ಕೇಜ್ರಿ ಮೇಲೆ ಜೇಟ್ಲಿ 10 ಕೋಟಿಗೆ ಮತ್ತೊಂದು ಮಾನನಷ್ಟ ಮೊಕದ್ದಮೆ
ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹತ್ತು ಕೋಟಿ ರುಪಾಯಿಗೆ ಮತ್ತೊಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಏನಿದು ಪ್ರಕರಣ ಎಂಬುದನ್ನು ತಿಳಿಯಲು ಈ ವರದಿ ಓದಿ
ನವದೆಹಲಿ, ಮೇ 22 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಗ್ರಹಚಾರವೇ ನೆಟ್ಟಗಿಲ್ಲವೇನೋ ಎನಿಸುವಂಥ ಘಟನೆಗಳು ನಡೆಯುತ್ತಲೇ ಇವೆ. ಒಂದು ಕಡೆ ಆಪ್ ನಿಂದ ಅಮಾನತಾಗಿರುವ ಕಪಿಲ್ ಮಿಶ್ರಾ ದಿನಕ್ಕೊಂದು ಆರೋಪ ಮಾಡಿ ಕೇಜ್ರಿವಾಲ್ ನಿದ್ದೆ ಕೆಡಿಸಿದರೆ, ಕೇಂದ್ರ ಸಚಿವ ಅರುಣ್ ಜೇಟ್ಲಿ ಇದೀಗ ಹತ್ತು ಕೋಟಿ ರುಪಾಯಿಗೆ ಮತ್ತೊಂದು ಮಾನನಷ್ಟ್ ಮೊಕದ್ದಮೆ ಹಾಕಿದ್ದಾರೆ.
ಇದಕ್ಕೂ ಮುಂಚೆ ಜೇಟ್ಲಿ ಹಾಕಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕೇಜ್ರಿವಾಲ್ ಪರವಾಗಿ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಬಡಿದಾಡುತ್ತಿದ್ದಾರೆ. ಅದೇನು ಸಿಟ್ಟಿತ್ತೋ ಜೇಠ್ಮಲಾನಿ ಅವರು ಜೇಟ್ಲಿಯನ್ನು ವಂಚಕ ಎಂದು ಕರೆದಿದ್ದಾರೆ. ಆ ಹೇಳಿಕೆ ಬೆನ್ನಿಗೆ ಮತ್ತೊಂದು ಮಾನನಷ್ಟ ಮೊಕದ್ದಮೆ ಹಾಕಿರುವ ಜೇಟ್ಲಿ, ಹತ್ತು ಕೋಟಿ ರುಪಾಯಿ ಪರಿಹಾರ ಕೇಳಿದ್ದಾರೆ.['ಕೇಜ್ರಿವಾಲ್ ಬಡ ಕಕ್ಷೀದಾರ ಅಂದುಕೊಂಡು ಪುಕ್ಕಟೆ ವಾದ ಮಾಡ್ತೀನಿ']

ಅರುಣ್ ಜೇಟ್ಲಿ ಪರವಾಗಿ ವಕೀಲ ಮಾಣಿಕ್ ದೋಗ್ರ ವಾದ ಮಂಡನೆ ಮಾಡುತ್ತಿದ್ದಾರೆ. ಕೇಜ್ರಿವಾಲ್ ನ ವಕೀಲ ರಾಮ್ ಜೇಠ್ಮಲಾನಿ ತಮ್ಮ ಕಕ್ಷೀದಾರರನ್ನು ವಂಚಕ ಎಂದು ಕೋರ್ಟ್ ನಲ್ಲಿ ಕರೆದು ಅವಮಾನಿಸಿದ್ದಾರೆ. ಆದ್ದರಿಂದ ಹತ್ತು ಕೋಟಿ ಪರಿಹಾರ ನೀಡಬೇಕು ಎಂದು ಮತ್ತೊಂದು ಕೇಸು ಜಡಿದಿದ್ದಾರೆ.[ಕೇಜ್ರಿವಾಲ್ ಕೇಸು ಬಡಿದಾಡಲು ದೆಹಲಿ ಸರಕಾರದ ಕಾಸು!]
ಹಳೆಯದೇ ಇನ್ನೂ ಫೈಸಲ್ ಆಗದೆ ಹೊಸದೊಂದು ಕಲ್ಲು ಬೇರೆ ಕೇಜ್ರಿವಾಲ್ ತಲೆ ಮೇಲೆ ಕೂತಂತಾಗಿದೆ.
{promotion-urls}












Click it and Unblock the Notifications