ಮೋದಿ ಔರಂಗಜೇಬ್ ಗಿಂತ ಕ್ರೂರಿ: ರಣದೀಪ್ ಸುರ್ಜೆವಾಲಾ

Recommended Video

      ನರೇಂದ್ರ ಮೋದಿಯನ್ನ ಔರಂಗಜೇಬ್ ಗೆ ಹೋಲಿಸಿದ ಕಾಂಗ್ರೆಸ್ ವಕ್ತಾರ | Oneindia Kannada

      ನವದೆಹಲಿ, ಜೂನ್ 26: 'ಪ್ರಧಾನಿ ನರೇಂದ್ರ ಮೋದಿಯವರು ಮೊಘಲ್ ದೊರೆ ಔರಂಗಜೇಬ್ ಗಿಂತ ಕ್ರೂರಿ' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೆವಾಲಾ ಹೇಳಿದ್ದಾರೆ.

      ತುರ್ತು ಪರಿಸ್ಥಿತಿಗೆ ಜೂನ್ 25 ಕ್ಕೆ 43 ವರ್ಷ ಸಂದ ನೆನಪಿಗಾಗಿ ಮಾತನಾಡುತ್ತಿದ್ದ ಮೊದಿ, 'ತುರ್ತು ಪರಿಸ್ಥಿತಿ ಭಾರತೀಯ ಇತಿಹಾಸದ ಕರಾಳ ಅಧ್ಯಾಯ. ಒಂದು ಕುಟುಂಬದ ಅಧಿಕಾರ ದಾಹಕ್ಕಾಗಿ ದೇಶವನ್ನೇ ಜೈಲು ಮಾಡಲಾಯ್ತು' ಎಂದಿದ್ದರು.

      ಈ ಕುರಿತು ಪ್ರತಿಕ್ರಿಯೆ ನೀಡಿದ ಸುರ್ಜೆವಾಲಾ, 'ನರೇಂದ್ರ ಮೊದಿಯವರು ಮೊಘಲ್ ದೊರೆ ಔರಂಗಜೇಬ್ ಗಿಂತಲೂ ಕ್ರೂರಿ. 43 ವರ್ಷಗಳ ತುರ್ತುಪರಿಸ್ಥಿತಿಯ ಬಗ್ಗೆ ಪಾಠ ಮಾಡುತ್ತಿದ್ದಾರೆ. ಕಾಂಗ್ರೆಸ್ ಅನ್ನು ದೂಷಿಸಲು ಹೊರಟು ಅವರು, ಅವರ ಆಡಳಿತಾವಧಿಯಲ್ಲಾದ ಮರೆಮಾಚಲು ಯತ್ನಿಸುತ್ತಿದ್ದಾರೆ. 43 ವರ್ಷಗಳ ನಂತರ ತುರ್ತುಪರಿಸ್ಥಿಯ ಬಗ್ಗೆ ಮಾತನಾಡುವುದರಿಂದ 'ಅಚ್ಚೇ ದಿನ್' ಬರುವುದಿಲ್ಲ' ಎಂದು ಸುರ್ಜೆವಾಲಾ ಲೇವಡಿ ಮಾಡಿದ್ದಾರೆ.

      Congresss Surjewala compares Modi to Aurangzeb

      ಇಂದು ಬೆಳಿಗ್ಗೆ ಮುಂಬೈಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ, 'ಗುಲಾಮಗಿರಿ ಮತ್ತು ಒಂದು ಕುಟುಂಬದ ಅಧಿಕಾರ ದಾಹದಿಂದ ದೇಶ ಜೈಲಾಗುವ ಪರಿಸ್ಥಿತಿ 1975 ರಲ್ಲಿ ತಲೆದೂರಿತ್ತು. ಆದರೆ ತುರ್ತು ಪರಿಸ್ಥಿಯ ವಿರುದ್ಧ ಮಹಿಳೆ, ಪುರುಷರು ಎನ್ನದೆ ಎಲ್ಲರೂ ಸಮನಾಗಿ ಹೋರಾಡಿದ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆ ಗೆದ್ದಿತು' ಎಂದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+