ದೆಹಲಿಯಲ್ಲಿ 70,000 ಗಡಿ ದಾಟಿದ ಕೊರೊನಾ ಪಾಸಿಟಿವ್ ಕೇಸ್
ನವದೆಹಲಿ, ಜೂನ್ 24: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಪ್ರಕರಣಗಳು ದುಪ್ಪಟ್ಟಾಗುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 3,788 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 70 ಸಾವಿರ ಗಡಿ ದಾಟಿದೆ.
ದೆಹಲಿಯಲ್ಲಿ ಸದ್ಯ ಕೊರೊನಾವೈರಸ್ ಪ್ರಕರಣಗಳಲ್ಲಿ 26,588 ಸಕ್ರಿಯ ಪ್ರಕರಣಗಳಿವೆ, ಹಾಗೂ 41,437 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಇದರ ಜೊತೆಗೆ ಕೊರೊನಾಗೆ 2,365 ಜನರು ಬಲಿಯಾಗಿದ್ದಾರೆ.
ಜುಲೈ 6ರೊಳಗೆ ದೆಹಲಿಯ ಪ್ರತಿ ಮನೆಗಳಲ್ಲೂ ಕೊವಿಡ್ ಸ್ಕ್ರೀನಿಂಗ್
ಕೊರೊನಾವೈರಸ್ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಕೊವಿಡ್ ರೆಸ್ಪಾನ್ಸ್ ಯೋಜನೆಯಡಿ ಜುಲೈ 6ರೊಳಗೆ ಪ್ರತಿ ಮನೆಯಲ್ಲೂ ಕೊವಿಡ್ 19 ಸ್ಕ್ರೀನಿಂಗ್ ಮುಗಿಸಬೇಕು ಎಂದು ದೆಹಲಿ ಸರ್ಕಾರ ಸೂಚನೆ ನೀಡಿದೆ.
ಇದರ ಜೊತೆಗೆ ಕೇಂದ್ರ ಸರ್ಕಾರ, ಮಿಲಿಟರಿ ವೈದ್ಯರು ಮತ್ತು ದಾದಿಯರು ನಡೆಸುವ ತಾತ್ಕಾಲಿಕ ಸೌಲಭ್ಯಗಳಲ್ಲಿ ನಗರವು ಮುಂದಿನ ವಾರ ಸುಮಾರು 20,000 ಹೆಚ್ಚುವರಿ ಹಾಸಿಗೆಗಳನ್ನು ಹೊಂದಿರುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಧಾರ್ಮಿಕ ಕೇಂದ್ರವು ಆಯೋಜಿಸಿರುವ 10,000 ಹಾಸಿಗೆ ಸೌಲಭ್ಯ ಮತ್ತು ರೈಲ್ವೆ ಬೋಗಿಗಳನ್ನು ವಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5,50,000 ಕೋವಿಡ್-19 ಪ್ರಕರಣಗಳನ್ನು ಹೊಂದಿರುತ್ತದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ ಮತ್ತು ಆ ಹೊತ್ತಿಗೆ 1,50,000 ಹಾಸಿಗೆಗಳು ಬೇಕಾಗುತ್ತವೆ.