ದಾವೂದ್ ಇಬ್ರಾಹಿಂ ಮಾಹಿತಿ ಕಲೆಹಾಕಿದ ಕೇಂದ್ರಸರ್ಕಾರ
ನವದೆಹಲಿ, ಜುಲೈ, 20 : ಮುಂಬೈ ಸರಣಿ ಸ್ಫೋಟದ ಆರೋಪಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತಾಗಿ ಕೇಂದ್ರ ಸರ್ಕಾರ ಎಲ್ಲಾ ಮಾಹಿತಿಯನ್ನು ಕಲೆಹಾಕಿದ್ದು, ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿಕೊಟ್ಟಿದೆ.
ದಾವೂದ್ ಹುಡುಕಾಟದ ಕುರಿತಾಗಿ ಹಲವು ಕಹಿ ಅನುಭವಗಳನ್ನು ಪಡೆದ ಭಾರತ ದಾವೂದ್ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆಗೆ ತೆಗೆದುಕೊಂಡು ಸಂಪೂರ್ಣ ವಿವರವನ್ನು ಸಂಗ್ರಹಿಸಿದೆ. ಇವನ ಬಳಿ 29ಪಾಸ್‌ಪೋರ್ಟ್ ಇರುವುದು ಮತ್ತು ಈತ ಸುಮಾರು 5 ವಿಭಿನ್ನ ಸ್ಥಳಗಳಲ್ಲಿ ವಾಸಿಸುತ್ತಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.[ರಂಜಾನ್ ಮುನ್ನಾದಿನ ಇರಾಕಿನಲ್ಲಿ ಭೀಕರ ಹತ್ಯಾಕಾಂಡ]

ಈತನ ಕುರಿತಾಗಿ Intelligence Bureau and the Research and the Analysis wing ಸಂಗ್ರಹಿಸಿದ ದಾಖಲೆಗಳಲ್ಲಿ ಹಲವು ವಿಷಯಗಳು ಪ್ರಸ್ತಾಪಿತವಾಗಿದೆ. ಇವನ ಬಳಿ ಇರುವ 29 ಪಾಸ್ ಪೋರ್ಟ್‌ಗಳಲ್ಲಿ ಬಳಸುತ್ತಿರುವ 2 ಪಾಸ್ ಪೋರ್ಟ್ ಗಳು ಪಾಕಿಸ್ತಾನದಿಂದ ದೊರಕಿದಂತಹವು. ಕಳೆದ 2013ರಲ್ಲಿ ಪಾಕಿಸ್ತಾನದ ಹೊರಗೆ ಪಯಣ ಬೆಳೆಸುವಾಗ ಕೊನೆ ಬಾರಿ ಪಾಸ್ ಪೋರ್ಟ್ ಬಳಕೆ ಮಾಡಿದ್ದನು ಎಂದು ತಿಳಿದು ಬಂದಿದೆ.
ದಾವೂದ್ ಮಾದಕವಸ್ತುಗಳ ಕಳ್ಳಸಾಗಾಣಿಕೆ ನಡೆಸುತ್ತಿದ್ದು, ತನ್ನೆಲ್ಲಾ ವ್ಯವಹಾರಗಳಿಗೆ ಪಾಕಿಸ್ತಾನ ಸೇನೆ ಮತ್ತು ಐಎಸ್ಐ ಅವರ ಸಹಾಯ ಪಡೆಯುತ್ತಿದ್ದನು. ಈತ ಕರಾಚಿಯಲ್ಲಿನ ಕ್ಲಿಂಟನ್ ರಸ್ತೆಯಲ್ಲಿರುವ ಮನೆಯಲ್ಲಿ ತನ್ನ ಹೆಚ್ಚು ಸಮಯ ಕಳೆಯುತ್ತಿದ್ದು, ಇಸ್ಲಾಮಾಬಾದ್ ಮತ್ತು ಮುರ್ರೆ ರಸ್ತೆಯ ಮನೆಯಲ್ಲೂ ಆತ ಉಳಿದುಕೊಳ್ಳುತ್ತಾನೆ ಎಂಬ ಮಾಹಿತಿಯು ಲಭ್ಯವಾಗಿದೆ.
ಪಾಕಿಸ್ತಾನ ದಾವೂದ್ ನನ್ನು ಭಾರತಕ್ಕೆ ಕಳುಹಿಸಿಕೊಡಲು ಸಮ್ಮತಿ ಸೂಚಿಸಿದೆ. ದಾವೂದ್ ನ ವಿಚಾರವಾಗಿ ನಮ್ಮಲ್ಲಿ ಯಾವುದೇ ಭರವಸೆಗಳು ಉಳಿದಿಲ್ಲ. ಈಗಾಗಲೇ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಎಂಬ ಕಿರೀಟ ಹೊತ್ತು ನಿಂತಿದೆ. ಈ ಆಪಾದನೆಯನ್ನು ಪುನಃ ಮುಂದುವರಿಸಿಕೊಂಡು ಹೋಗುವ ಯಾವ ಇಚ್ಛೆಯೂ ನಮಗಿಲ್ಲ ಎಂದು ಪಾಕಿಸ್ತಾನ ಹೇಳಿದೆ ಎಂಬುದಾಗಿ ಸಂಸತ್ತಿನಲ್ಲಿ ಚರ್ಚಿತಗೊಂಡ ದಾಖಲೆಗಳಲ್ಲಿ ಉಲ್ಲೇಖಿತವಾಗಿದೆ.











Click it and Unblock the Notifications