• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವದ ಅತಿ ಹೆಚ್ಚು ಜನರುಳ್ಳ ನಗರಗಳಲ್ಲಿ ದೆಹಲಿ

By Mahesh
|
Google Oneindia Kannada News

ವಿಶ್ವಸಂಸ್ಥೆ, ಜು.11: ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ವಿಶ್ವದ ವಿವಿಧ ನಗರಗಳಲ್ಲಿನ ಜನಸಂಖ್ಯೆ ಪಟ್ಟಿಯನ್ನು ವಿಶ್ವಸಂಸ್ಥೆ ಹೊರಹಾಕಿದ್ದು, ಭಾರತದ ರಾಜಧಾನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅಚ್ಚರಿಯೆಂಬಂತೆ ಜಪಾನ್ ರಾಜಧಾನಿ ಟೋಕಿಯೋ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಪ್ರಸ್ತುತ ಟೋಕಿಯೋದಲ್ಲಿ 38 ಮಿಲಿಯನ್ ಜನಸಂಖ್ಯೆ ವಾಸ ಮಾಡುತ್ತಿದ್ದರೆ, ನವದೆಹಲಿಯಲ್ಲಿ 28 ಮಿಲಿಯನ್ ಜನ ವಾಸ ಮಾಡುತ್ತಿದ್ದಾರೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಆರನೇ ನಗರವೆಂಬ ಹೆಗ್ಗಳಿಕೆ ಪಡೆದುಕೊಂಡಿದೆ.

2030ರ ವೇಳೆಗೆ ದೆಹಲಿ ಜನಸಂಖ್ಯೆ 36 ಮಿಲಿಯನ್ ಆದರೆ ಟೋಕಿಯೋ ಜನಸಂಖ್ಯೆ 50 ಮಿಲಿಯನ್‌ಗೆ ದಾಟುವ ಸಂಭವವಿದೆ ಎಂದು ವರದಿ ಹೇಳಿದೆ. ಮುಂಬೈನಲ್ಲಿ ಪ್ರಸ್ತುತ 21 ಮಿಲಿಯನ್ ಜನಸಂಖ್ಯೆ ಇದ್ದರೆ, ಶಾಂಘೈ 23 ಮಿಲಿಯನ್, ಮೆಕ್ಸಿಕೋ, ಸಾ ಪಾಲೋ 21 ಮಿಲಿಯನ್ ಜನಸಂಖ್ಯೆ ಹೊಂದಿದೆ.

2014 ಮತ್ತು 2050ರ ಮಧ್ಯದ ಅವಧಿಯಲ್ಲಿ ಭಾರತ, ಚೀನಾ ಹಾಗೂ ನೈಜೀರಿಯಾ ದೇಶದ ಜನಸಂಖ್ಯೆಯಲ್ಲಿ ಶೇ.37ರಷ್ಟು ಜನಸಂಖ್ಯೆ ನಗರ ಪ್ರದೇಶಗಳಲ್ಲೇ ವಾಸ ಮಾಡುತ್ತಾರೆ.

ಇದೇ ವೇಳೆಗೆ ಭಾರತದಲ್ಲಿ 404 ಮಿಲಿಯನ್ ಜನಸಂಖ್ಯೆ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡಿದರೆ, ಚೀನಾದಲ್ಲಿ 292 ಮಿಲಿಯನ್, ನೈಜೀರಿಯಾ 212 ಮಿಲಿಯನ್‌ಗೆ ಏರಿಕೆಯಾಗುತ್ತದೆ. ಗ್ರಾಮೀಣ ಭಾಗಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಜನರು ತಮ್ಮ ಜೀವನಕ್ಕಾಗಿ ನಗರ ಪ್ರದೇಶಗಳತ್ತ ವಲಸೆ ಬರುವುದು ದುಪ್ಪಟ್ಟಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಭಾರತದಲ್ಲಿ ಯುವಕರ ಸಂಖ್ಯೆ ಅಧಿಕ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಟ್ವೀಟ್

ಪ್ರಸಕ್ತ ಚೀನಾದಲ್ಲಿ ನಗರ ವಾಸಿಗಳ ಸಂಖ್ಯೆ 758 ಮಿಲಿಯನ್ ಇದ್ದರೆ, ಭಾರತದಲ್ಲಿ 290 ಮಿಲಿಯನ್ ಇದೆ. ಚೀನಾದ ಒಟ್ಟು ಜನಸಂಖ್ಯೆಯಲ್ಲಿ ಶೇ.30ರಷ್ಟು ಜನರು ನಗರ ಪ್ರದೇಶಗಳಲ್ಲೇ ವಾಸ ಮಾಡುತ್ತಾರೆ.

2050೦ರ ವೇಳೆಗೆ ಅಮೆರಿಕ, ಭಾರತ, ಚೀನಾ, ಬ್ರೆಜಿಲ್, ಇಂಡೋನೇಷಿಯಾ, ಜಪಾನ್, ರಷ್ಯಾ ಸೇರಿದಂತೆ ಮುಂದುವರಿದ ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಜನಸಂಖ್ಯೆಯ ವಲಸೆ ಪ್ರಮಾಣ ಏರಿಕೆಯಾಗುತ್ತದೆ ಎಂದು ಹೇಳಲಾಗಿದೆ. ಭಾರತದ ಒಟ್ಟಾರೆ ಗ್ರಾಮೀಣ ನಿವಾಸಿಗಳ ಸಂಖ್ಯೆ 587 ಮಿಲಿಯನಷ್ಟಿದ್ದು, ಚೀನಾ 635 ಮಿಲಿಯನ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ.

English summary
Delhi has become the world’s second most populous city in 2014 after Tokyo, more than doubling its population since 1990 to 25 million, according to a UN report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X