ವರ್ಲ್ಡ್ ಫುಡ್ ಇಂಡಿಯಾ : ತಯಾರಾಯ್ತು 800 ಕೆ.ಜಿ ಖಿಚ್ಡಿ

Posted By: Manjunatha
Subscribe to Oneindia Kannada

ನವದೆಹಲಿ, ನವೆಂಬರ್ 04: ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದ್ದ ವರ್ಲ್ಡ್ ಫುಡ್ ಇಂಡಿಯಾ ದ ಖಿಚ್ಡಿ ಕೊನೆಗೆ ತಯಾರಾಗಿದೆ. ಸ್ಟಾರ್ ಶೆಫ್ ಸಂಜೀವ್ ಕಪೂರ್ ಅವರ ಸಾರಥ್ಯದಲ್ಲಿ 800 ಕೆ.ಜಿ ಖಿಚ್ಡಿಯನ್ನು ತಯಾರಿಸಿ ಉತ್ತರ ಭಾರತದ ಜನಪ್ರಿಯ ಖಾದ್ಯಕ್ಕೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರೆಕಿಸುವ ಪ್ರಯತ್ನ ಮಾಡಲಾಗಿದೆ.

'ಹಿಂದಿ' ಖಿಚಡಿಗೆ ಉಪ್ಪಿಟ್ಟು, ಚಿತ್ರಾನ್ನ ಭಾರೀ ಪೈಪೋಟಿ!

1೦೦೦ ಲೀಟರ್ ಸಾಮರ್ಥ್ಯದ ಬೃಹತ್ ಪಾತ್ರೆಯಲ್ಲಿ ಬೆಂಕಿ ಇಲ್ಲದೆ ಹಬೆಯ ಸಹಾಯದಿಂದ ಕಿಚ್ಡಿಯನ್ನು ತಯಾರಿಸಿದ್ದು ವಿಶೇಷ. ಶೇಫ್ ಸಂಜೀವ್ ಕಪೂರ್ ನೇತೃತ್ವದಲ್ಲಿ 50 ಮಂದಿ ಬಾಣಸಿಗರು ಮತ್ತು ಕೆಲವು ವಿಐಪಿ ರಾಜಕಾರಣಿಗಳು, ಬಾಬಾಗಳು ಖಿಚ್ಡಿ ತಯಾರಿಕೆಯಲ್ಲಿ ಭಾಗವಹಿಸಿದ್ದರು.

ಖಿಚ್ಡಿ ತಯಾರಿಕೆಯಲ್ಲಿ ಭಾರತದ ಇತರ ಹೆಸರಾಂತ ಬಾಣಸಿಗರಾದ ರಣವೀರ್ ಬ್ರಾರ್, ಕನ್ವೀತ್ ಸಾವ್ನಿ, ಸಾರಾಂಶ್ ಗೋಯ್ಲಾ, ಇಮ್ತಿಯಾಜ್ ಖುರೇಶಿ ಅವರುಗಳು ಜೊತೆಯಾದರು.

800 ಕೆ.ಜಿ

800 ಕೆ.ಜಿ

ವಿಶ್ವ ದಾಖಲೆಯ ಉದ್ದೇಶದಿಂದಲೇ ಮುಂಚೆಯೇ ಯೋಜನೆ ರೂಪಿಸಿ 800 ಕೆ.ಜಿ ಖಿಚ್ಡಿ ತಯಾರಿಸಲಾಯಿತು. ಅಧಿಕಾರಿಗಳು ಸ್ಥಳದಲ್ಲಿಯೇ ಅದರ ತೂಕ ಮಾಪನ ಮಾಡಿಕೊಂಡರು.

