Breaking; ಕೋವಿಡ್ ಪ್ರಕರಣ ಹೆಚ್ಚಳ; ಮಕ್ಕಳಿಗೆ ಎಷ್ಟು ಅಪಾಯ?
ನವದೆಹಲಿ, ಏಪ್ರಿಲ್ 21; "ನವದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಶೇ 99ರಷ್ಟು ಕೋವಿಡ್ ಹಾಸಿಗೆಗಳು ಖಾಲಿ ಇವೆ" ಎಂದು ಡಾ. ಸುರೇಶ್ ಕುಮಾರ್ ಹೇಳಿದರು.
ಗುರುವಾರ ಲೋಕ್ ನಾಯಕ್ ಜೈಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆ ಎಂಡಿ ಡಾ. ಸುರೇಶ್ ಕುಮಾರ್ ಮಾತನಾಡಿ, "ಎಲ್‌ಎನ್‌ಜೆಪಿಯ ಕೋವಿಡ್ ವಾರ್ಡ್‌ನಲ್ಲಿ 7 ಜನ ಸೋಂಕಿತರು ದಾಖಲಾಗಿದ್ದಾರೆ. 4 ತಿಂಗಳ ಮಗುವೊಂದು ಆಕ್ಸಿಜನ್ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ" ಎಂದರು.
"ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಒಂದು ವೇಳೆ ಪೋಷಕರು ಕೋವಿಡ್ ಲಸಿಕೆ ಪಡೆಯದಿದ್ದರೆ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ" ಎಂದು ಹೇಳಿದರು.

"ಮಕ್ಕಳು ಇನ್ನೂ ಲಸಿಕೆ ಪಡೆದಿಲ್ಲ. ಆದ್ದರಿಂದ 12 ವರ್ಷದೊಳಗಿನ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. ಎರಡು ವರ್ಷಗಳ ಕಾಲ ಶಾಲೆಗಳು ಮುಚ್ಚಿದ್ದವು, ಆದ್ದರಿಂದ ಮತ್ತೆ ಮುಚ್ಚಲು ಸಾಧ್ಯವಿಲ್ಲ. ಈಗಾಗಲೇ ಯಾವುದೇ ರೋಗವಿದ್ದರೆ ಅವರು ಕೋವಿಡ್ ಬಂದ ತಕ್ಷಣ ದಾಖಲಾಗಬೇಕು" ಎಂದು ಡಾ. ಸುರೇಶ್ ಕುಮಾರ್ ತಿಳಿಸಿದರು.
ಕೋವಿಡ್ ಹೊಸ ರೂಪಾಂತರಿ; ಹಲವು ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಇದು ಕೋವಿಡ್‌ನ ಹೊಸ ರೂಪಾಂತರಿಯೇ ಎಂಬ ಪ್ರಶ್ನೆ ಎದ್ದಿದೆ. ಆದರೆ ತಜ್ಞರು ಇದುವರೆಗೂ ಹೊಸ ತಳಿ ಬಗ್ಗೆ ನಿಖರವಾದ ಮಾಹಿತಿ ನೀಡಿಲ್ಲ.
ಕೇಂದ್ರ ಆರೋಗ್ಯ ಸಚಿವಾಲಯದ ಹೆಲ್ತ್ ಬುಲೆಟಿನ್ ಪ್ರಕಾರ ದೇಶದಲ್ಲಿ 2,380 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 13,433 ಆಗಿದೆ.












Click it and Unblock the Notifications