ಸಿಬಿಐ ವಿವಾದ: ಮುಚ್ಚಿದ ಲಕೋಟೆಯಲ್ಲಿ ಪ್ರತಿಕ್ರಿಯೆ ಸಲ್ಲಿಸಿದ ಅಲೋಕ್ ವರ್ಮಾ
ನವದೆಹಲಿ, ನವೆಂಬರ್ 19: ಸಿಬಿಐನ ಉಚ್ಚಾಟಿತ ನಿರ್ದೇಶಕ ಅಲೋಕ್ ಕುಮಾರ್ ತಮ್ಮ ವಿರುದ್ಧ ಕೇಂದ್ರ ಜಾಗ್ರತಾ ದಳ (ಸಿವಿಸಿ) ನೀಡಿರುವ ತನಿಖಾ ವರದಿ ಕುರಿತು ತಮ್ಮ ಪ್ರತಿಕ್ರಿಯೆಯನ್ನು ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ.
ಅಲೋಕ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪದ ಕುರಿತು ಸಿವಿಸಿ ವರದಿಯನ್ನು ಪರಿಶೀಲಿಸಿದ್ದ ಸುಪ್ರೀಂಕೋರ್ಟ್, ವರದಿ ಕುರಿತಂತೆ ಪ್ರತಿಕ್ರಿಯೆಯನ್ನು ಸೋಮವಾರ ಮಧ್ಯಾಹ್ನ 1 ಗಂಟೆಯ ಒಳಗೆ ಸಲ್ಲಿಸುವಂತೆ ಸೂಚಿಸಿತ್ತು.
ಅಲೋಕ್ ವರ್ಮಾ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದರು. ಬೇಗನೆ ಸಲ್ಲಿಕೆ ಮಾಡುವಂತೆ ಸೂಚಿಸಿದ ಕೋರ್ಟ್, ವಿಚಾರಣೆಗೆ ಇನ್ನಷ್ಟು ಸಮಯ ನೀಡುವತೆ ಮನವಿ ಮಾಡಿದರು. ಮಂಗಳವಾರ ನಿಗದಿತ ಸಮಯದಲ್ಲಿ ವಿಚಾರಣೆ ನಡೆಯಲಿದೆ ಎಂದ ಕೋರ್ಟ್, ಮುಂದೂಡಲು ಒಪ್ಪಲಿಲ್ಲ.

ನ್ಯಾಯಾಲಯದಿಂದ ಸ್ವಲ್ಪ ಸಮಯ ಕೋರಿದ್ದರೂ, ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿಗೆ ಮುಚ್ಚಿದ ಲಕೋಟೆಯಲ್ಲಿ ಪ್ರತಿಕ್ರಿಯೆ ಸಲ್ಲಿಸಲಾಯಿತು ಎಂದು ವರ್ಮಾ ಪರ ವಕೀಲ ಗೋಪಾಲ್ ಶಂಕರನಾರಾಯಣನ್ ತಿಳಿಸಿದರು.
ಲಂಚ ಪಡೆದ ವಿವಾದಕ್ಕೆ ಸಂಬಂಧಿಸಿದಂತೆ ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಿರುದ್ಧ ಕೇಂದ್ರ ಜಾಗ್ರತಾ ದಳ ನೀಡಿರುವ ವರದಿಯು ಮಿಶ್ರ ಮಾಹಿತಿಗಳನ್ನು ಒಳಗೊಂಡಿದ್ದು, ಕೆಲವು ಆರೋಪಗಳ ಕುರಿತು ಹೆಚ್ಚಿನ ವಿಚಾರಣೆ ನಡೆಯಬೇಕಿದೆ ಎಂಬ ಅಭಿಪ್ರಾಯ ತಿಳಿಸಿರುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು.












Click it and Unblock the Notifications