ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NEET ವಿಳಂಬ: ದೆಹಲಿ ಪೊಲೀಸ್ ದೌರ್ಜನ್ಯ ಖಂಡಿಸಿ ಡಿ.29ರಂದು ದೇಶಾದ್ಯಂತ ಬಂದ್ ಘೋಷಿಸಿದ ವೈದ್ಯಕೀಯ ಸಮಿತಿ

|
Google Oneindia Kannada News

ನವದೆಹಲಿ, ಡಿಸೆಂಬರ್ 28: ನೀಟ್ ಸ್ನಾತಕೋತ್ತರ ಪರೀಕ್ಷೆಯ ನಂತರ ಕಾಲೇಜು ಹಂಚಿಕೆ ವಿಳಂಬವನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ದೆಹಲಿ ವೈದ್ಯರ ಗುಂಪು ಸೋಮವಾರ ಎಲ್ಲಾ ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದವು.

ಒಂದು ತಿಂಗಳಿನಿಂದ ಪ್ರತಿಭಟನೆಯ ನೇತೃತ್ವ ವಹಿಸಿರುವ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ), ಅದರ 4,000 ಸದಸ್ಯರು ಕೊರೊನಾವೈರಸ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ರಾತ್ರಿ ಕರ್ಫ್ಯೂಗೆ ಬದ್ಧರಾಗಿ ಸೋಮವಾರ ಮಧ್ಯರಾತ್ರಿ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಧರಣಿಯನ್ನು ಕೊನೆಗೊಳಿಸಿದ್ದಾರೆ ಎಂದು ಹೇಳಿದೆ. ಇದರ ಹಿಂದಿನ ದಿನ ಆರೋಗ್ಯ ಸಚಿವಾಲಯದ ಕಚೇರಿ ಕಡೆಗೆ ಹೊರಟ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲಾಗಿತ್ತು ಎಂದು ಅವರು ದೂಷಿಸಿದ್ದಾರೆ.

Breaking News: 2021ನೇ ಸಾಲಿನ ವೈದ್ಯಕೀಯ ವಿಭಾಗದ ನೀಟ್ ಪರೀಕ್ಷಾ ಫಲಿತಾಂಶ ಪ್ರಕಟ Breaking News: 2021ನೇ ಸಾಲಿನ ವೈದ್ಯಕೀಯ ವಿಭಾಗದ ನೀಟ್ ಪರೀಕ್ಷಾ ಫಲಿತಾಂಶ ಪ್ರಕಟ

ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (ಎಫ್‌ಎಐಎಂಎ) ತನ್ನ ಎಲ್ಲಾ ಆರ್‌ಡಿಎಗಳು ಮತ್ತು ಇತರ ವೈದ್ಯರ ಸಂಘಗಳಿಗೆ ಭಾರತದಾದ್ಯಂತ ಬುಧವಾರದಿಂದ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಕರೆ ನೀಡಿದೆ. ಇದರ ಜೊತೆಗೆ AIIMS ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ FORDA ಗೆ ಬೆಂಬಲವಾಗಿ ನಿಂತಿದೆ, 24 ಗಂಟೆಗಳ ಒಳಗೆ ಸರ್ಕಾರದಿಂದ ಯಾವುದೇ ಸಮರ್ಪಕ ಪ್ರತಿಕ್ರಿಯೆ ಸಿಗದಿದ್ದರೆ ಬುಧವಾರದಂದು ಎಲ್ಲಾ ತುರ್ತು ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದೆ.

