ಅರವಿಂದ್ ಕೇಜ್ರಿವಾಲ್ ಧರಣಿಗೆ ದೆಹಲಿ ಹೈಕೋರ್ಟ್ ಛೀಮಾರಿ!

ನವದೆಹಲಿ, ಜೂನ್ 18: ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿವಾಸದಲ್ಲಿ ಧರಣಿ ಕೂತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಡೆಗೆ ದೆಹಲಿ ಹೈಕೋರ್ಟ್ ಛೀಮಾರಿ ಹಾಕಿದೆ. ಈ ನಾಟಕ ಕರ್ತೃ ಯಾರು ಎಂದು ಸಹ ಪ್ರಶ್ನಿಸಿದೆ.

ಕಳೆದ ಏಳು ದಿನಗಳಿಂದ ಗವರ್ನರ್ ನಿವಾಸದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಚಿವರಾದ ಗೋಪಾಲ ರೈ, ಸತ್ಯೇಂದ್ರ ಕುಮಾರ್ ಜೈನ್ ಮುಂತಾದವರು ಧರಣಿ ನಡೆಸುತ್ತಿದ್ದಾರೆ. ಐಎಎಸ್ ಅಧಿಕಾರಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ಧರಣಿ ನಡೆಯುತ್ತಿದೆ.

ಫೆಬ್ರವರಿಯಲ್ಲಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಇಬ್ಬರು ಎಎಪಿ ಶಾಸಕರು ಮುಖ್ಯಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದರೆಂಬ ವಿ‌ಷಯಕ್ಕೆ ಸಂಬಂಧಿಸಿದಂತೆ, ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ನಾವು ಪ್ರತಿಭಟನೆ ನಡೆಸುತ್ತೇವೆಂದು ಐಎಎಸ್ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

Delhi HC pulls up AAP over sit-in at LGs office

ಯಾವುದೇ ಒಂದು ಕಚೇರಿ ಅಥವಾ ಮನೆಯ ಒಳಗೆ ನಡೆಸುವುದನ್ನು ಮುಷ್ಕರ ಎಂದು ಕರೆಯುವುದಕ್ಕಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಈ ಕುರಿತ ವಿಚಾರಣೆಯನ್ನು ಜೂನ್ 22 ಕ್ಕೆ ಮುಂದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+