ಜೆಎನ್ ಯು ವಿದ್ಯಾರ್ಥಿ ನಾಪತ್ತೆ, ಮಾಹಿತಿ ನೀಡಿದವರಿಗೆ 10 ಲಕ್ಷ ಬಹಮಾನ

Posted By:
Subscribe to Oneindia Kannada

ನವದೆಹಲಿ, ಜೂನ್ 30 : ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್ ಯು)ದ ವಿದ್ಯಾರ್ಥಿ ನಜೀಬ್ ಅಹ್ಮದ್‌ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯು ನಜೀಂ ಅಹ್ಮದ್ ಕುರಿತು ಮಾಹಿತಿ ನೀಡಿದರೆ 10 ಲಕ್ಷ ಬಹಮಾನ ನೀಡುವುದಾಗಿ ಘೋಷಿಸಿದೆ.

2016ರ ಅಕ್ಟೋಬರ್ 16ರಂದು ಕಣ್ಮರೆಯಾಗಿದ್ದ ನಜೀಬ್ ಅಹ್ಮದ್‌ ನ ಪತ್ತೆಗಾಗಿ ದೆಹಲಿ ಪೊಲೀಸರು ಎಷ್ಟೇ ಪ್ರಯತ್ನಿಸಿದರು ಪತ್ತೆ ಪಚ್ಚಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ತನ್ನ ಮಗನನ್ನು ಹುಡುಕುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನಜೀಬ್ ತಾಯಿ ಹೈಕೋರ್ಟ್ ನಲ್ಲಿ ಅಲವತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು.

ನಕ್ಸಲರ ದಾಳಿ ಹಿಂದೆ ಜೆಎನ್ ಯು ವಿವಿಯ ಪಿತೂರಿ?

CBI Announces Rs 10 Lakh in Reward For Info on Missing JNU Student Najeeb Ahmed

ಅಲ್ಲದೆ ಪ್ರಕರಣದ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತ್ತು. ದೆಹಲಿ ಪೊಲೀಸರು ಸಹ ಈ ಹಿಂದೆ ನಜೀಬ್ ಅಹ್ಮದ್ ಮಾಹಿತಿಗಾಗಿ 1 ಲಕ್ಷ ಬಹುಮಾನ ಘೋಷಿಸಿತ್ತು.

ಜೂನ್ ನಲ್ಲಿ ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿರುವ ಸಿಬಿಐ ತನಿಖೆ ನಡೆಸುತ್ತಿದೆ. ಆತನ ಸುಳಿವು ಸಿಗದ ಕಾರಣ ಇದೀಗ ಸಿಬಿಐ ಸಹ ಆತನ ಮಾಹಿತಿಗಾಗಿ ಬಹುಮಾನ ಘೋಷಿಸಿದೆ. 011-24368641, 24368638, 24368634 and 9650394796, ಒಂದು ಮಾಹಿತಿ ಸಿಕ್ಕರೆ ಈ ನಂಬರ್ ಗಳಿಗೆ ಸಂಪರ್ಕಿಸಿ ಎಂದು ಕೋರಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The CBI on Thursday announced a reward of Rs 10 lakh for anyone giving whereabouts of Jawaharlal Nehru University (JNU) student Najeeb Ahmed, who is missing for over eight months now. People willing to share any information on the whereabouts of Najeeb can contact the CBI investigators on 011-24368641 said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