ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ವಿವಾದದಲ್ಲಿ ದೆಹಲಿ ಮೆಟ್ರೋ ರೈಲು

By Mahesh
|
Google Oneindia Kannada News

ನವದೆಹಲಿ, ಸೆ.18: ಕಳೆದ ಕೆಲ ತಿಂಗಳಿಂದ ಕಾಡುತ್ತಿದ್ದ ಎಂಎಂಎಸ್ ಪ್ರಕರಣದಿಂದ ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (ಡಿಎಂಆರ್ ಸಿ) ಪಾಠ ಕಲಿತಿದೆ. ಎಂದು ಜನತೆ ಅಂದುಕೊಳ್ಳುವಷ್ಟರಲ್ಲೇ ಮತ್ತೊಂದು ವಿವಾದ ಭುಗಿಲೆದ್ದಿದೆ. ರೂಮ್ ನಿರ್ಮಿಸಿ ಅಗತ್ಯ ಬಿದ್ದ ಜೋಡಿಜೀವಗಳು ನೆಲೆಸಲು ಅವಕಾಶ ನೀಡಲು ಮುಂದಾಗಿದೆ.

ಪ್ರಯಾಣದ ಸಂದರ್ಭದಲ್ಲಿ ಜೋಡಿಗಳು ಏಕಾಂತ ಅನುಭವಿಸಲು ಸೂಕ್ತ ಸ್ಥಳ ಅಭಾವವಾಗುತ್ತಿದೆ ಎಂಬುದನ್ನು ಮನಗಂಡ ದೆಹಲಿ ಮೆಟ್ರೋ ಪ್ರಯಾಣಿಕರಿಗೆ ಹೊಸ ಆಫರ್ ನೀಡುತ್ತಿದೆಯಂತೆ, ರೈಲು ನಿಲ್ದಾಣಗಳಿಗೆ ಭೇಟಿ ಕೊಡಿ ಅಲ್ಲಿ ನಿಮಗೆ ಕೋಣೆಗಳು, ಟಾಯ್ಲೆಟ್ ಎಲ್ಲ ಬಾಡಿಗೆಗೆ ಲಭ್ಯ ಎಂದು ಮೆಟ್ರೋ ಹೇಳುತ್ತಿದೆ.

ಕೆಲ ತಿಂಗಳ ಹಿಂದೆ ರೈಲು ಬೋಗಿಗಳಲ್ಲೇ ಇಂಥ ಪ್ರಕರಣಗಳು ಬೆಳಕಿಗೆ ಬಂದು ತಲೆ ತಗ್ಗಿಸಿದ್ದ ಮೆಟ್ರೋ ಸಂಸ್ಥೆ ಈಗ ಹೊಸ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಜೀ ಸುದ್ದಿ ವಾಹಿನಿಯಿಂದ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಿಬ್ಬಂದಿಯ ಈ ದಂಧೆ ಬಯಲಾಗಿದೆ.

Delhi Metro rents out rooms to couples on hourly basis

ಈ ದೃಶ್ಯಗಳನ್ನು ಸೆರೆ ಹಿಡಿದಿರುವ ಸಿಡಿಯೊಂದನ್ನು ಮೆಟ್ರೋ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ನೀಡಲಾಗಿದೆ. ಸಾರ್ವಜನಿಕರ ಬಳಕೆಗಾಗಿ ಇರುವ ಕೋಣೆಗಳು, ಟಾಯ್ಲೆಟ್ ಗಳಿಗೆ ಸ್ಥಳ ಸಿಗದೆ ಪರದಾಡುವ ಜೋಡಿಗಳಿಗೆ ಮೆಟ್ರೊ ಸಿಬ್ಬಂದಿ ಬಾಡಿಗೆಗೆ ಕೊಡುತ್ತಿದ್ದಾರೆ.

ಇದಕ್ಕಾಗಿ ಒಂದು ಗಂಟೆಗೆ 300ರಿಂದ 500 ರೂ. ವಸೂಲಿ ಮಾಡಲಾಗುತ್ತಿದೆ. ಇಂಥ ಅನೈತಿಕ ಚಟುವಟಿಕೆಗಳು ದೆಹಲಿಯ ಕನಿಷ್ಟ 18 ನಿಲ್ದಾಣಗಳಲ್ಲಿ ನಡೆಯುತ್ತಿದ್ದು, ಮುಖ್ಯವಾಗಿ ರೇಸ್ ಕೋರ್ಸ್, ಅಶೋಕ ಪಾರ್ಕ್, ಗ್ರೀನ್ ಪಾರ್ಕ್ ಮತ್ತು ಜೋರ್ ಬಾಗ್ ನಿಲ್ದಾಣಗಳಾಗಿವೆ.

ಡೆಲ್ಲಿ ಮೆಟ್ರೋ ರೈಟ್ ಕಾರ್ಪೋರೇಷನ್ ನ (ಡಿಎಂಆರ್ ಸಿ) ಅಧಿಕಾರಿಗಳಿಗೆ ಈ ಸಿಡಿಗಳನ್ನು ತಲುಪಿಸಿದ್ದು, ಇಂತಹ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದರೆ ಅಂಥ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ ಈ ಕೊಠಡಿಗಳು, ಟಾಯ್ಲೆಟ್‌ಗಳನ್ನು ಖಾಸಗಿಯವರು ನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಮೆಟ್ರೊ ರೈಲುಗಳಲ್ಲಿಯೇ ಅನೇಕ ಜೋಡಿಗಳು ಅಶ್ಲೀಲವಾಗಿ, ಅನೈತಿಕವಾಗಿ ವರ್ತಿಸಿದ್ದ ಅಶ್ಲೀಲ ಚಿತ್ರಗಳು ಮೆಟ್ರೋದಲ್ಲಿನ ಸಿಸಿ ಟಿವಿಗಳಲ್ಲಿ ಸೆರೆಯಾಗಿದ್ದನ್ನು ವೀಕ್ಷಿಸಿದ ಸಾರ್ವಜನಿಕರು ಮೆಟ್ರೊ ಕಾರ್ಪೋರೇಷನ್ ಗೆ ಛೀಮಾರಿ ಹಾಕಿದ್ದರು. ಈಗ ಮತ್ತೆ ಮೆಟ್ರೋ ಜನತೆಯಲ್ಲಿ ಅಸಹ್ಯ ಹುಟ್ಟಿಸಿದೆ.ಅಪರಾಧಿಗಳು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಖಂಡಿತ ಎಂದು ಡಿಎಂಆರ್‌ಸಿ ಅಧಿಕಾರಿ ಅನುಜ್ ದಯಾಳ್ ತಿಳಿಸಿದ್ದಾರೆ.

English summary
After being in the news for invasion of privacy of individuals about two months back, the Delhi Metro Rail Corporation (DMRC) is embroiled in a fresh controversy, where couples can rent out rooms on hourly basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X