ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ : ರಮ್ಯಾ ಟೀಂನ ಚಿರಾಗ್ ವಿರುದ್ಧ ಚಾರ್ಜ್ ಶೀಟ್

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣಗಳ ನಿರ್ವಹಣಾ ವಿಭಾಗದಲ್ಲಿದ್ದ ಚಿರಾಗ್ ಪಟ್ನಾಯಕ್ ವಿರುದ್ಧ ದೆಹಲಿಯ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದಾರೆ.

ಎಐಸಿಸಿ ಸಾಮಾಜಿಕ ಜಾಲ ತಾಣ ಹಾಗೂ ಡಿಜಿಟಲ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ತಂಡದ ಪ್ರಮುಖ ಸದಸ್ಯ ಚಿರಾಗ್ ಪಟ್ನಾಯಕ್ ಗೆ ಮತ್ತೆ ಸಂಕಟ ಶುರುವಾಗಿದೆ.

ಮಾಜಿ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಹೊತ್ತು, ಬಂಧಿತರಾಗಿದ್ದ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣಗಳ ದೆಹಲಿ ಘಟಕದ ಸಿಬ್ಬಂದಿಗೆ ಜಾಮೀನು ಸಿಕ್ಕಿತ್ತು.

ಈ ಬಗ್ಗೆ ಟ್ವೀಟ್ ಮಾಡಿದ್ದ ರಮ್ಯಾ, ಮಾಜಿ ಉದ್ಯೋಗಿ ಅವರ ಮೇಲಿನ ಆಪಾದನೆ ಬಗ್ಗೆ ಕಾಂಗ್ರೆಸ್ ಆಂತರಿಕವಾಗಿ ತನಿಖೆ ಕೈಗೊಳ್ಳಲಾಗಿದೆ. ಈ ಬಗ್ಗೆ ಸಮಿತಿಯನ್ನು ರಚಿಸಲಾಗಿದ್ದು, ದೂರಿನ ಅಂಶಗಳನ್ನು ಪರಿಗಣಿಸಿ, ಪಾರದರ್ಶಕ ತನಿಖೆ ನಡೆಸಲಾಗುತ್ತದೆ ಎಂದಿದ್ದರು.

ಲೈಂಗಿಕ ಕಿರುಕುಳ ಆರೋಪಿತ ಕಾಂಗ್ರೆಸ್ಸಿಗನಿಗೆ ಜಾಮೀನು, ರಮ್ಯಾ ಟ್ವೀಟ್ ಲೈಂಗಿಕ ಕಿರುಕುಳ ಆರೋಪಿತ ಕಾಂಗ್ರೆಸ್ಸಿಗನಿಗೆ ಜಾಮೀನು, ರಮ್ಯಾ ಟ್ವೀಟ್

ಆದರೆ, ಈಗ ದೆಹಲಿ ಪೊಲೀಸರು, ಚಿರಾಗ್ ವಿರುದ್ಧ ಪಟಿಯಾಲ್ ಕೋರ್ಟಿನಲ್ಲಿ ದೋಷಾರೋಪಣ ಪಟ್ಟಿ ದಾಖಲಿಸಿದ್ದಾರೆ. "ಸಂತ್ರಸ್ತ ಯುವತಿ ಲೈಂಗಿಕ ಕಿರುಕುಳದ ಬಗ್ಗೆ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರಿಗೆ ದೂರು ನೀಡಿದ್ದರೂ, ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ," ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಸುದ್ದಿಯೂ ಇದೆ.

