ಗುಡಾಣದಂಥ ಹೊಟ್ಟೆಯಲ್ಲಿತ್ತು 12 ಚಿನ್ನದ ಬಿಸ್ಕತ್ತು!
ನವದೆಹಲಿ, ಏಪ್ರಿಲ್ 21: ದೆಹಲಿಯ ಚಾಂದಿನಿ ಚೌಕ್ ಮೂಲದ 63 ವರ್ಷದ ಉದ್ಯಮಿ. ಆದರೆ ಆತ ಹೊಟ್ಟೆಗೆ ಆಹಾರ ತೆಗೆದುಕೊಳ್ಳುವ ಬದಲು 12 ಚಿನ್ನದ ಬಿಸ್ಕತ್ತುಗಳನ್ನೇ ತಿಂದುಬಿಟ್ಟಿದ್ದ. ಹಾಗಂತ ಹಸಿವು ನೀಗಿಸಿಕೊಳ್ಳಲು ಪೊಪಾಟು ಬಿದ್ದು ಆತನೇನೂ ಚಿನ್ನದ ಬಿಸ್ಕತ್ ನುಂಗಿರಲಿಲ್ಲ. ಆತನಿಗೆ ಬೇರೆಯದ್ದೇ ಹಸಿವು ಇತ್ತು.
ಅದು ಹಣ ಮಾಡಬೇಕೆಂಬ ದುರಾಸೆ. ಅದಕ್ಕೇ ಆತ ಏನು ಮಾಡಿದನೆಂದರೆ ಮೊನ್ನೆ ಸಿಂಗಪುರದಿಂದ ಭಾರತಕ್ಕೆ ಬರುವಾಗ 12 ಬಂಗಾರದ ಬಿಸ್ಕತ್ತುಗಳನ್ನು ತಿಂದುಕೊಂಡು ಬಂದಿದ್ದ. ಅಂದರೆ ಅಕ್ರಮವಾಗಿ ಚಿನ್ನ ಸಾಗಿಸಲು ಆತ ಕಂಡುಕೊಂಡಿದ್ದ ಸುರಕ್ಷಿತ ಮಾರ್ಗ ಇದಾಗಿತ್ತು.
ಅದೂ ಅಷ್ಟೂ ಬಿಸ್ಕತ್ತುಗಳನ್ನು ಬೇರೆ ಲೋಹದಿಂದ ಮುಚ್ಚಿ, ನುಂಗಿಬಿಟ್ಟಿದ್ದ. ಇಂತಿಪ್ಪ ವ್ಯಾಪಾರಿ ಏಪ್ರಿಲ್ 9ರಂದು ದೆಹಲಿಗೆ ಬಂದಿಳಿದಾಗ ಅಲ್ಲಿನ ಸೀಮಾಸುಂಕ ಅಧಿಕಾರಿಗಳಿಗೂ ಗೊತ್ತಾಗಲಿಲ್ಲ. ಸಿಂಗಾಪುರದಿಂದ ಇಲ್ಲಿನ ವಿಮಾನದಲ್ಲಿ ಬಂದಿಳಿದ ವ್ಯಾಪಾರಿಯನ್ನು ಯಾವುದೇ ಅನುಮಾನ ಬಾರದಿರುವುದರಿಂದ ಸಾಮಾನ್ಯ ಪ್ರಯಾಣಿಕರಂತೆ ಕಳುಹಿಸಿಕೊಟ್ಟಿದ್ದರು.

ಸರಿ ಏರ್ ಪೋರ್ಟ್ ನಿಂದ ಯಶಸ್ವಿಯಾಗಿ ಹೊರಬಂದವನೇ ಸೀದಾ ಪ್ರಸಿದ್ಧ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರ ಬಳಿ ಧಾವಿಸಿದ್ದಾನೆ. 'ತನಗೆ ಹೊಟ್ಟೆಯಲ್ಲಿ ಹೆಂಗೆಂಗೋ ಆಗ್ತಿದೆ. ವಾಂತಿಗೆ ಬರೋಂಗೆ ಆಗುತ್ತಿದೆ. ಕಕ್ಕ ಬರ್ತಿದೆ. ತಡೆಯಕ್ಕಾಗ್ತಿಲ್ಲ. ಮೊದಲು ಹೊಟ್ಟೆ ಸೀಳಿ' ಎಂದು ದುಂಬಾಲು ಬಿದ್ದಿದ್ದಾನೆ.
ವೈದ್ಯರು ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಮುಚ್ಚಳ ಕಾಣದೇ ಲೋಹ ಪತ್ತೆಯಾಗಿದೆ. ಆದರೆ ಉದ್ಯಮಿ ಹೆಚ್ಚು ವಿಷಯ ಬಾಯ್ಬಿಟ್ಟಿಲ್ಲ. ಕಡೆಗೆ ವೈದ್ಯರು 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ನೋಡಿದಾಗ ದಂಗುಬಡಿದಿದ್ದಾರೆ. ಏಕೆಂದರೆ ಉದ್ಯಮಿಯ ಹೊಟ್ಟೆಯಿಂದ ಬರೋಬ್ಬರಿ 12 ಬಂಗಾರದ ಬಿಸ್ಕತ್ತುಗಳು ಹೊರಬಂದಿದ್ದವು!
ಅಲ್ಲಾ ಪೇಷೆಂಟುಗಳ ಹೊಟ್ಟೆಯಿಂದ ಏನೇನನ್ನೋ ತೆಗೆದುಹಾಕಿದ್ದೇನೆ. ಆದರೆ ಮೊದಲ ಬಾರಿಗೆ ಇಂತಹ ಪೇಷೆಂಟನ್ನು ನೋಡಿದೆ. ಅವನ ಹೊಟ್ಟೆಯಲ್ಲಿ ಬರೀ ಚಿನ್ನವೇ ತುಂಬಿತ್ತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಾದ ಡಾ ಸಿಎಸ್ ರಾಮಚಂದ್ರನ್ ತಿಳಿಸಿದ್ದಾರೆ.
ಒಂದೊಂದು ಬಿಸ್ಕತ್ತೂ 33 ಗ್ರಾಂ ತೂಗುತ್ತಿದ್ದವು. ಅದರ ಮೌಲ್ಯ ಒಟ್ಟು 12 ಲಕ್ಷ ರೂ.ನಷ್ಟಾಗುತ್ತದೆ. ವೈದ್ಯರು ತಡಮಾಡದೆ ತಕ್ಷಣ ಪೊಲೀಸರು ಮತ್ತು ಸೀಮಾಸುಂಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದೀಗ ಉದ್ಯಮಿ ಪೊಲೀಸರ ಅತಿಥಿಯಾಗಿದ್ದಾನೆ.
-
Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
Gold Price Update: ಆಭರಣಪ್ರಿಯರೇ ಗಮನಿಸಿ, ಇಂದು ಚಿನ್ನದ ಬೆಲೆ ಏರಿಕೆ- ಬೆಳ್ಳಿ ಸ್ಥಿರ, ಮಾರುಕಟ್ಟೆ ದರ ವಿವರ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications