ಬಾಂಗ್ಲಾದೇಶದಲ್ಲಿ ಮೊದಲ ಕೊರೊನಾ ಕೇಸ್: ಮೋದಿ ಭೇಟಿ ರದ್ದು

ಢಾಕಾ, ಮಾರ್ಚ್ 9: ಬಾಂಗ್ಲಾದೇಶದಲ್ಲಿ ಕೊರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮೋದಿ ಢಾಕಾ ಭೇಟಿಯನ್ನು ರದ್ದುಪಡಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಮೂರು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಢಾಕಾ ಭೇಟಿಯನ್ನು ರದ್ದುಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಸಂಬಂಧ ಅಂತಿಮ ನಿರ್ಧಾರ ಸದ್ಯದಲ್ಲಿಯೇ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಆಹ್ವಾನದ ಮೇರೆಗೆ ಬಾಂಗ್ಲಾದೇಶ ಸ್ಥಾಪಕ ಶೇಖ್ ಮುಜಿಬರ್ ರಹಮಾನ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇದೇ 17ರಂದು ಅಲ್ಲಿಗೆ ತೆರಳುವ ಕಾರ್ಯಕ್ರಮವಿದೆ.

PM Modis Bangladesh Trip Cancelled

ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬೃಹತ್ ಮಟ್ಟದಲ್ಲಿ ಆಯೋಜಿಸಲು ಯೋಚಿಸಿದ್ದ ಕಾರ್ಯಕ್ರಮವನ್ನು ಸಣ್ಣ ಮಟ್ಟದಲ್ಲಿ ನಡೆಸಲು ಬಾಂಗ್ಲಾ ಸರ್ಕಾರ ನಿರ್ಧರಿಸಿದ್ದು ವಿದೇಶಿ ಕಾರ್ಯದರ್ಶಿಗಳ ಭಾಗವಹಿಸುವಿಕೆ ರದ್ದುಗೊಂಡಿದೆ.

ಢಾಕಾದಲ್ಲಿ ಇಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡವರಲ್ಲಿ ಒಬ್ಬರು ಇಟಲಿಗೆ ಪ್ರಯಾಣಿಸಿದವರಾಗಿದ್ದು ಮತ್ತೊಬ್ಬರು ಅವರ ಕುಟುಂಬ ಸದಸ್ಯರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+