ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಮಂತ ಉದ್ಯಮಿ ಅದಾನಿಗೆ ಝಡ್ ಶ್ರೇಣಿಯ ಭದ್ರತೆ ನೀಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಆಗಸ್ಟ್ 17: ದೇಶದ ಶ್ರೀಮಂತ ಉದ್ಯಮಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಗೆ ಕೇಂದ್ರ ಸರ್ಕಾರ ಝಡ್ ಶ್ರೇಣಿಯ ವಿಐಪಿ ಭದ್ರತೆ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ಸರಿಸುಮಾರು 130.2 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಅದಾನಿಗೆ, ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಭದ್ರತಾ ಏಜೆನ್ಸಿಗಳು ಸಂಗ್ರಹಿಸಿದ ಮಾಹಿತಿ ವಿಶ್ಲೇಷಣೆಯ ಆಧಾರದ ಮೇಲೆ ಸಿಆರ್‍‌ಪಿಎಫ್‌ (CRPF) ಕಮಾಂಡೋಗಳ ಭದ್ರತಾ ರಕ್ಷಣೆಯನ್ನು ನೀಡಲಾಯಿತು.

ಅಂಬಾನಿ ವರ್ಸಸ್ ಅದಾನಿ; ಏನಾಗುತ್ತಿದೆ ಇಬ್ಬರ ಮಧ್ಯೆ?ಅಂಬಾನಿ ವರ್ಸಸ್ ಅದಾನಿ; ಏನಾಗುತ್ತಿದೆ ಇಬ್ಬರ ಮಧ್ಯೆ?

ಪಾವತಿ ಆಧಾರದ ಮೇಲೆ ಝಡ್ ಶ್ರೇಣಿಯ ಭದ್ರತೆ ಇರುತ್ತದೆ. ತನ್ನ ಭದ್ರತೆಗಾಗಿ ಅದಾನಿ ಪ್ರತಿ ತಿಂಗಳು 15 ರಿಂದ 20 ಲಕ್ಷ ರುಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.

Centre Grants Z category Security To Billionaire industrialist Gautam Adani

ಭದ್ರತಾ ಶ್ರೇಣಿಗಳನ್ನು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ, ಎಕ್ಸ್ (X), ವೈ (Y), ವೈ ಪ್ಲಸ್ (Y Plus), ಝಡ್ (Z), ಝಡ್ ಪ್ಲಸ್ (Z Plus) ಮತ್ತು ವಿಶೇಷ ಸಂರಕ್ಷಣಾ ಗುಂಪು (SPG). ಪ್ರಧಾನ ಮಂತ್ರಿ ಮತ್ತು ಅವರ ಹತ್ತಿರದ ಕುಟುಂಬ ಮಾತ್ರ ಎಸ್‌ಪಿಜಿ ಭದ್ರತೆ ಪಡೆಯಲು ಅರ್ಹರಾಗಿರುತ್ತಾರೆ.

ಅದಾನಿ ಭದ್ರತೆಗೆ 30 ಸಿಬ್ಬಂದಿ ನಿಯೋಜನೆ

ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಬೆದರಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ಇತರ ಕೆಟಗರಿಯ ರಕ್ಷಣೆಯನ್ನು ನೀಡುವ ಅವಕಾಶ ಇದೆ. ಝಡ್ ಕೆಟಗೆರಿ ಭದ್ರತೆಯು ಆರೋಗ್ಯಕರ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ, ಕನಿಷ್ಠ 4 ರಿಂದ 5 ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿಯ ತಂಡ ಅದಾನಿಗೆ ಭದ್ರತೆ ನೀಡಲಿದೆ.

ಇದು ಭಾರತದ ಮೂರನೇ ಅತ್ಯುನ್ನತ ಮಟ್ಟದ ಭದ್ರತೆಯಾಗಿದೆ ಮತ್ತು ಹೆಚ್ಚಿನ ಭದ್ರತಾ ಅಪಾಯದಲ್ಲಿರುವ ಜನರಿಗೆ ನೀಡಲಾಗುತ್ತದೆ. ಅದಾನಿ ಭದ್ರತೆಗಾಗಿ 30ಕ್ಕೂ ಹೆಚ್ಚು ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ವರದಿಗಳು ತಿಳಿಸಿವೆ.

Centre Grants Z category Security To Billionaire industrialist Gautam Adani

ಅಹಮದಾಬಾದ್ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾದ ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುವ 60 ವರ್ಷ ವಯಸ್ಸಿನ ಬಿಲಿಯನೇರ್ ಅದಾನಿ ರಕ್ಷಣಾ ವೆಚ್ಚವನ್ನು ಭರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂಬಾನಿ ಮತ್ತು ಪತ್ನಿಗೂ ಭದ್ರತೆ

ಕೇಂದ್ರ ಸರ್ಕಾರವು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಖೇಶ್ ಅಂಬಾನಿಗೆ 2013 ರಲ್ಲಿ ಸಿಆರ್‍‌ಪಿಎಫ್‌ (CRPF) ಕಮಾಂಡೋಗಳ ಝಡ್‌ ಪ್ಲಸ್ (Z Plus) ಶ್ರೇಣಿಯ ಭದ್ರತೆಯನ್ನು ನೀಡಿತು, ಅವರ ಪತ್ನಿ ನೀತಾ ಅವರಿಗೂ 'ಝಡ್ ಕೆಟಗರಿ' ಭದ್ರತೆಯನ್ನು ನೀಡಲಾಗಿತ್ತು. ಕೈಗಾರಿಕೋದ್ಯಮಿ ಮತ್ತು ಅವರ ಪತ್ನಿ ತಮ್ಮ ಭದ್ರತೆಗಾಗಿ ಆಯಾ ಪಡೆಗಳಿಗೆ ಮಾಸಿಕ ಆಧಾರದ ಮೇಲೆ ಪಾವತಿಸುತ್ತಾರೆ.

English summary
The Centre has granted businessman and Adani Group Chairman Gautam Adani 'Z' category VIP security protection, PTI reported. The 'Z' security cover will be on a "payment basis" and will cost around Rs 15-20 lakh per month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X