ಆಮ್‌ ಆದ್ಮಿ ಸಚಿವೆ ರಾಖಿ ಬಿರ್ಲಾ ಕಾರಿನ ಮೇಲೆ ಬಿತ್ತು ಕಲ್ಲು

Delhi AAP Minister Rakhi Birla car attacked in Mangolpuri area
ನವದೆಹಲಿ, ಜ.6- ಪರಿಣಾಮಕಾರಿಯಾಗಿ ಕೆಲಸ ಮಾಡಲು ಜನಪ್ರತಿನಿಧಿಗಳಿಗೆ ಸರಕಾರಿ ಕಾರು/ ಬಂಗ್ಲೆ ಅತ್ಯಗತ್ಯ ಎಂದು ಪ್ರತಿಪಾದಿಸಲು ಹೊರಟಿರುವ ಆಮ್ ಆದ್ಮಿ ಅರವಿಂದ ಕೇಜ್ರಿವಾಲಾ ಅವರ ವಾದಕ್ಕೆ ಈಗ ಬಲವಾದ ಕಾರಣವೊಂದು ದೊರೆತಂತಿದೆ.

ಏನೆಂದರೆ ಆಮ್ ಆದ್ಮಿ ಪಕ್ಷದ ದಿಲ್ಲಿ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ರಾಖಿ ಬಿರ್ಲಾ ಅವರ ಕಾರಿನ ಮೇಲೆ ನಿನ್ನೆ ಸಂಜೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಕಾರನ್ನು ಜಖಂಗೊಳಿಸಿದ್ದಾರೆ. ಅದೃಷ್ಟವಷಾತ್ ಸಚಿವೆ ರಾಖಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಿಲ್ಲಿಯ ಪಡುವಣ ದಿಕ್ಕಿನಲ್ಲಿರುವ ಮಂಗಳಪುರಿ ಪ್ರದೇಶದಲ್ಲಿ ಈ ಕಹಿ ಘಟನೆ ನಡೆದಿದೆ. ಸ್ಥಳೀಯ ಶಾಸಕಿಯೂ ಆದ ರಾಖಿ ಅವರು ನಿನ್ನೆ ಸಂಜೆ ತಮ್ಮ WagonR ಕಾರಿನಲ್ಲಿ ಸಂತೋಷಿ ಮಾತಾ ಮಂದಿರದಲ್ಲಿ ಪೂಜೆಗೆಂದು ದೇವಸ್ಥಾನಕ್ಕೆ ತೆರಳಿದ್ದರು. ಆ ವೇಳೆ, ಕೆಲ ದುಷ್ಕರ್ಮಿಗಳು ಕಾರಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.

ಸಿಎಂ ಕೇಜ್ರಿವಾಲಾ ಅವರ ಸಂಪುಟದಲ್ಲಿ ಅತ್ಯಂತ ಕಿರಿಯ ಸಚಿವೆಯಾಗಿರುವ ರಾಖಿ ಅವರು ಕಾರಿನ ಮುಂಭಾಗದಲ್ಲಿ ಕುಳಿತಿದ್ದರು. ಕಾರಿನಲ್ಲಿ ಸಚಿವೆಯ ಜತೆಗೆ ಪಕ್ಷದ ಮೂವರು ಕಾರ್ಯಕರ್ತರೂ ಇದ್ದರು. ಘಟನೆಯ ನಂತರ ಸಚಿವೆ ರಾಖಿ ಅವರು ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ ಹಿಂದಿರುಗಿದ್ದಾರೆ.

ನಾನು ಕ್ಷೇಮವಾಗಿದ್ದೇನೆ. ಈ ಘಟನೆಯಿಂದ ನಾನು ಎದೆಗುಂದಿಲ್ಲ. ನಮ್ಮ ಪಕ್ಷದ ಹುತಾತ್ಮ ಸಂತೋಷ್ ಕೋಲಿ ಅವರೇ ನಮಗೆ ಆದರ್ಶ. ಹಾಗಾಗಿ, ಘಟನೆಯಿಂದ ಭಯಭೀತಳಾಗಿ ನಾನು ಯಾವುದೇ ರಕ್ಷಣೆ ಪಡೆದುಕೊಳ್ಳುವುದಿಲ್ಲ' ಎಂದು 26 ವರ್ಷದ ಸಚಿವೆ ರಾಖಿ ಪ್ರತಿಕ್ರಿಯಿಸಿದ್ದಾರೆ.

'ಜನನಿಬಿಡ ಪ್ರದೇಶದಲ್ಲಿ ಹಾದಹೂಗುತ್ತಿದ್ದ ರಾಖಿ ಅವರ WagonR ಕಾರಿನ ಮುಂದೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಗುಂಪು ಕಾರಿನ ಮೇಲೆ ದೊಡ್ಡ ಗಾತ್ರ ವಸ್ತುವನ್ನು ಬೀಸಿದ್ದಾರೆ. ಆಗ ಗಾಜು ಪುಡಿಪುಡಿಯಾಗಿದೆ' ಎಂದು AAP ವಕ್ತಾರರು ತಿಳಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಅಪರಿಚಿತ ದುಷ್ಕರ್ಮಿಗಳ ಬೇಟೆಯಾಡುತ್ತಿದ್ದಾರೆ. ( ಕೇಜ್ರಿಯಿಂದ 1ಕೋಟಿ ಪರಿಹಾರ: ಎಷ್ಟು ಸಮಂಜಸ? )

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+