ವೈದ್ಯರ ಭ್ರಾತೃತ್ವಕ್ಕೆ ಕಪ್ಪು ದಿನ

ವೈದ್ಯರ ಭ್ರಾತೃತ್ವಕ್ಕೆ ಕಪ್ಪು ದಿನ

ವೈದ್ಯಕೀಯ ಭ್ರಾತೃತ್ವಕ್ಕೆ ಇದನ್ನು "ಕಪ್ಪು ದಿನ" ಎಂದು ಕರೆದ ಅನೇಕ ಮಹಿಳಾ ವೈದ್ಯರು ತಮ್ಮ ಪ್ರತಿಭಟನಾ ಮೆರವಣಿಗೆ ಸಮಯದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ವೈದ್ಯಕೀಯ ಪ್ರವೇಶದಲ್ಲಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿರುವ ಹಿನ್ನೆಲೆ ಒಂದು ವರ್ಷದಿಂದ ತಡೆಹಿಡಿಯಲಾದ ಹೊಸ ವೈದ್ಯರ ತುರ್ತು ನೇಮಕಾತಿಗೆ ಪ್ರತಿಭಟನಾನಿರತ ವೈದ್ಯರು ಒತ್ತಾಯಿಸಿದರು. ಈ ಪ್ರತಿಭಟನೆ ಸಂದರ್ಭದಲ್ಲಿ ಸೋಮವಾರ ರಾತ್ರಿ ಪ್ರತಿಭಟನಾನಿರತ ವೈದ್ಯರು ಹಾಗೂ ಪೊಲೀಸರ ನಡುವೆ ಸಂಘರ್ಷಕ್ಕೆ ಕಾರಣವಾಯಿತು.

ವೈದ್ಯರ ಪ್ರತಿಭಟನೆಯಿಂದ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ

ವೈದ್ಯರ ಪ್ರತಿಭಟನೆಯಿಂದ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ

ರಾಷ್ಟ್ರ ರಾಜಧಾನಿಯಲ್ಲಿ ವೈದ್ಯರ ಪ್ರತಿಭಟನೆಯಿಂದಾಗಿ ನವದೆಹಲಿಯ ಸಫ್ದರ್‌ಜಂಗ್, ರಾಮ್ ಮನೋಹರ್ ಲೋಹಿಯಾ ಮತ್ತು ಲೇಡಿ ಹಾರ್ಡಿಂಜ್ ಸೇರಿದಂತೆ ಇತರ ಮೂರು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ ಬೀರಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಕಿರಿಯ ವೈದ್ಯರು NEET-PG ಕೌನ್ಸೆಲಿಂಗ್‌ನಲ್ಲಿನ ವಿಳಂಬದಿಂದ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಿಸದಂತೆ ಸಂಪೂರ್ಣ ಸಮೂಹವನ್ನು ತಡೆಹಿಡಿಯುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಸೇವೆ ತಿರಸ್ಕರಿಸುವ ಎಚ್ಚರಿಕೆ ನೀಡಿರುವ ವೈದ್ಯರು

ಸೇವೆ ತಿರಸ್ಕರಿಸುವ ಎಚ್ಚರಿಕೆ ನೀಡಿರುವ ವೈದ್ಯರು

ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಮುಖ ಆಸ್ಪತ್ರೆಗಳ ನಿವಾಸಿ ವೈದ್ಯರು ಸೋಮವಾರ "ಸೇವೆಗಳನ್ನು ತಿರಸ್ಕರಿಸುವ ಸಾಂಕೇತಿಕ ಸೂಚನೆಯಾಗಿ ತಮ್ಮ ಏಪ್ರನ್ (ಲ್ಯಾಬ್ ಕೋಟ್) ಅನ್ನು ಹಿಂದಿರುಗಿಸಿದ್ದಾರೆ," ಎಂದು FORDA ಅಧ್ಯಕ್ಷ ಮನೀಶ್ ನಿಗಮ್ ಹೇಳಿದ್ದಾರೆ. "ನಾವು ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು (ಎಂಎಎಂಸಿ) ಕ್ಯಾಂಪಸ್‌ನಿಂದ ಸುಪ್ರೀಂ ಕೋರ್ಟ್‌ಗೆ ಪ್ರತಿಭಟನಾ ಮೆರವಣಿಗೆಗೆ ಪ್ರಯತ್ನಿಸಿದ್ದೇವೆ, ಆದರೆ ನಾವು ಅದನ್ನು ಪ್ರಾರಂಭಿಸಿದ ಕೂಡಲೇ, ಭದ್ರತಾ ಸಿಬ್ಬಂದಿ ನಮಗೆ ಅವಕಾಶ ನೀಡಲಿಲ್ಲ. ಬಲಪ್ರಯೋಗ ಮಾಡಿದ ಪೊಲೀಸರೊಂದಿಗೆ ಘರ್ಷಣೆಯಲ್ಲಿ ಕೆಲವು ಕಿರಿಯ ವೈದ್ಯರು ಗಾಯಗೊಂಡಿದ್ದಾರೆ," ಎಂದು ಮನೀಷ್ ನಿಗಮ್ ಹೇಳಿದ್ದಾರೆ.

