• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಕೊರೊನಾ ಹೆಚ್ಚಳ: ನಾಳೆ ಅಮಿತ್ ಷಾ ಮತ್ತು ಅರವಿಂದ್ ಕೇಜ್ರಿವಾಲ್ ಮಹತ್ವದ ಸಭೆ

|

ನವದೆಹಲಿ, ಜೂನ್ 13: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ಕೊರೊನಾವೈರಸ್ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸುತ್ತಿದ್ದು, ಸೋಂಕಿತರು ಮತ್ತು ಸಾವಿನ ಪ್ರಮಾಣ ಏರುತ್ತಲೇ ಸಾಗಿದೆ. ಹೀಗಾಗಿ ನಾಳೆ (ಜೂನ್ 14) ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಎಸ್‌ಡಿಎಂಎ ಸದಸ್ಯರನ್ನು ಭಾನುವಾರ ಭೇಟಿ ಮಾಡಿ ರಾಷ್ಟ್ರ ರಾಜಧಾನಿಯ ಪರಿಸ್ಥಿತಿಯನ್ನು ಚರ್ಚಿಸಲಿದ್ದಾರೆ.

   ಪರೋಟ ಮೇಲೆ ಮಾತ್ರ 18% GST , ರೂಟ್ಟಿ ಮೇಲೆ 5% ಮಾತ್ರ | Oneindia Kannada

   ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮತ್ತು ಇತರ ಹಿರಿಯ ಅಧಿಕಾರಿಗಳು ಗೃಹ ಸಚಿವರ ನೇತೃತ್ವ ವಹಿಸಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

   ಭಾರತದಲ್ಲಿ ಕೊರೊನಾ ದಿಕ್ಕು ಬದಲಿಸಿದ 'ಐದು' ಮಹಾನಗರಗಳು

   ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಕೊರೊನಾ ಬಿಕ್ಕಟ್ಟು ರಾಜ್ಯಕ್ಕೆ ಮತ್ತು ಕೇಂದ್ರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೂ ಮೊದಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ದೆಹಲಿ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಕೊರೊನಾ ಪರಿಸ್ಥಿತಿ ವಿಚಾರವಾಗಿ ನೋಟಿಸ್ ಕಳುಹಿಸಿದೆ. ದೆಹಲಿಯ ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೆನ್ ಅವರ ದೂರಿನ ಮೇರೆಗೆ, ಆಯೋಗವು ದೆಹಲಿಯಲ್ಲಿ ಜನರು ಎದುರಿಸುತ್ತಿರುವ ತೊಂದರೆಗಳನ್ನು ಉಲ್ಲೇಖಿಸಿದೆ.

   ರಾಷ್ಟ್ರ ರಾಜಧಾನಿ ದೆಹಲಿಯು ಇದುವರೆಗೂ ಸುಮಾರು 40,000 ಕೋವಿಡ್-19 ಪ್ರಕರಣಗಳು ಮತ್ತು 1,214 ಸಾವುಗಳನ್ನು ವರದಿ ಮಾಡಿದೆ. ಶುಕ್ರವಾರ ಒಂದೇ ದಿನ 2,137 ಹೊಸ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ.

   English summary
   Union Home Minister Amit Shah and Health Minister Dr Harsh Vardhan will meet Delhi Chief Minister Arvind Kejriwal and LG Anil Baijal at 11 am on Sunday to review the coronavirus situation in Delhi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X