ಭೂಗತ ಪಾತಕಿ ದಾವೂದ್ ಪುತ್ರ ಪಾಕಿಸ್ತಾನದ ಮಸೀದಿಯಲ್ಲಿ ಮೌಲ್ವಿ!
ನವದೆಹಲಿ, ನವೆಂಬರ್ 23: ಭೂಗತ ಪಾತಕಿ ದಾವುದ್ ಇಬ್ರಾಹಿಂ ಮಗ ಕರಾಚಿಯ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದಾನೆ ಎಂಬ ಅಚ್ಚರಿಯ ಸುದ್ದಿಯೊಂದನ್ನು ಇತ್ತೀಚೆಗೆ 'ಸುಲಿಗೆ' ಪ್ರಕರಣದಲ್ಲಿ ಬಂಧಿತನಾದ ದಾವೂದ್ ಸಹೋದರ ಹೊರಹಾಕಿದ್ದಾನೆ.
ದಾವೂದ್ ಸಹೋದರ ಇಖ್ಬಾಲ್ ಕಸ್ಕರ್ ನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ದಾವೂದ್ ಮಗ ತನ್ನ ತಂದೆಯ ಕೆಲಸವನ್ನು ಮುಂದುವರಿಸಲು ಇಷ್ಟಪಟ್ಟಿಲ್ಲ. ಆತನಿಗೆ ಧಾರ್ಮಿಕ ವಿಷಯಗಳ ಕುರಿತು ಸಾಕಷ್ಟು ಆಸಕ್ತಿ ಇರುವುದರಿಂದ ಆತ ಮೌಲ್ವಿಯಾಗಿದ್ದಾನೆ. ಆತ ಕುರಾನ್ ಅನ್ನು ಕಂಠಪಾಠ ಮಾಡಿಕೊಂಡಿದ್ದಾನೆ ಎಂಬುದನ್ನೂ ಇಖ್ಬಾಲ್ ತಿಳಿಸಿದ್ದಾನೆ.

ದಾವೂದ್ ಮತ್ತು ಆತನ ಪತ್ನಿ ಮೆಹ್ಜಾಬೀನ್ ಗೆ ಒಬ್ಬ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು. ಮೂರನೇ ಮಗಳು ಮರಿಯಾ ಏಳು ವರ್ಷದ ಹಿಂದೇ ಮಲೇರಿಯಾ ರೋಗದಿಂದ ಅಸುನೀಗಿದ್ದಳು. ಹಿರಿಮಗಳು ಮಹ್ರುಖ್ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಮಗ ಜುನೈದ್ ಎಂಬುವವರನ್ನು ಮದುವೆಯಾಗಿದ್ದಾರೆ.












Click it and Unblock the Notifications