ಚಿದಂಬರಂ ವಿಚಾರಣೆ ಮುಗಿಸಿದ ಸಿಬಿಐ: ಮುಂದೇನು?
ನವದೆಹಲಿ, ಸೆಪ್ಟೆಂಬರ್ 03: ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರ ವಿಚಾರಣೆಯನ್ನು ಸಿಬಿಐ ಮುಗಿಸಿದ್ದು, ಇಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
'ನಮ್ಮ ವಿಚಾರಣೆ ಮುಗಿದಿದ್ದು, ನಮ್ಮ ವಶದಲ್ಲಿ ಚಿದಂಬರಂ ಅವರು ಇರುವ ಅಗತ್ಯತೆ ಇನ್ನು ಇಲ್ಲ ಎಂದು ಸಿಬಿಐ ಹೇಳಿದೆ. ಅಷ್ಟೆ ಅಲ್ಲದೆ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲು ಶಿಫಾರಸು ಮಾಡಿದೆ.
ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಸುಪ್ರೀಂನಿಂದ ರಿಲೀಫ್
ಆದರೆ ಸುಪ್ರೀಂಕೋರ್ಟ್, ಸೆಪ್ಟೆಂಬರ್ 5 ರವರೆಗೆ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿದೆ. ಹಾಗಾಗಿ ಸೆಪ್ಟೆಂಬರ್ 5 ರ ನಂತರ ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಕಳುಹಿಸುವ ಸಾಧ್ಯತೆ ಇದೆ. ಆದರೆ ಆ ಒಳಗಾಗಿ ಅವರಿಗೆ ಜಾಮೀನು ಸಿಕ್ಕರೂ ಅಚ್ಚರಿ ಇಲ್ಲ.
ಮತ್ತೊಂದೆಡೆ ಇಡಿ ಸಹ ಚಿದಂಬರಂ ಅವರನ್ನು ತಮ್ಮ ವಶಕ್ಕೆ ಕೇಳಿದ್ದು, ಅವರಿಗೆ ಸೆಪ್ಟೆಂಬರ್ 5 ರವರೆಗೆ ಇಡಿ ವಶಕ್ಕೆ ನೀಡಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸೆಪ್ಟೆಂಬರ್ 5 ರ ನಂತರ ವಶಕ್ಕೆ ನೀಡುವ ಸಾಧ್ಯತೆ ಇದೆ.