ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಮಾಡಿದ ಎಡವಟ್ಟು; 68 ವೈದ್ಯರು, ಸಿಬ್ಬಂದಿಗೆ ಹೋಂ ಕ್ವಾರಂಟೈನ್

|
Google Oneindia Kannada News

ನವದೆಹಲಿ, ಏಪ್ರಿಲ್ 16 : ನವದೆಹಲಿಯ ಸರ್ಕಾರಿ ಆಸ್ಪತ್ರೆಯೊಂದರ 68 ವೈದ್ಯರು, ನರ್ಸ್ ಮತ್ತು ಇತರ ಸಿಬ್ಬಂದಿಗಳಿಗೆ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ 25 ವರ್ಷದ ಮಹಿಳೆ ಬುಧವಾರ ರಾತ್ರಿ ಮೃತಪಟ್ಟಿದ್ದಳು.

ವಾಯುವ್ಯ ದೆಹಲಿಯಲ್ಲಿರುವ ಭಗವಾನ್ ಮಹಾವೀರ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ. ಸೋಮವಾರ ಗರ್ಭಿಣಿ ಮಹಿಳೆಯೊಬ್ಬಳು ಆಸ್ಪತ್ರೆಗೆ ದಾಖಲಾಗಿದ್ದಳು. ಉಸಿರಾಟದ ತೊಂದರೆ ಉಂಟಾದಾಗ ಆಕೆಗೆ ವೆಂಟಿಲೇಟರ್ ಅಳವಡಿಕೆ ಮಾಡಲಾಗಿತ್ತು.

ದೇಶದಲ್ಲಿ ಕೊರೊನಾ ಸೋಂಕಿಗೆ ಮೊದಲ ವೈದ್ಯ ಬಲಿ ದೇಶದಲ್ಲಿ ಕೊರೊನಾ ಸೋಂಕಿಗೆ ಮೊದಲ ವೈದ್ಯ ಬಲಿ

ಬುಧವಾರ ರಾತ್ರಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆಕೆಗೆ ಕೊರೊನಾ ಸೋಂಕು ಹಬ್ಬಿರುವ ಶಂಕೆ ಹಿನ್ನಲೆಯಲ್ಲಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಕ್ವಾರಂಟೈನ್‌ನಲ್ಲಿರಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮಹಿಳೆ ಆಸ್ಪತ್ರೆ ಸೇರುವಾಗ ಮಾಡಿದ ಯಡವಟ್ಟಿನಿಂದ ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ.

ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕಲಬುರಗಿ ವೈದ್ಯ ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕಲಬುರಗಿ ವೈದ್ಯ

Delhi Hospital 68 Doctors Under Home Quarantine

ಮಹಿಳೆ ತನ್ನ ವಿದೇಶ ಪ್ರವಾಸದ ವಿವರವನ್ನು ನೀಡದೆ, ಹೋಂ ಕ್ವಾರಂಟೈನ್‌ನಲ್ಲಿರಬೇಕಾದ ವಿವರವನ್ನು ಮುಚ್ಚಿಟ್ಟು ಆಸ್ಪತ್ರೆಗೆ ದಾಖಲಾಗಿದ್ದಳು. ಬುಧವಾರ ಆಕೆ ವಿದೇಶದಿಂದ ಮರಳಿದ್ದೆ, ಕೊರೊನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದೆ ಎಂಬ ಮಾಹಿತಿ ನೀಡಿದ್ದಳು.

ಫಿಜ್ಜಾ ಡೆಲಿವರಿ ಬಾಯ್‌ಗೆ ಕೊರೊನಾ ಸೋಂಕು; 72 ಕುಟುಂಬಕ್ಕೆ ಕ್ವಾರಂಟೈನ್ ಫಿಜ್ಜಾ ಡೆಲಿವರಿ ಬಾಯ್‌ಗೆ ಕೊರೊನಾ ಸೋಂಕು; 72 ಕುಟುಂಬಕ್ಕೆ ಕ್ವಾರಂಟೈನ್

ಆಸ್ಪತ್ರೆಗೆ ದಾಖಲಾದ ಮಹಿಳೆಯ ನಾಲ್ವರು ಕುಟುಂಬ ಸದಸ್ಯರಿಗೆ ಏಪ್ರಿಲ್ 10 ರಿಂದ 24ರ ತನಕ ಹೋ ಕ್ವಾರಂಟೈನ್‌ನಲ್ಲಿರಲು ಆರೋಗ್ಯ ಇಲಾಖೆ ಸೂಚನೆ ನೀಡಿತ್ತು. ಮಹಿಳೆ ಈ ವಿವರವನ್ನು ಮುಚ್ಚಿಟ್ಟು ಆಸ್ಪತ್ರೆಗೆ ದಾಖಲಾಗಿದ್ದಳು ಎಂದು ಆಸ್ಪತ್ರೆ ಪ್ರಕಟಣೆ ಹೇಳಿದೆ.

ಈ ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರು, ಸಂಪರ್ಕಕ್ಕೆ ಬಂದಿದ್ದ ಎಲ್ಲ ಸಿಬ್ಬಂದಿಗೂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ಮಹಿಳೆಗೆ ಕೊರೊನಾ ಸೋಂಕು ತಗುಲಿತ್ತೆ? ಎಂಬ ವರದಿ ಇನ್ನೂ ಬರಬೇಕಿದೆ.

ನವದೆಹಲಿಯಲ್ಲಿ ಇದುವರೆಗೂ 1578 ಕೊರೊನಾ ಪ್ರಕರಣಗಳು ದಾಖಲಾಗಿವೆ. 32 ಜನರು ಸೋಂಕಿಗೆ ಬಲಿಯಾಗಿದ್ದಾರೆ. ವಾಯುವ್ಯ ದೆಹಲಿಯಲ್ಲಿ 3 ಕೊರೊನಾ ಪ್ರಕರಣಗಳಿವೆ.

English summary
New Delhi Bhagwan Mahavir hospital 68 doctors, nurses and staff have been asked to be under home quarantine. 25-year-old patient who is suspected to have had coronavirus died on hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X