ಆರ್ಟಿರಿಯಲ್ ಐಟಿಒ ರಸ್ತೆಯ ಒಂದು ಭಾಗಕ್ಕೆ ವೈದ್ಯರಿಂದ ನಿರ್ಬಂಧ

ಆರ್ಟಿರಿಯಲ್ ಐಟಿಒ ರಸ್ತೆಯ ಒಂದು ಭಾಗಕ್ಕೆ ವೈದ್ಯರಿಂದ ನಿರ್ಬಂಧ

"ದೆಹಲಿಯ ಆರ್ಟಿರಿಯಲ್ ಐಟಿಒ ರಸ್ತೆಯ ಒಂದು ಭಾಗವನ್ನು ಆರರಿಂದ ಎಂಟು ಗಂಟೆಗಳ ಕಾಲ ಪ್ರತಿಭಟನಾಕಾರರು ತಡೆದರು. ಸ್ಥಳದಿಂದ ದೂರ ಸರಿಯುವಂತೆ ಪದೇ ಪದೇ ಮನವಿ ಮಾಡಲಾಗಿದ್ದರೂ, ಅವರು ರಸ್ತೆ ಜಾಮ್ ಮಾಡುವುದನ್ನು ಮುಂದುವರೆಸಿದರು. ನಂತರ, ಐಟಿಒ ಮಾರ್ಗದ ಎರಡೂ ಮಾರ್ಗಗಳನ್ನು ಪ್ರತಿಭಟನಾಕಾರರು ನಿರ್ಬಂಧಿಸಿದರು. ನಾವು ಸಂಘದ ಸದಸ್ಯರೊಂದಿಗೆ ಮಾತನಾಡಿದ್ದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇವೆ, ಆದರೆ ಅವರು ರಸ್ತೆಗಳನ್ನು ನಿರ್ಬಂಧಿಸುವುದನ್ನು ಮುಂದುವರೆಸಿದರು," ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಪ್ರತಿಭಟನಾಕಾರರನ್ನು ಪೊಲೀಸ್ ಸಿಬ್ಬಂದಿಯ ಸಮವಸ್ತ್ರವನ್ನು ಹರಿದು ಹಾಕಲು ಪ್ರಯತ್ನಿಸಿದರು. ಪೊಲೀಸ್ ವಾಹನಗಳ ಗಾಜು ಒಡೆದು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಘರ್ಷಣೆಯಲ್ಲಿ ಏಳು ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸದಿದ್ದಲ್ಲಿ ತಮ್ಮ ಸದಸ್ಯರು ಸೇವೆಯಿಂದ "ಸಾಮೂಹಿಕ ರಾಜೀನಾಮೆ"ಗೆ ಒತ್ತಾಯಿಸಲಾಗುವುದು ಎಂದು ನಿವಾಸಿ ವೈದ್ಯರ ಸಂಘ ಹೇಳಿದೆ.

Recommended Video

ಕೊಹ್ಲಿ ಕಾರಣಕ್ಕೆ ಅತಿದೊಡ್ಡ ನಿರ್ಧಾರವನ್ನು ಮಾಡಿದ್ರು MS ಧೋನಿ | Oneindia Kannada

English summary
Delay in College Allotment After the NEET Exam; Massive Doctors' Protest In Delhi. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X