ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗುಪ್ತಚರ ಇಲಾಖೆ ಮತ್ತು ರಾ ಮುಖ್ಯಸ್ಥರ ಅಧಿಕಾರವಧಿ ವಿಸ್ತರಣೆ

|
Google Oneindia Kannada News

ನವದೆಹಲಿ, ಮೇ 27: ಭಾರತದ ಗುಪ್ತಚರ ಇಲಾಖೆ ನಿರ್ದೇಶಕ ಅರವಿಂದ್ ಕುಮಾರ್ ಹಾಗೂ ರಿಸರ್ಚ್ ಆಂಡ್ ಅನಾಲಿಸಸ್ ವಿಂಗ್ (RAW) ಕಾರ್ಯದರ್ಶಿ ಸಮಂತ್ ಕುಮಾರ್ ಗೋಯೆಲ್ ಅಧಿಕಾರವಧಿಯನ್ನು ಮುಂದಿನ ಒಂದು ವರ್ಷದವರೆಗೂ ವಿಸ್ತರಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಬ್ಬರು ಅಧಿಕಾರಿಗಳ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. 1984 ರ ಬ್ಯಾಚ್‌ನ ಇಬ್ಬರು ಐಪಿಎಸ್ ಅಧಿಕಾರಿಗಳು ಕ್ರಮವಾಗಿ ಪಂಜಾಬ್ ಮತ್ತು ಅಸ್ಸಾಂ-ಮೇಘಾಲಯದವರಾಗಿದ್ದು, 2022ರ ಜೂನ್ 30 ರಂದು ನಿವೃತ್ತರಾಗುತ್ತಾರೆ.

ಸಮಂತ್ ಗೋಯೆಲ್ RAW, ಅರವಿಂದ್ ಕುಮಾರ್ ಗುಪ್ತಚರ ಇಲಾಖೆ ಚೀಫ್ಸಮಂತ್ ಗೋಯೆಲ್ RAW, ಅರವಿಂದ್ ಕುಮಾರ್ ಗುಪ್ತಚರ ಇಲಾಖೆ ಚೀಫ್

ಎರಡು ಗುಪ್ತಚರ ಇಲಾಖೆಯಲ್ಲಿ ಇಬ್ಬರು ಅಧಿಕಾರಿಗಳ ಕಾರ್ಯವೈಖರಿ ಮತ್ತು ಇಲಾಖೆಯ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಧಿಕಾರ ವಿಸ್ತರಿಸಲಾಗಿದೆ. ಸಮಂತ್ ಕುಮಾರ್ ಗೋಯೆಲ್ ಶ್ರಮ ಹಾಗೂ ಸಹಕಾರ ಕಾರ್ಯಾಚರಣೆ ಮನೋಭಾವ ಹೊಂದಿರುವ ವ್ಯಕ್ತಿಯಾಗಿದ್ದು, ಅರವಿಂದ್ ಕುಮಾರ್ ರಾಜಕಾರಣದಲ್ಲಿ ಆಂತರಿಕ ಪರಿಸ್ಥಿತಿಗಳ ಸೂಕ್ಷ್ಮತೆಗಳನ್ನು ಅರಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ.

Central Govt Extends Tenures Of Both RAW And IB Chiefs By One Year

ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ:

ಗುಪ್ತಚರ ಇಲಾಖೆ (ಐಬಿ) ಮತ್ತು RAW ಸಂಸ್ಥೆಯ ಮುಖ್ಯಸ್ಥರು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ನಿರ್ದೇಶನದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. RAW ಕಾರ್ಯ ಚಟುವಟಿಕೆಗಳ ಬಗ್ಗೆ ಕೇಂದ್ರ ಸರ್ಕಾರಿ ಬಿಗಿ ನಿಲುವು ಹೊಂದಿದ್ದು, ಗುಪ್ತಚರ ಇಲಾಖೆಯು ರಾಜಕೀಯ ಪ್ರತಿಭಟನೆ, ನಕ್ಸಲರು ಮತ್ತು ಉಗ್ರ ಚಟುವಟಿಕೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಿದೆ.

English summary
Central Govt Extends Tenures Of Both Research And Analysis Wing And Intelligence Bureau Chiefs By One Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X