗಲಭೆ ಏರ್ಪಟ್ಟ ಹಿನ್ನೆಲೆಯಲ್ಲಿ ಮತ್ತೆ ಇಂಥ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದೆಂಬ ಉದ್ದೇಶಕ್ಕೆ ಯಾತ್ರೆಗೆ ಅನುಮತಿ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Delhi Police said that Vadgam MLA Jignesh Mevani's request for holding a rally on Tuesday on Parliament Street has not been granted yet. The police had earlier said that Mevani's request was "under consideration".

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