ಪ್ರಿಯಾಂಕಾ ಚತುರ್ವೇದಿ ಕಾಂಗ್ರೆಸ್ ತೊರೆಯಲು ಇದೂ ಕಾರಣವೇ?

ನವದೆಹಲಿ, ಏಪ್ರಿಲ್ 17: ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ಅಮಾನತ್ತಾಗಿದ್ದ ಮುಖಂಡರನ್ನು ಮತ್ತೆ ಪಕ್ಷದ ಹುದ್ದೆಗಳಿಗೆ ಮರು ನೇಮಿಸಿರುವುದರಿಂದ ಬೇಸೆತ್ತು ಪಕ್ಷ ತೊರೆದಿರುವುದಾಗಿ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ತಿಳಿಸಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಕೆಲವು ಮೂಲಗಳ ಪ್ರಕಾರ ಪಕ್ಷವು ಲೋಕಸಭೆ ಟಿಕೆಟ್ ನೀಡದೆ ಇರುವುದರಿಂದ ಕೋಪಗೊಂಡು ಅವರು ಕಾಂಗ್ರೆಸ್ ತ್ಯಜಿಸಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲ ಮಥುರಾದಲ್ಲಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಅವರ ಕುಟುಂಬಕ್ಕೂ ಬೆದರಿಕೆ ಹಾಕಿದ್ದರು ಎಂದು ಪ್ರಿಯಾಂಕಾ ಅವರಿಗೆ ಆಪ್ತರಾಗಿರುವ ಮೂಲಗಳು ತಿಳಿಸಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

Congress Spokesperson Priyanka Chaturvedi quit party over lok sabha ticket denial family threat

ಲೋಕಸಭೆ ಚುನಾವಣೆಗೆ ನಿಲ್ಲಲು ಪ್ರಿಯಾಂಕಾ ಆಸಕ್ತರಾಗಿದ್ದರು. ಮುಂಬೈ ಉತ್ತರ ಅಥವಾ ಮಥುರಾದಿಂದ ಟಿಕೆಟ್ ಬಯಸಿದ್ದರು. ಆದರೆ, ಪಕ್ಷ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದ ಅವರು ಬೇಸರಗೊಂಡಿದ್ದರು. ಪ್ರಿಯಾಂಕಾ ಮಥುರಾದಲ್ಲಿ ಹುಟ್ಟಿ ಬೆಳೆದವರು. ಅವರ ಪೋಷಕರು ಮಥುರಾ ಮೂಲದವರು. ಹೀಗಾಗಿ ಈ ಎರಡೂ ಕ್ಷೇತ್ರಗಳ ಮೇಲೆ ಅವರು ಕಣ್ಣಿಟ್ಟಿದ್ದರು.

ಪಕ್ಷವು ಮುಂಬೈ ಉತ್ತರ ಕ್ಷೇತ್ರದಿಂದ ನಟಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮಥುರಾದಿಂದ ಮಹೇಶ್ ಪಾಠಕ್ ಅವರಿಗೆ ಮನ್ನಣೆ ನೀಡಿತ್ತು.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಈ ಗಾಯದ ಮೇಲೆ ಬರೆ ಎಳೆದಂತೆ ಮಥುರಾದಲ್ಲಿ ಅಮಾನತ್ತಾಗಿದ್ದ ನಾಯಕರನ್ನು ಪಕ್ಷಕ್ಕೆ ಪುನಃ ಸೇರ್ಪಡೆಮಾಡಿಕೊಳ್ಳಲಾಗಿತ್ತು. ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದ ನಾಯಕರು ಕುಟುಂಬದವರಿಗೂ ಬೆದರಿಕೆ ಹಾಕಿದ್ದರು.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ರಫೇಲ್ ಡೀಲ್ ಕುರಿತು ಸುದ್ದಿಗೋಷ್ಠಿ ನಡೆಸಲು ಮಥುರಾಕ್ಕೆ ಬಂದಿದ್ದ ಪ್ರಿಯಾಂಕಾ ಅವರೊಂದಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಸಭ್ಯ ವರ್ತನೆ ಮಾಡಿದ್ದರು. ಪ್ರಿಯಾಂಕಾ ನೀಡಿದ ದೂರಿನ ಅನ್ವಯ ಎಂಟು ಮಂದಿಯನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಆದರೆ, ಮಾರ್ಚ್ ತಿಂಗಳಿನಲ್ಲಿಯೇ ಅವರನ್ನು ಮರಳಿ ಸೇರಿಸಿಕೊಳ್ಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+