ಮುಂದಿನ ವರ್ಷದಿಂದ ವಿಚಾರಣೆ

ಮುಂದಿನ ವರ್ಷದಿಂದ ವಿಚಾರಣೆ

ಕಳೆದ ವರ್ಷ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಚಿರಾಗ್ ಪಟ್ನಾಯಕ್ ಪರ ರಮ್ಯಾ ಅವರು ನಿಂತಿದ್ದಾರೆ. ಆಂತರಿಕ ತನಿಖೆ ನಡೆದಿದ್ದರೂ, ಇದರಿಂದ ಪ್ರಯೋಜನವಿಲ್ಲ, ತನಿಖೆ ವಿಳಂಬವಾಗುತ್ತಿದೆ. ಮುಂದಿನ ವರ್ಷ ಫೆಬ್ರವರಿಯಿಂದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಲಿದೆ. ಆದರೆ, ಪಟಿಯಾಲ ಕೋರ್ಟಿಗೆ ದೆಹಲಿ ಪೊಲೀಸರು ಸಲ್ಲಿಸಿರುವ ದೋಷಾರೋಪಣ ಪಟ್ಟಿಯಲ್ಲಿ ರಮ್ಯಾ, ರಾಹುಲ್ ಗಾಂಧಿ ಅವರ ಹೆಸರು ಉಲ್ಲೇಖಿಸಿರುವ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ರಮ್ಯಾ ಅವರು ಕೂಡಾ ಟ್ವೀಟ್ ಮಾಡಿಲ್ಲ.

ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ

ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ

ಏನಿದು ಪ್ರಕರಣ : ಚಿರಾಗ್ ಪಟ್ನಾಯಕ್ ಎಂಬ ವ್ಯಕ್ತಿ ರಮ್ಯಾ ಅವರ ಐಟಿ ಸೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವ್ಯಕ್ತಿ ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ತಮಗಾದ ನೋವಿನ ಬಗ್ಗೆ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅವರಿಗೂ ದೂರು ನೀಡಿದ್ದೆ. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಎಐಸಿಸಿ ಕುಂದು ಕೊರತೆಗಳ ವಿಭಾಗದ ಅರ್ಚನಾ ಅವರಿಗೂ ದೂರು ನೀಡಿದ್ದೆ.

ರಮ್ಯಾ ಅವರು ಯಾವುದೇ ಕ್ರಮ ಜರುಗಿಸಿಲ್ಲ

ರಮ್ಯಾ ಅವರು ಯಾವುದೇ ಕ್ರಮ ಜರುಗಿಸಿಲ್ಲ

ಆದರೆ, ಈ ಬಗ್ಗೆ ರಮ್ಯಾ ಅವರು ಯಾವುದೇ ಕ್ರಮ ಜರುಗಿಸದ ಕಾರಣ, ವಿಧಿ ಇಲ್ಲದೆ ಪೊಲೀಸರ ನೆರವು ಕೋರಿದ್ದೆ ಎಂದು ಸಂತ್ರಸ್ತೆ ಹೇಳಿದ್ದರು. ದೆಹಲಿಯ ನಾರ್ಥ್ ಅವಿನ್ಯೂ ಪೊಲೀಸ್ ಠಾಣೆಯಲ್ಲಿ ಚಿರಾಗ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 354 ಎ ಹಾಗೂ 509ರ ಅನ್ವಯ ಎಫ್ಐಆರ್ ಹಾಕಲಾಗಿದೆ. ಕಾಂಗ್ರೆಸ್ ನಲ್ಲಿರುವ ಆಂತರಿಕ ಸಮಿತಿ ಕೂಡಾ ತನಿಖೆ ನಡೆಸುತ್ತಿದೆ

ಬಿಜೆಪಿಯಿಂದ ವಾಗ್ದಾಳಿ

ರಮ್ಯಾ ಅವರು ಈ ಬಗ್ಗೆ ಕ್ರಮ ಜರುಗಿಸಿಲ್ಲ ಏಕೆ? ರಾಹುಲ್ ಗಾಂಧಿ ಅವರು ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದ್ದಾರೆ

English summary
Chirag Patnaik, has been accused of sexual harassment by ex-colleague. Patnaik was arrested in July as an ex-employee with the team had accused him of breaching her personal space and indulging in immoral behaviour. He was later released on bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X