ಕೇಜ್ರಿವಾಲ್ ಕೆಂಡ ಕಾರುತ್ತಿದ್ದ ಅಧಿಕಾರಿಯಿಂದಲೇ ಭ್ರಷ್ಟಾಚಾರದ ತನಿಖೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಮಾಡಿದ ಭ್ರಷ್ಟಾಚಾರ ಆರೋಪದ ತನಿಖೆ ನಡೆಸುವ ಅಧಿಕಾರಿ ಮುಕೇಶ್ ಕುಮಾರ್ ಮೀನಾ. ಈ ಅಧಿಕಾರಿ ವಿರುದ್ಧ ಆಪ್ ಹಾಗೂ ಕೇಜ್ರಿವಾಲ್ ವರ್ಷಗಳ ಕಾಲ ಭ್ರಷ್ಟಾಚಾರ ಆರೋಪ ಮಾಡಿದ್ದರು
ನವದೆಹಲಿ, ಮೇ 8: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಎರಡು ಕೋಟಿ ಲಂಚ ಪಡೆದ ಆರೋಪ ಕೇಳಿಬಂದಿದೆ. ಈ ಆರೋಪ ಮಾಡಿರುವುದು ಕೇಜ್ರಿವಾಲ್ ರ ಸಂಪುಟ ಸಹೋದ್ಯೋಗಿಯಾಗಿದ್ದ ಕಪಿಲ್ ಮಿಶ್ರಾ. ಈಚೆಗೆ ಅವರನ್ನು ಸಂಪುಟದಿಂದ ತೆಗೆದು ಹಾಕಲಾಗಿತ್ತು. ಆ ನಂತರ ಈ ಆರೋಪ ಮಾಡಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಈ ಪ್ರಕರಣವನ್ನು ಭ್ರಷ್ಟಾಚಾರ ವಿರೋಧಿ ದಳದ ಪೊಲೀಸರಿಗೆ ತನಿಖೆಗಾಗಿ ವಹಿಸಿದ್ದಾರೆ. ಅಂದಹಾಗೆ ಈಗ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿರುವವರು ಮುಕೇಶ್ ಕುಮಾರ್ ಮೀನಾ. ಇವರು ಯಾರೆಂದರೆ, ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಪದೇಪದೇ ಭ್ರಷ್ಟಾಚಾರ ಆರೋಪ ಹೊರಿಸಿ, ಗುರಿ ಮಾಡಿಕೊಂಡ ಅಧಿಕಾರಿ.[ಏನಿದು ಎಎಪಿ ಸರಕಾರವನ್ನೇ ನಡುಗಿಸಿದ 'ವಾಟರ್ ಟ್ಯಾಂಕರ್ ಸ್ಕ್ಯಾಮ್'?]

ಅದರೆ, ಆಮ್ ಆದ್ಮಿ ಪಕ್ಷ ಮಾತ್ರ ಮಿಶ್ರಾ ಆರೋಪವನ್ನು ಬಿಜೆಪಿಯ ಹುನ್ನಾರ ಅಂತ ಕರೆದಿದೆ. ಸಂಪುಟದಿಂದ ತೆಗೆದುಹಾಕಿದ ಸಿಟ್ಟಿಗೆ ಮಿಶ್ರಾ ಏನೇನೋ ಮಾತನಾಡುತ್ತಿದ್ದಾರೆ. "ಬಿಜೆಪಿ ಯಾವ ರೀತಿ, ಯಾವ ಆರೋಪ ಮಾಡಿತ್ತಲ್ಲಾ ಅದೇ ರೀತಿಯಲ್ಲೇ ಮಿಶ್ರಾ ಮಾತನಾಡುತ್ತಿದ್ದಾರೆ. ಆದ್ದರಿಂದ ಮಿಶ್ರಾ ಹಿಂದೆ ಬಿಜೆಪಿ ಇದೆ. ಹಾಗೂ ಅವರ ಆರೋಪ ಹಾಸ್ಯಾಸ್ಪದ" ಎಂದು ಆಪ್ ನ ಸಂಜಯ್ ಸಿಂಗ್ ಆರೋಪಿಸಿದ್ದಾರೆ.[ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ : ತನಿಖೆ ಆರಂಭ]
ಇನ್ನು ಭ್ರಷ್ಟಾಚಾರ ಆರೋಪದ ಬಗ್ಗೆ ಅರವಿಂದ್ ಕೇಜ್ರಿವಾಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಮ್ಯಾನುಯೆಲ್ ಮಕ್ರನ್ ಫ್ರೆಂಚ್ ಅಧ್ಯಕ್ಷರಾಗಿ ಆಯ್ಕೆ ಆದ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿ ಕೊನೆಯದಾಗಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದರು. ಸಚಿವ ಸತ್ಯೇಂದ್ರ ಜೈನ್ ನಿಂದ ಅರವಿಂದ್ ಕೇಜ್ರಿವಾಲ್ ಎರಡು ಕೋಟಿ ರುಪಾಯಿ ಲಂಚ ಪಡೆದಿದ್ದಾರೆ ಎಂದು ಮಿಶ್ರಾ ಆರೋಪಿಸಿದ್ದರು.
ಭ್ರಷ್ಟಾಚಾರ ವಿರೋಧಿ ನಿಗ್ರಹ ದಳ ಕಚೇರಿಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಮಿಶ್ರಾ, ಶೀಲಾ ದೀಕ್ಷಿತ್ ಆಡಳಿತಾವಧಿಯಲ್ಲಿ ನಡೆದಿದ್ದ ನಾಲ್ಕು ನೂರು ಕೋಟಿ ರುಪಾಯಿಯ ಟ್ಯಾಂಕರ್ ಹಗರಣದ ತನಿಖೆಯನ್ನು ಮುಂದೂಡುತ್ತಾ ಬಂದಿದ್ದಾರೆ ಕೇಜ್ರಿವಾಲ್ ಎಂದು ಮಾಧ್ಯಮಗಳಿಗೆ ಸಾಕ್ಷ್ಯ ಬಿಡುಗಡೆ ಮಾಡಿದರು. ಈ ಬಗ್ಗೆ ಸಿಬಿಐ ಜತೆಗೆ ಮಾತನಾಡುವುದಾಗಿ ಹೇಳಿದರು.[ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ : ತನಿಖೆ ಆರಂಭ]
ನನ್ನ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಯಲಿ. ಕೇಜ್ರಿವಾಲ್, ಸತ್ಯೇಂದರ್ ಹಾಗೂ ನನ್ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಿ ಎಂದು ಮಿಶ್ರಾ ಹೇಳಿದ್ದಾರೆ.












Click it and Unblock the Notifications