ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಎಫೆಕ್ಟ್: ದೆಹಲಿಯಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಡಿಮ್ಯಾಂಡ್.!

|
Google Oneindia Kannada News

ನವದೆಹಲಿ, ಜೂನ್ 9: ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಭಾರತದಲ್ಲಿ ಆಟೋ ಮೊಬೈಲ್ ವಲಯ ತತ್ತರಿಸಿರಬಹುದು. ಆದ್ರೆ, ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಮಾತ್ರ ಈಗ ಡಿಮ್ಯಾಂಡ್ ಹೆಚ್ಚಾಗುತ್ತಿರುವುದು ವಾಸ್ತವ.

Recommended Video

ಬೆಳ್ಳಂಬೆಳಿಗ್ಗೆ ಚಿರು ಸಮಾಧಿ ಬಳಿ ಬಂದ ಧ್ರುವ ಸರ್ಜಾ | Oneindia Kannada

ಕಳೆದ ಎರಡುವರೆ ತಿಂಗಳುಗಳಿಂದ ದೆಹಲಿಯ ಅತಿ ದೊಡ್ಡ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯನ್ನ ಕೇಳೋರೇ ಇರಲಿಲ್ಲ. ಆದ್ರೀಗ, ಅನ್ ಲಾಕ್ 1.0 ಜಾರಿಗೆ ಬಂದಿರುವುದರಿಂದ ಗ್ರಾಹಕರು ದೆಹಲಿಯ ಸೆಕೆಂಡ್ ಹ್ಯಾಂಡ್ ಕಾರ್ ಮಾರ್ಕೆಟ್ ಗೆ ಮುಗಿಬೀಳುತ್ತಿದ್ದಾರೆ. ತಮ್ಮ ಬಜೆಟ್ ಗೆ ತಕ್ಕ ಹಾಗೆ ಉತ್ತಮ ಕಂಡೀಷನ್ ನಲ್ಲಿರುವ ಕಾರನ್ನು ಖರೀದಿಸಲು ಗ್ರಾಹಕರು ರೆಡಿಯಾಗಿದ್ದಾರೆ.

ದೆಹಲಿಯಲ್ಲಿ 5.5 ಲಕ್ಷ ಕೊರೊನಾ ಕೇಸ್: ಸರ್ಕಾರದಿಂದಲೇ ಸ್ಫೋಟಕ ಮಾಹಿತಿದೆಹಲಿಯಲ್ಲಿ 5.5 ಲಕ್ಷ ಕೊರೊನಾ ಕೇಸ್: ಸರ್ಕಾರದಿಂದಲೇ ಸ್ಫೋಟಕ ಮಾಹಿತಿ

ಪ್ರಯಾಣ ಮಾಡಲು ಸಾರ್ವಜನಿಕ ಸಾರಿಗೆಯನ್ನು ಬಳಸಲು ಜನ ಹಿಂದೇಟು ಹಾಕುತ್ತಿರುವುದರಿಂದ, ಚಿಕ್ಕ ಫ್ಯಾಮಿಲಿ ಕಾರ್ ಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ.

Covid 19 Effect: Demand For Second Hand Cars In Delhi

''ಲಾಕ್ ಡೌನ್ ನಿಂದಾಗಿ ನಮ್ಮ ಬಿಸಿನೆಸ್ ಫುಲ್ ಡಲ್ ಆಗಿತ್ತು. ಆದ್ರೆ ಈಗ ನಾವು ಮತ್ತೆ ಕೆಲಸ ಆರಂಭಿಸಿದ್ದೇವೆ. ಎಸ್.ಯು.ವಿ ಬದಲು ಪುಟ್ಟ ಫ್ಯಾಮಿಲಿ ಕಾರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ'' ಎಂದಿದ್ದಾರೆ ಕಾರು ಮಾರುಕಟ್ಟೆ ಸಂಘದ ಅಧ್ಯಕ್ಷ ಲೋಕೇಶ್ ಮುಂಜಾಲ್.

''ಮುಂಚೆ ಮೆಟ್ರೋನಲ್ಲಿ ಓಡಾಡುತ್ತಿದ್ದೆ. ಆದ್ರೀಗ, ಮೆಟ್ರೋ ಇಲ್ಲ. ಮೇಲಾಗಿ ಕೋವಿಡ್-19 ಸಂದರ್ಭದಲ್ಲಿ ಮೆಟ್ರೋ ಮತ್ತು ಬಸ್ ನಲ್ಲಿ ಓಡಾಡಲು ಭಯ ಆಗುತ್ತದೆ. ಹೀಗಾಗಿ, ಪುಟ್ಟ ಕಾರು ಕೊಂಡುಕೊಳ್ಳೋಣ ಅಂತಿದ್ದೀನಿ'' ಅಂತ ಹೇಳಿದ್ದಾರೆ ಓರ್ವ ಗ್ರಾಹಕರು.

ದೆಹಲಿಯಲ್ಲಿ ಸಮುದಾಯ ಸೋಂಕು ಇಲ್ಲ: ಮನೀಶ್ ಸಿಸೊಡಿಯಾದೆಹಲಿಯಲ್ಲಿ ಸಮುದಾಯ ಸೋಂಕು ಇಲ್ಲ: ಮನೀಶ್ ಸಿಸೊಡಿಯಾ

ರಾಷ್ಟ್ರಾದ್ಯಂತ ಲಾಕ್ ಡೌನ್ ಘೋಷಣೆಯಾದ್ಮೇಲೆ, ದೆಹಲಿಯ ಮೆಟ್ರೋ ಕಾರ್ಯಾಚರಣೆ ಸ್ಥಗಿತವಾಯಿತು. ಸದ್ಯ ದೆಹಲಿಯಲ್ಲಿ ಮಾಲ್, ರೆಸ್ಟೋರೆಂಟ್ ಗಳು ರೀ-ಓಪನ್ ಆಗಿವೆ. ಆದ್ರೆ, ಮೆಟ್ರೋ ಇನ್ನೂ ಕಾರ್ಯಾರಂಭ ಮಾಡಿಲ್ಲ.

ದೆಹಲಿಯಲ್ಲಿ ಬಸ್ ಗಳು ರಸ್ತೆಗಿಳಿದಿದ್ದರೂ, ಅದರಲ್ಲಿ ಜನ ಓಡಾಡುತ್ತಿಲ್ಲ. ದೆಹಲಿಯಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

English summary
COVID 19 Effect: Demand for second-hand cars in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X