ಬಾಬಾ ರಾಮ್ ದೇವ್ ಭಾಗಿ

ಬಾಬಾ ರಾಮ್ ದೇವ್ ಭಾಗಿ

ಖಿಚ್ಡಿ ತಯಾರಿಕೆಯಲ್ಲಿ ಯೋಗ ಗುರು ಬಾಬಾ ರಾಮ್ ದೇವ್, ಸಾದ್ವಿ ಜಿರಂಜನ್ ಜ್ಯೋತಿ ಭಾಗವಹಿಸಿ ತಾವೂ ಖಿಚ್ಡಿ ತಯಾರಿಕೆಯಲ್ಲಿ ಕೈ ಸೇರಿಸಿ ಶೆಫ್ ಸಂಜೀವ್ ಕಪೂರ್ ಗೆ ಸಹಾಯ ಮಾಡಿದರು. ಆಹಾರ ಪರಿಷ್ಕರಣಾ ಉದ್ಯಮ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರೂ ಬೃಹತ್ ಖಿಚ್ಡಿ ಪಾತ್ರೆಯಲ್ಲಿ ಸೌಟನ್ನಾಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಖಿಚ್ಡಿಯನ್ನು ರಾಷ್ಟ್ರೀಯ ಖಾದ್ಯವನ್ನಾಗಿ ಘೊಷಿಸುವ ಸಲುವಾಗಿಯೇ ವರ್ಲ್ಡ್ ಫುಡ್ ಇಂಡಿಯಾದಲ್ಲಿ ಅದನ್ನು ತಯಾರಿಸಲಾಗುತ್ತಿದೆ. ಈ ಮೂಲಕ ಉತ್ತರ ಭಾರತದ ಆಹಾರ ಸಂಸ್ಕೃತಿಯನ್ನು ಇಡೀಯ ದೇಶದ ಮೇಲೆ ಹೇರಲು ಪ್ರಯತ್ನ ಮಾಡಲಾಗುತ್ತಿದೆ ಎಂಬ ಚರ್ಚೆ ಸಾಮಾಜಿಕ ಜಾಳತಾಣದಲ್ಲಿ ಜೋರಾಗಿಯೇ ನಡೆಯಿತು. ಕೊನೆಗೆ ಆಹಾರ ಪರಿಷ್ಕರಣಾ ಉದ್ಯಮ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಖಿಚ್ಡಿಯನ್ನು ರಾಷ್ಟ್ರೀಯ ಆಹಾರವನ್ನಾಗಿ ಘೋಷಿಸುವುದಿಲ್ಲ ಎಂದು ಚರ್ಚೆಗೆ ತೆರೆ ಎಳೆದಿದ್ದರು.

ಸ್ಟಾರ್ ಶೇಪ್ ಸಂಜೀವ್ ಕುಮಾರ್

ಸ್ಟಾರ್ ಶೇಪ್ ಸಂಜೀವ್ ಕುಮಾರ್

ದಾಖಲೆಯ ಉದ್ದೇಶಕ್ಕಾಗಿಯೇ ಖಿಚ್ಡಿ ತಯಾರಿಸಲಾಗಿತ್ತಾದರೂ ಗುಣಮಟ್ಟ ಹಾಗೂ ರುಚಿಯಲ್ಲಿ ರಾಜಿ ಮಾಡಿಕೊಳ್ಳದಿರಲು ನಿರ್ಧರಿಸಿ, ಅಂತರರಾಷ್ಟ್ರೀಯ ಮಟ್ಟದ ಸ್ಟಾರ್ ಶೆಫ್ ಸಂಜೀವ್ ಕಪೂರ್ ಅವರಿಗೆ ಖಿಚ್ಡಿ ತಯಾರಿಸುವ ಜವಾಬ್ದಾರಿ ವಹಿಸಲಾಗಿತ್ತು. ಸಂಜೀವ್ ಕಪೂರ್ ಪೂರ್ಣ ತಯಾರಿ ನಡೆಸಿ ಖಿಚ್ಡಿ ತಯಾರಿಸಿ ಅತಿಥಿಗಳ ಕೈಲಿ ಭೇಷ್ ಎನಿಸಿಕೊಂಡಿದ್ದಾರೆ.

ವಿದೇಶಗರಿಗೂ ಖಿಚ್ಡಿ ರುಚಿ

ವಿದೇಶಗರಿಗೂ ಖಿಚ್ಡಿ ರುಚಿ

ಖಿಚ್ಡಿಯ ರುಚಿಯನ್ನು ಸ್ಥಳೀಯರು ಮಾತ್ರವಲ್ಲದೆ ವಿದೇಶದಿಂದ ಆಗಮಿಸಿದ್ದ ಪ್ರತಿನಿಧಿಗಳು, ಪ್ರೇಕ್ಷಕರು, ಆಹಾರ ಪ್ರಿಯರೂ ಸವಿದರು. ಒಟ್ಟಿನಲ್ಲಿ ಈ ಬೃಹತ್ ಪ್ರಮಾಣದ ಖಿಚ್ಡಿ ತಯಾರಿಕಾ ಕಾರ್ಯಕ್ರಮ ಖಿಚ್ಡಿಯನ್ನು ಭಾರತದ ಆಹಾರ ಎಂದು ನಿರೂಪಿಸುವ ಪ್ರಹಹಸನದಂತೆ ದಕ್ಷಿಣ ಭಾರತೀಯರಿಗೆ ಕಂಡಿದ್ದರೆ ಆಶ್ಚರ್ಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister of Food Processing Harsimrat Kaur Badal along with Sadhvi Jiranjan Jyoti, MoS for Food Processing, and Swami Ramdev cooked 'Khichdi' in a giant wok at the World Food India 2017 festival in New Delhi on Saturday to create a world record and popularise it as Brand India food.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