ಸೆಪ್ಟೆಂಬರ್ ವೇಳೆಗೆ 10 ಪಟ್ಟು ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ: ಹರ್ಷವರ್ಧನ್

ನವದೆಹಲಿ, ಏಪ್ರಿಲ್ 19: ಸೆಪ್ಟೆಂಬರ್ ವೇಳೆಗೆ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಉತ್ಪಾದನೆ ಪ್ರಮಾಣ 10 ಪಟ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಸೆಪ್ಟೆಂಬರ್ ಒಳಗೆ ಪ್ರತಿ ತಿಂಗಳು 100 ಮಿಲಿಯನ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಲಾಗುತ್ತದೆ. ಭಾರತ್ ಬಯೋಟೆಕ್‌ಗೆ ಸರ್ಕಾರವು 65 ಕೋಟಿ ರೂವನ್ನು ನೀಡುತ್ತಿದೆ.

ಕೋವಿಡ್ 19 ವಿರುದ್ಧದ ಔಷಧ ರೆಮ್‌ಡೆಸಿವಿರ್ ತಯಾರಿಕೆಯನ್ನು ಮೇ ವೇಳೆಗೆ ಪ್ರತಿ ತಿಂಗಳಿಗೆ 74.1 ಲಕ್ಷಕ್ಕೆ ದ್ವಿಗುಣಗೊಳಿಸಲಾಗುತ್ತದೆ ಎಂದಿದ್ದಾರೆ.

ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ಮತ್ತು ಕೇಂದ್ರ ಸಚಿವಾಲಯಗಳ ಅಡಿಯಲ್ಲಿರುವ ಆಸ್ಪತ್ರೆಗಳಲ್ಲಿ ವಾರ್ಡ್‌ಗಳನ್ನು ಮೀಸಲಿಡುವ ಮೂಲಕ ಕೋವಿಡ್ 19 ರೋಗಿಗಳ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.

Covaxin

ಭಾರತ ಸರ್ಕಾರ ಮಹಾರಾಷ್ಟ್ರಕ್ಕೆ 1,121, ಉತ್ತರ ಪ್ರದೇಶಕ್ಕೆ 1,700, ಜಾರ್ಖಂಡ್‌ಗೆ 1,500, ಗುಜರಾತ್‌ಗೆ 1,600, ಮಧ್ಯಪ್ರದೇಶಕ್ಕೆ 152 ಮತ್ತು ಛತ್ತೀಸ್‌ಗಢಕ್ಕೆ 230 ವೆಂಟಿಲೇಟರ್‌ಗಳನ್ನು ಒದಗಿಸಿದೆ ಎಂದರು.

ಕೋವಿಡ್ ವಿರುದ್ಧ ಹೋರಾಡಲು ರಾಜ್ಯಗಳಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಲಾಗುತ್ತಿದೆ. ನಿರಂತರವಾಗಿ ಆಮ್ಲಜನಕದ ಪೂರೈಕೆ ಮತ್ತು ಆರೋಗ್ಯ ಮೂಲಸೌಕರ್ಯಗಳ ವರ್ಧನೆಯನ್ನು ಖಚಿತಪಡಿಸಲಾಗುತ್ತಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ರೆಮ್‌ಡೆಸಿವಿರ್ ಅಗತ್ಯವನ್ನು ಪೂರೈಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಮೇ ವೇಳೆಗೆ ಉತ್ಪಾದನೆಯನ್ನು ತಿಂಗಳಿಗೆ 74.1 ಲೀಗೆ ದ್ವಿಗುಣಗೊಳಿಸಲಾಗುತ್ತಿದೆ.

ಉತ್ಪಾದನೆಯನ್ನು ಹೆಚ್ಚಿಸಲು 20 ಉತ್ಪಾದನಾ ಘಟಕಗಳಿಗೆ ಅನುಮತಿ ನೀಡಲಾಗಿದೆ. ರಫ್ತು ನಿಷೇಧಿಸಲಾಗಿದ್ದು ಬೆಲೆ ಇಳಿಸಲಾಗಿದೆ. ಕೊರೊನಾ ನಿಗ್ರಹಿಸಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+