ಕೊರೊನಾ ಸೋಂಕಿನ ಪರೀಕ್ಷೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಕೇಂದ್ರ

ನವದೆಹಲಿ, ನವೆಂಬರ್ 10: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕ್ರಮೇಣ ಇಳಿಕೆಯಾಗುತ್ತಿವೆ. ಕಳೆದ ಮೂರು ವಾರಗಳಿಂದ ಪ್ರಕರಣಗಳು ಇಳಿಮುಖವಾಗಿವೆ. ಅಕ್ಟೋಬರ್ 18ರಂದು 7.94% ಇದ್ದ ಪ್ರಕರಣವು ನವೆಂಬರ್ 8ರಷ್ಟು ಹೊತ್ತಿಗೆ 7.19%ಗೆ ಇಳಿಕೆಯಾಗಿದೆ. ಆದರೆ ಆರೋಗ್ಯ ಸಚಿವಾಲಯಕ್ಕೆ ಈಗ ಮತ್ತೊಂದು ಆತಂಕ ಎದುರಾಗಿದೆ. ಕೆಲವು ರಾಜ್ಯಗಳಲ್ಲಿ ಪ್ರತಿದಿನ ನಡೆಸಲಾಗುತ್ತಿರುವ ಕೊರೊನಾ ಪರೀಕ್ಷೆಗಳ ಕುರಿತು ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.

Recommended Video

      Sira ByElection Result : ಫಲಿತಾಂಶಕ್ಕೆ ಹೆದರಿ ಹೀಗಾಯಿತು!! | Oneindia Kannada

      ಪಂಜಾಬ್, ಅಸ್ಸಾಂ, ರಾಜಸ್ಥಾನ ರಾಜ್ಯಗಳಲ್ಲಿ ದಿನನಿತ್ಯ ನಡೆಸಲಾಗುವ ಕೋವಿಡ್ ಪರೀಕ್ಷೆಗಳ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಹಿಮಾಚಲ ಪ್ರದೇಶದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವ ಕುರಿತು ಆತಂಕಗೊಂಡಿದೆ.

      ಇದರೊಂದಿಗೆ, ಚಳಿಗಾಲದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಂಭವದ ಕುರಿತೂ ಎಚ್ಚರಿಕೆ ನೀಡಿದೆ. ಇಷ್ಟೇ ಅಲ್ಲದೇ, ಸಾಲು ಸಾಲು ಹಬ್ಬಗಳು ಕೊರೊನಾ ವಿರುದ್ಧ ಹೋರಾಡಲು ಅಡೆತಡೆಯಾಗುವ ಸೂಚನೆಯನ್ನೂ ನೀಡಿದೆ.

      Centre Worries Decrease In Daily Coronavirus Tests At Some States

      ಮುಂದಿನ ಸೋಮವಾರ ಈ ಕುರಿತು ಹತ್ತು ರಾಜ್ಯಗಳೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಸಭೆ ನಡೆಸಲು ನಿರ್ಧರಿಸಿದ್ದು, ಅದರಲ್ಲಿ ಕೊರೊನಾ ನಿರ್ವಹಣೆಯ ಕಾರ್ಯವೈಖರಿಯ ಕುರಿತು ಚರ್ಚೆ ನಡೆಸಲಿದೆ. ಮಹಾರಾಷ್ಟ್ರ, ರಾಜಸ್ಥಾನ, ಕೇರಳ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಹರಿಯಾಣ, ಅಸ್ಸಾಂ, ಪಂಜಾಬ್ ಹಾಗೂ ಹಿಮಾಚಲ ಪ್ರದೇಶದೊಂದಿಗೆ ಚರ್ಚೆ ನಡೆಸಲಾಗುವುದಾಗಿ ತಿಳಿದುಬಂದಿದೆ.

      ಪಂಜಾಬ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಅನುಪಾತವು 3.15 ಇದ್ದು, ದೇಶದಲ್ಲಿಯೇ ಇದು ಅತ್ಯಧಿಕ ಎನ್ನಲಾಗಿದೆ. ಪಂಜಾಬ್ ನಲ್ಲಿ ಕಳೆದ ಎರಡು ವಾರಗಳಿಂದ ದಿನದ ಸರಾಸರಿ ಪರೀಕ್ಷೆ ಪ್ರಮಾಣದಲ್ಲೂ ಇಳಿಕೆಯಾಗಿದೆ. ಈ ಎಲ್ಲಾ ಅಂಶವನ್ನು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದಾಗಿ ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+