Raju Srivastava : ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನ
ನವದೆಹಲಿ ಸೆಪ್ಟೆಂಬರ್ 21: ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ಅವರು ಇಂದು (58) ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ನಿಧನರಾದರು. ಆಗಸ್ಟ್ 10 ರಂದು ಹೃದಯಾಘಾತವಾದ ನಂತರ ರಾಜು ಅವರನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು. ಆ ಬಳಿಕ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ರಾಜು ಶ್ರೀವಾಸ್ತವ ಅವರು ಕೊನೆಯುಸಿರೆಳಿದಿದ್ದಾರೆ.
ಸ್ಟ್ಯಾಂಡ್-ಅಪ್ ಕಾಮಿಕ್ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. "ಅವರು ತಮ್ಮ ದಿನನಿತ್ಯದ ವ್ಯಾಯಾಮವನ್ನು ಮಾಡುವಾಗ ಈ ಘಟನೆ ನಡೆದಿದೆ. ರಾಜು ಶ್ರೀವಾಸ್ತವ ಟ್ರೆಡ್‌ಮಿಲ್‌ನಲ್ಲಿದ್ದಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದದ್ದಾರೆ. ಬಳಿಕ ಹೃದಯಾ ನೋವಾಗಲು ಪ್ರಾರಂಭವಾಗಿದೆ. ತಕ್ಷಣವೇ ಅವರನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು" ಎಂದು ರಾಜು ಶ್ರೀವಾಸ್ತವ್ ಅವರ ಸೋದರಸಂಬಂಧಿ ಈ ಹಿಂದೆ ಪಿಟಿಐಗೆ ತಿಳಿಸಿದ್ದರು.

ರಾಜು ಶ್ರೀವಾಸ್ತವ್ ಅವರು ತಮ್ಮ ಸಮಯೋಚಿತ ಹಾಸ್ಯ ಮತ್ತು ಕಾಮಿಕ್ ಟೇಕ್‌ಗಳ ಮೂಲಕ ಸ್ಟ್ಯಾಂಡ್-ಅಪ್ ಕಾಮಿಡಿ ಜಗತ್ತಿನಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು. 2005 ರಲ್ಲಿಮೊದಲ ಸೀಸನ್ ಪ್ರಥಮ ಪ್ರದರ್ಶನದೊಂದಿಗೆ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ಎಂಬ ಮೊದಲ ಸ್ಟ್ಯಾಂಡ್-ಅಪ್ ಕಾಮಿಡಿ ಟ್ಯಾಲೆಂಟ್ ಹಂಟ್ ಶೋನೊಂದಿಗೆ ಅವರು ಖ್ಯಾತಿಯನ್ನು ಪಡೆದರು.

ಅವರು "ಮೈನೆ ಪ್ಯಾರ್ ಕಿಯಾ", "ಬಾಜಿಗರ್", "ಬಾಂಬೆ ಟು ಗೋವಾ" (ರೀಮೇಕ್) ಮತ್ತು "ಆಮ್ದಾನಿ ಅಥಾನಿ ಖರ್ಚಾ ರುಪೈಯಾ" ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು "ಬಿಗ್ ಬಾಸ್" ಸೀಸನ್ ಮೂರರಲ್ಲಿ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಜೊತೆಗೆ ಅವರು ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು.












Click it and Unblock the Notifications