• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲ್ಲಿದ್ದಲು ಹಗರಣ: ಕಾಂಗ್ರೆಸ್ ಮುಖಂಡ ನವೀನ್ ಜಿಂದಾಲ್ ಗೆ ನೆಮ್ಮದಿ

|

ನವದೆಹಲಿ, ಮಾರ್ಚ್ 13: ಕಲ್ಲಿದ್ದಲು ಹಗರಣದ ಆರೋಪಿಯಾಗಿರುವ ಸಂಸದ ನವೀನ್ ಜಿಂದಾಲ್ ಗೆ ಸ್ಥಳೀಯ ನ್ಯಾಯಾಲಯದಿಂದ ಬುಧವಾರದಂದು ನೆಮ್ಮದಿಯ ಸುದ್ದಿ ಸಿಕ್ಕಿದೆ. ನವೀನ್ ಜಿಂದಾಲ್ ಅವರು 14 ಹಾಗೂ 15ನೇ ಲೋಕಸಭೆಯಲ್ಲಿ ಹರ್ಯಾಣದ ಕುರುಕ್ಷೇತ್ರದ ಸಂಸದರಾಗಿದ್ದರು. ಸದ್ಯ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಹಾಗೂ ಒ.ಪಿ ಜಿಂದಾಲ್ ಗ್ಲೋಬಲ್ ವಿವಿಯ ಕುಲಪತಿಯಾಗಿದ್ದಾರೆ.

ಬಹುಕೋಟಿ ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಸಿಎಂ ಮಧು ದೋಷಿಬಹುಕೋಟಿ ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಸಿಎಂ ಮಧು ದೋಷಿ

ನ್ಯಾಯಾಲಯಕ್ಕೆ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯತಿ ಕೋರಿದ್ದ ನವೀನ್ ಗೆ ಕೋರ್ಟ್ ಅಸ್ತು ಎಂದಿದೆ. ಜೂನ್ 30, 2019ರ ತನಕ ನ್ಯಾಯಾಲಯಕ್ಕೆ ಹಾಜರಾತಿ ವಿನಾಯತಿ ಸಿಕ್ಕಿದೆ. ಹೀಗಾಗಿ, ಲೋಕಸಭೆ ಚುನಾವಣೆಯತ್ತ ಜಿಂದಾಲ್ ಗಮನ ಹರಿಸಬಹುದಾಗಿದೆ.

ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಮೇಲೆ 'ಸಿಬಿಐ' ಎಫ್ಐಆರ್ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಮೇಲೆ 'ಸಿಬಿಐ' ಎಫ್ಐಆರ್

ಜಿಂದಾಲ್ ನಿಕ್ಷೇಪ ಪರವಾನಗಿ ಪಡೆಯಲು ಅಂದಿನ ರಾಜ್ಯ ಸಚಿವ ದಾಸರಿ ನಾರಾಯಣರಾವ್ ಅವರಿಗೆ ಕಿಕ್ ಬ್ಯಾಕ್ ಪಡೆದಿದ್ದಾರೆ. ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧುಕೋಡಾ ಕೂಡಾ ಸಹ ಅರೋಪಿ. ಮಧ್ಯಪ್ರದೇಶವಲ್ಲದೆ, ಜಾರ್ಖಂಡಿನ ಅಮರಕೊಂಡಾ ಮುರ್ಗದಂಗಲ್ ನಲ್ಲಿ ಕಲ್ಲಿದ್ದಲ್ಲು ಗಣಿ ಹಂಚಿಕೆ ಅವ್ಯವಹಾರವೂ ಸೇರಿದೆ. ಜಿಂದಾಲ್ ಸ್ಟೀಲ್ ಹಾಗೂ ಗಗನ್ ಸ್ಪಾಂಜ್ ಐರನ್ ಪ್ರೈ ಲಿಮಿಟೆಡ್ ಗೆ ಹಂಚಿಕೆ ಅವ್ಯವಹಾರ ಇದಾಗಿದೆ.

ಅಕ್ಟೋಬರ್ 2018ರಲ್ಲಿ ನವೀನ್ ಜಿಂದಾಲ್ ಸೇರಿದಂತೆ 13 ಮಂದಿಗೆ ಜಾಮೀನು ಸಿಕ್ಕಿದೆ. ಜಾರಿ ನಿರ್ದೇಶನಾಲಯವು ಕಳೆದ ಜುಲೈನಲ್ಲಿ ಎಲ್ಲರ ವಿರುದ್ಧ ಚಾರ್ಜ್ ಶೀಟ್ ಹಾಕಿತ್ತು. ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ಸುಮಾರು 85 ಸಾವಿರ ಕೋಟಿ ರು. ಮೊತ್ತದ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪವಿದೆ. 2006ರಿಂದ ಆರಂಭವಾಗಿ ನಾಲ್ಕು ವರ್ಷಗಳಲ್ಲಿ 51 ಲಕ್ಷ ಕೋಟಿ ಮೌಲ್ಯದ 17 ಶತಕೋಟಿ ಮೆಟ್ರಿಕ್ ಟನ್ ಕಲ್ಲಿದ್ದಲು ಹೊಂದಿರುವ 73 ಬ್ಲಾಕ್ ಗಳನ್ನೂ 143 ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿತ್ತು. ಹಾಗಾಗಿ 2006ರಲ್ಲಿ 51, 2007ರಲ್ಲಿ 19, 2008ರಲ್ಲಿ 41 ಮತ್ತು 2009ರಲ್ಲಿ 32 ಕಂಪನಿಗಳು ಗಣಿ ಗುತ್ತಿಗೆ ಪಡೆದಿದ್ದವು ಎಂದು ಆರೋಪಿಸಲಾಗಿದೆ.

English summary
Congress leader and industrialist Naveen Jindal, an accused in a coal scam case, was on Wednesday granted exemption from personal appearance in the court till June 30, 2019, as he has to contest the upcoming Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X