ಸುಪ್ರೀಂಕೋರ್ಟ್ ಅಂಗಳಕ್ಕೆ ಸಿಬಿಐ ಸ್ಥಾಪನೆ ವಿವಾದ

ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಗುಹವಾತಿ ಹೈಕೋರ್ಟ್ ನೀಡಿರುವ ತೀರ್ಪಿಗೆ ತೆರಯಾಜ್ಞೆ ನೀಡಬೇಕೆಂದು ಮನವಿ ಮಾಡಿದೆ. ಆದರೆ, ಸದ್ಯ ಸುಪ್ರೀಂಕೋರ್ಟ್ ಗೆ ದೀಪಾವಳಿ ರಜೆ ಇರುವುದರಿಂದ ಸೋಮವಾರದ ನಂತರ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ನ್ಯಾಯಾಲಯ ರಜೆಯಲ್ಲಿದ್ದರೂ ವಿಶೇಷ ಪ್ರಕರಣದ ಎಂದು ಪರಿಗಣಿಸಿ ಮುಖ್ಯನ್ಯಾಯಮೂರ್ತಿಗಳು ಅರ್ಜಿಯ ವಿಚಾರಣೆ ನಡೆಸಬಹದು. ಆದರೆ, ಈ ಕುರಿತ ಅಂತಿಮ ನಿರ್ಧಾರ ಅವರದ್ದಾಗಿರುತ್ತದೆ. ಆದ್ದರಿಂದ ಶನಿವಾರ ಕೇಂದ್ರ ಸರ್ಕಾರದ ಅರ್ಜಿ ವಿಚಾರಣೆ ನಡೆಯುವ ಸಾದ್ಯತೆ ಕಡಿಮೆ ಇದೆ.
ಸುಪ್ರೀಂಕೋರ್ಟ್ ಗುಹವಾತಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವ ತನಕ ಸಿಬಿಐ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸುವಂತಿಲ್ಲ ಮತ್ತು ಯಾರನ್ನು ಬಂಧಿಸುವಂತಿಲ್ಲ. ಆದ್ದರಿಂದ ಸಿಬಿಐ ವಿಚಾರಣೆಗೆ ತೀವ್ರ ಹಿನ್ನಡೆ ಉಂಟಾಗಲಿದೆ. ನ್ಯಾಯಾಲಯ ತಡೆಯಾಜ್ಞೆ ನೀಡಿದರೆ, ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ತಾತ್ಕಾಲಿಕ ಸಮಾಧಾನ ದೊರೆಯಲಿದೆ.
ಆದೇಶವೇನು : ಗುರುವಾರ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಗುಹವಾತಿ ಹೈಕೋರ್ಟ್ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ರಚನೆ ಸಂವಿಧಾನ ಬದ್ಧವಲ್ಲ ಎಂದು ಆದೇಶ ನೀಡಿತ್ತು. ಸಿಬಿಐ ಸ್ಥಾಪನೆಯೇ ಅಸಂವಿಧಾನಿಕವಾಗಿದ್ದು, ಅದು ನಡೆಸುವ ಎಲ್ಲ ತನಿಖೆಗಳು ಕಾನೂನು ಬದ್ಧವಲ್ಲ ಎಂದು ತೀರ್ಪಿನಲ್ಲಿ ತಿಳಿಸಿತ್ತು. (ಸಿಬಿಐ ರಚನೆಯೇ ಸಂವಿಧಾನಬಾಹಿರ: ಹೈಕೋರ್ಟ್)












Click it and Unblock the Notifications